English Manja Teaser: ಪ್ರಮೋದ್ ಚಿತ್ರದ ಟೀಸರ್ ರಿಲೀಸ್ ಮಾಡಿದ ದುನಿಯಾ ಸೂರಿ!
ಆ್ಯಕ್ಷನ್, ರೌಡಿಸಂ ಹಾಗೂ ಸ್ನೇಹದ ಸುತ್ತ ಸಾಗುವ 'ಇಂಗ್ಲಿಷ್ ಮಂಜ' ಚಿತ್ರದ ಶೂಟಿಂಗ್ ಮುಗಿದಿದ್ದು, ದುನಿಯಾ ಸೂರಿ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಇದರಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆ.
'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ನಟ ಪ್ರಮೋದ್ (Pramod) 'ಮತ್ತೆ ಉದ್ಭವ', 'ಪ್ರೀಮಿಯರ್ ಪದ್ಮಿನಿ' ಚಿತ್ರಗಳಲ್ಲಿ ಚುರುಕಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡ 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಉಡಾಳ್ ಬಾಬು ಪಾತ್ರದಲ್ಲಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ಇದೀಗ ನಟ ಪ್ರಮೋದ್ 'ಇಂಗ್ಲಿಷ್ ಮಂಜ' (English Manja) ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಇವರ ಹುಟ್ಟುಹಬ್ಬದಂದು ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ವಿಶೇಷವಾಗಿ ಈ ಚಿತ್ರದ ಟೀಸರ್‌ನ್ನು ಸ್ಯಾಂಡಲ್‍ವುಡ್‌ನ ಸ್ಟಾರ್ ಡೈರೆಕ್ಟರ್ ದುನಿಯಾ ಸೂರಿ (Duniya Suri) ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
2020ರಲ್ಲಿ ಸೆಟ್ಟೇರಿದ್ದ 'ಇಂಗ್ಲಿಷ್ ಮಂಜ' ಪಕ್ಕಾ ಆ್ಯಕ್ಷನ್, ರೌಡಿಸಂ ಹಿನ್ನೆಲೆಯುಳ್ಳ ಚಿತ್ರವಾಗಿದ್ದು, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಟೈಟಲ್ ಮೂಲಕವೇ ಒಂದು ಹಂತದ ಕುತೂಹಲವನ್ನು ಸಿನಿಮಂದಿಯಲ್ಲಿ ಮೂಡಿಸಿದ್ದ ಈ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ಕ್ಯೂರಿಯಾಸಿಟಿ ಲೆವೆಲ್ ಇನ್ನಷ್ಟು ಹೆಚ್ಚಿಸಿದೆ. ಟೀಸರ್ ಝಲಕ್ ಹಾಗೂ ಟೈಟಲ್ ನೋಡಿ ಸಖತ್ ಇಂಪ್ರೆಸ್ ಆಗಿರುವ ದುನಿಯಾ ಸೂರಿ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. 'ಕೋಲಾರ' ಚಿತ್ರವನ್ನು ನಿರ್ದೇಶಿಸಿದ್ದ ಆರ್ಯ.ಎಂ.ಮಹೇಶ್ (Arya M Mahesh) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಸಿನಿಮಾ. ವಿಶೇಷವಾಗಿ ಈ ಚಿತ್ರದಲ್ಲಿ 15 ಮಂದಿ ನಿರ್ದೇಶಕರು ನಟಿಸಿದ್ದಾರೆ.
Alankar Vidyarthi: ಪ್ರಮೋದ್ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಕ್ಲ್ಯಾಪ್
ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ 'ಇಂಗ್ಲಿಷ್ ಮಂಜ' ಚಿತ್ರದಲ್ಲಿದ್ದು ಅದರೊಂದಿಗೆ ಬ್ಯೂಟಿಫುಲ್ ಲವ್‌ಸ್ಟೋರಿ ಚಿತ್ರದಲ್ಲಿದೆ. ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಚಿತ್ರದಲ್ಲಿ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ (Tejaswini Sharma) ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಸುನೀಲ್ ಪುರಾಣಿಕ್, ವಿ.ನಾಗೇಂದ್ರ ಪ್ರಸಾದ್, ವಿಕ್ಟರಿ ವಾಸು, ನಾಗೇಂದ್ರ ಅರಸ್ ಒಳಗೊಂಡ ಅನುಭವಿ ಕಲಾವಿದರ ತಾರಾಬಳಗ ಚಿತ್ರದಲ್ಲಿದೆ. ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಡೇವಿಡ್.ಆರ್ (David R) ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ಆರ್.ಹೇಮಂತ್ ಕುಮಾರ್ ಸಂಗೀತ ಸಂಯೋಜನೆ, ರಂಗಸ್ವಾಮಿ ಕ್ಯಾಮೆರಾ ಕೈಚಳಕ, ಕೆ.ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.
ನನ್ನ ಹುಟ್ಟು ಹಬ್ಬಕ್ಕೆ ಮತ್ತೊಂದು ಹೊಸ ಸಿನಿಮಾ ಒಪ್ಪಿರುವೆ. ಇದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮುನಿಗೌಡ ನಿರ್ಮಾಣದಲ್ಲಿ ಈ ಹಿಂದೆ ‘ರಾಜರು’ ಎನ್ನುವ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಮೂಲಿಮನೆ (Girish Moolimane) ನಿರ್ದೇಶನದ ಚಿತ್ರವಿದು. ಇವುಗಳ ಜತೆಗೆ ಮತ್ತೆ ಶ್ರುತಿ ನಾಯ್ಡು (Shruti Naidu) ನಿರ್ಮಾಣ, ರಮೇಶ್ ಇಂದಿರಾ (Ramesh Indira) ನಿರ್ದೇಶನದ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಜುಲೈ ತಿಂಗಳಲ್ಲಿ ಇದರ ಚಿತ್ರೀಕರಣ ಆರಂಭವಾಗಲಿದೆ. ಹಾಗೂ ಹೆಸರಿಡದ ನನ್ನ ನಟನೆಯ ಮತ್ತೊಂದು ಚಿತ್ರದ ಶೂಟಿಂಗ್ ಈಗಾಗಲೇ ನಡೆಯುತ್ತಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.
Actor Pramod: ಪ್ರೀಮಿಯರ್ ಪದ್ಮಿನಿ ಹುಡುಗನ ಕೈಯಲ್ಲಿ 6 ಚಿತ್ರಗಳು
ಇನ್ನು ಪ್ರಮೋದ್ 'ಅಲಂಕಾರ್ ವಿದ್ಯಾರ್ಥಿ' (Alankar Vidyarthi) ಎಂಬ ಸಿನಿಮಾದಲ್ಲೂ ಕಾಲೇಜು ಹುಡುಗನಾಗಿ ನಟಿಸುತ್ತಿದ್ದಾರೆ. ಕೇಶವ್ ಎಸ್ ಇಂಡಲವಾಡಿ (Keshav S Indlavadi) ನಿರ್ದೇಶನದ ಚಿತ್ರವಿದು. ಇಲ್ಲಿಯವರೆಗೆ ನಾನು ಫುಲ್ ಕಾಮಿಡಿ ಇರುವ ಸಿನಿಮಾದಲ್ಲಿ ನಟಿಸಿರಲಿಲ್ಲ. ಈ ಕಾರಣಕ್ಕೆ ಈ ಚಿತ್ರ ಒಪ್ಪಿಕೊಂಡೆ. ಪೂರ್ಣ ಕಾಲೇಜು ಸ್ಟೋರಿ ಇರುವ ಚಿತ್ರದಲ್ಲಿ ಮಿಸ್ಟರಿ ಕೂಡ ಇದೆ. ಫ್ರೆಂಡ್‌ಶಿಪ್‌ನಲ್ಲಿರುವ ಫನ್, ಲವ್ ಎಲ್ಲಇವೆ' ಎಂದು ಪ್ರಮೋದ್ ಹೇಳಿದ್ದಾರೆ. 'ಅಲಂಕಾರ್ ವಿದ್ಯಾರ್ಥಿ' ಚಿತ್ರಕ್ಕೆ 'ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್ ಜಾಸ್ತಿ' ಎಂಬ ಟ್ಯಾಗ್‌ಲೈನ್ ಇದ್ದು, ಅರ್ಚನಾ ಕೊಟ್ಟಿಗೆ (Archana Kottige) ಪ್ರಮೋದ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.