Asianet Suvarna News Asianet Suvarna News

ವಿಷ್ಣುವರ್ಧನ್ ಸ್ಮಾರಕ ಮುಂದಿನ ಸೆಪ್ಟೆಂಬರ್‌ಗೆ ಮುಗಿಯುತ್ತೆ: ಅನಿರುದ್ಧ್

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಮಾಡಲು ಇಷ್ಟು ವರ್ಷ ತೆಗೆದುಕೊಳ್ಳುತ್ತಿರುವುದು ಯಾಕೆ? ನಟ ಅನಿರುದ್ಧ ಉತ್ತರ....

Kannada actor Aniruddha Jatkar talks about Dr Vishnuvardhan memorial construction vcs
Author
Bangalore, First Published Nov 11, 2021, 2:50 PM IST

ಕನ್ನಡ ಚಿತ್ರರಂಗದ (Sandalwood) ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Dr. Vishnuvardhan) ಅಗಲಿ ಮುಂದಿನ ತಿಂಗಳಿಗೆ 12 ವರ್ಷಗಳಾಗುತ್ತವೆ. ಈಗಲೂ ರಾಜ್ಯದ್ಯಾಂತ ವಿಷ್ಣು ದಾದಾ ಪ್ರತಿಮೆಗೆ ದಿನವೂ ಪೂಜೆ ನಡೆಯುತ್ತಿದೆ. ಸಂಘಗಳ ಮೂಲಕ ಸಮಾಜ ಸೇವೆ (Social work) ನಡೆಯುತ್ತಿವೆ. ಆದರೂ ಇನ್ನೂ ಅವರ ಒಂದು ಸ್ಮಾರಕ ನಿರ್ಮಾಣ ಆಗಿಲ್ಲ ಎಂಬ ಕೊರಗು ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗಿದೆ. ಆದರೆ, ಇನ್ನೇನು 10 ತಿಂಗಳಲ್ಲಿ ಮೈಸೂರಲ್ಲಿ ನಿರ್ಮಾಣವಾಗುತ್ತಿರುವ ನಿರ್ಮಾಣ ಮುಗಿಯಲಿದೆ ಎಂಬ ಸಮಾಧಾನ ವಿಷ್ಣುವರ್ಧನ ಕುಟುಂಬಕ್ಕಿದೆ. ಈ ಬಗ್ಗೆ ಅನಿರುದ್ಧ ಜಟ್ಕರ್ (Aniruddha Jatkar) ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

'ಬೆಂಗಳೂರಿನಲ್ಲಿ ಅಪ್ಪಾಜಿ ಸ್ಮಾರಕ ಮಾಡಬೇಕು ಎಂದು ನಮ್ಮೆಲ್ಲರ ಆಶಯವಾಗಿತ್ತು. ಆದರೆ ಹೇಗೆ ಸಾಧ್ಯ? ಸಣ್ಣ ಜಾಗ ಪಡೆಯಲು ಸಾಕಷ್ಟು ಪ್ರಯತ್ನಿಸಿದೆವು. ಗೊತ್ತಿಲ್ಲದ ಜಾಗ, ನೋಡಿರದ ಸರ್ಕಾರಿ, ಕಚೇರಿಗಳು (Government office), ವಿಧಾನ ಸೌಧ (Vidhana Soudha) ಎಲ್ಲಾ ಕಡೆ ಅಲೆದಲೆದು, ಚಪ್ಪಲಿ ಸವೆಸಿದ್ದೇವೆ. ಅಧಿಕಾರಿಗಳು, ಸಂಬಂಧ ಪಟ್ಟ ವ್ಯಕ್ತಿಗಳು, ರಾಜಕಾರಣಿಗಳು ಎಲ್ಲರಲ್ಲಿಯೂ ಒಂದು ಜಾಗಕ್ಕಾಗಿ ಬೇಡಿ ಕೊಂಡಿದ್ದೇವೆ. 6 ವರ್ಷಗಳು ಬೆಂಗಳೂರಿನಲ್ಲಿಯೇ (Bengaluru) ಸಮಾಧಿ ಮಾಡಲು ಶ್ರಮಿಸಿದ್ದೇವೆ. ಸರ್ಕಾರ ಒಂದಿಷ್ಟು ಜಾಗಗಳನ್ನು ತೋರಿಸಿತ್ತು. ಅವುಗಳು ಬೆಟ್ಟದ ಮೇಲಿನ ಜಾಗ, ಗಾಡಿಗಳೇ ಓಡಾಡಲು ಸಾಧ್ಯವಾಗದ ಜಾಗ,' ಎಂದು ಅನಿರುದ್ಧ ದುಃಖ ತೋಡಿಕೊಂಡಿದ್ದಾರೆ. ಅದರ ನಡುವೆಯೇ ಎಲ್ತ ಕಾನೂನು ತೊಡಕು ಸೇರಿ ಬೇರೆ ಬೇರೆ ಸಮಸ್ಯೆಗಳನ್ನು ನಿವಾರಿಸಿಕೊಂಡು, ಇದೀಗ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮುಗಿಯುವ ಹಂತಕ್ಕೆ ಬಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಸ್ಮಾರಕ ನಿರ್ಮಾಣಕ್ಕೆ ಇಷ್ಟೆಲ್ಲಾ ತೊಡಕಾಗಿದ್ದೇಕೆ? ಎಂಬುದನ್ನೂ ವಿವರಿಸಿದ್ದಾರೆ.

ಭಾರತಿ ವಿಷ್ಣುವರ್ಧನ್ ಜೀವನದ ಬಗ್ಗೆ ಯಾರಿಗೂ ತಿಳಿಯದ ಘಟನೆಗಳಿವು!

Kannada actor Aniruddha Jatkar talks about Dr Vishnuvardhan memorial construction vcs

2009ರಿಂದ ಎಲ್ಲಾ ಸಿಎಂಗಳ ಬಳಿಯೂ ಮಾತನಾಡಿದ್ದೇವೆ. ಯಾವುದೇ ಜಾಗ ಸಿಕ್ಕರೂ, ಅದಕ್ಕೆ ಸಾಕಷ್ಟು ಅಡೆತಡೆಗಳು ಆಗುತ್ತಿದ್ದವು. ಕೋರ್ಟ್ ಕೇಸ್‌ಗಳನ್ನು (Court Case) ಎದುರಿಸುತ್ತಿದ್ದೇವೆ. ಅಭಿಮಾನ್ ಸ್ಟುಡಿಯೋ (Abhiman studio) ಪಕ್ಕದಲ್ಲೇ ಒಂದಿಷ್ಟು ಜಾಗ ಫೈನಲ್ ಆಗಿತ್ತು. ಇನ್ನೇನು ಸಮಾಧಿ ಕಟ್ಟಬೇಕು, ಎಂದು ತಯಾರು ಮಾಡುವಷ್ಟರಲ್ಲಿಯೇ ಯಾರೋ ಬಂದು, ತಕರಾರು ಮಾಡುತ್ತಿದ್ದರು. ಕೊನೆಯದಾಗಿ ಬಿಜಿಎಸ್ ಕಾಲೇಜ್‌ ಮುಂಭಾಗದಲ್ಲಿ ಜಾಗ ನಿಗದಿ ಮಾಡಿದರು. ಅಲ್ಲಿಯೂ ಶಂಕುಸ್ಥಾಪನೆ ದಿನವೇ ಸ್ಟೇ ಆರ್ಡರ್‌ ಬಂತು. ಅದು ಫಾರೆಸ್ಟ್ ಬಫರ್ ಝೋನ್. ಹೀಗಾಗಿ ಸ್ಮಾರಕ ನಿರ್ಮಿಸುವಂತಿಲ್ಲ ಎಂದರು. ಹೀಗೆ ಸತತ 6 ವರ್ಷಗಳ ಕಾಲ ಬೆಂಗಳೂರಿನಲ್ಲಿ ಸ್ಯಾಂಡಲ್‌ವುಡ್ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮೀಸಲು ಜಾಗಕ್ಕಾಗಿ ಅಲೆದರೂ, ಸಾಧ್ಯವಾಗಿಲೇ ಇಲ್ಲ,' ಎಂದಿದ್ದಾರೆ.

ಒಡಿಶಾದಲ್ಲಿ ವಿಷ್ಣುವರ್ಧನ್‌ ಮರಳು ಶಿಲ್ಪ!

ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದೇಕೆ? 
'ನಾನು ಭಾರತೀ ಅಮ್ಮ, ಸ್ವತಃ ಬಾಲಣ್ಣ (Balanna Family) ಅವರ ಕುಟುಂಬ, ಅಂಬರೀಶ್ (Ambareesh) ಕೂಡ ಇದಕ್ಕೆ ಪ್ರಯತ್ನಿಸೆದೆವು. ಕೊನೆಗೆ ಅಭಿಮಾನಿಗಳನ್ನು ಕರೆದು, ನಾನು ಮೀಟಿಂಗ್ ಮಾಡಿದೆ. ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಾಗುತ್ತಿಲ್ಲ, ಒಂದಲ್ಲೊಂದು ತೊಡಕುಗಳು ಎದುರಾಗುತ್ತಲೇ ಇದ್ದಿದ್ದರಿಂದ, ಅಂತಿಮವಾಗಿ ಮೈಸೂರಲ್ಲಿಯೇ ಸ್ಮಾರಕ ನಿರ್ಮಿಸಲು ನಿರ್ಧರಿಸಿದೆವು. ಅಪ್ಪಾಜಿ 224 ಸಿನಿಮಾಗಳನ್ನು ಮಾಡಿದ್ದಾರೆ. ಇಂಥ ದೊಡ್ಡ ನಟನಿಗೊಂದು ಸ್ಮಾರಕ ನಿರ್ಮಿಸೋದು ಅವರ ಅಭಿಮಾನಿಗಳ ಆಶಯವಾಗಿತ್ತು. ಅಂಬರೀಶ್ ಅವರಿದ್ದಾಗ ಈ ಕಾರ್ಯ ನೆರವೇರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಬೇರೆ ಅನೇಕ ನಾಯಕರು ಸ್ಮಾರಕಕ್ಕೆ ಜಾಗ ನೀಡುವ ಭರವಸೆ ನೀಡಿದ್ದರು. ಆದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ,' ಎಂದಿದ್ದಾರೆ.

ಬೆಳ್ಳಿ ತೆರೆ ಮೇಲೆ ಮತ್ತೆ 'ಬಂಧನ', ಡಾ.ಹರೀಶ್ ಮುಂದುವರಿದ ಭಾಗ

ಇದೀಗ ಎಲ್ಲ ತೊಡಕುಗಳೂ ಅಂತ್ಯವಾಗುವ ಕಾಲ ಬಂದಿದೆ. ಡಾ.ರಾಜ್‌ಕುಮಾರ್, ಅಂಬರೀಷ್, ಪುನೀತ್ ರಾಜ್‌ಕುಮಾರ್ ಅವರಂತೆಯೇ ಡಾ.ವಿಷ್ಣುವರ್ಧನ್ ಸಮಾಧಿಯೂ ಬರುವ ಸೆಪ್ಟೆಂಬರ್‌ಗೆ ಮುಗಿಯಲಿದೆ ಎಂಬ ಸಂತೋಷ ನಮಗಿದೆ. ವಿಷ್ಣು ಅಭಿಮಾನಿಗಳ ಆಸೆ ಈಡೇರುತ್ತಿದೆ. ಇದಕ್ಕಾಗಿ ನಮಗೂ ಸಂತೋಷವಿದೆ, ಎಂದಿದ್ದಾರೆ ಅನಿರುದ್ಧ್ ಅವರು. 

Follow Us:
Download App:
  • android
  • ios