ನ.14ರಂದು ಬೆಂಗಳೂರಿನ ಅರಮನೆ ಮೈದಾನದರಲ್ಲಿರುವ ಗಾಯಿತ್ರಿ ವಿಹಾರದ ವೃಕ್ಷ ಹಾಲ್‌ನಲ್ಲಿ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನವೆಂಬರ್ 14 ಗುರುವಾರ ವರ್ಷದ ಪುಣ್ಯತಿಥಿಗೆ ಒಳ್ಳೆಯದಿನವಾದ ಕಾರಣ ಹನ್ನೊಂದು ದಿನಗಳ ಮುಂಚಿತವಾಗಿಯೆ ಪುಣ್ಯಕಾರ್ಯ ಮಾಡಲಾಗುತ್ತಿದೆ. 

ಅಯ್ಯೋ! ಇಷ್ಟೋಂದ ಅಂಬಿ ಪುತ್ರನ ಸಂಭಾವನೆ ?

ಈ ಕಾರ್ಯದಲ್ಲಿ ಕುಟುಂಬದ ಜೊತೆಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಭಾಗಿಯಾಗಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ದ ವೃಕ್ಷಹಾಲ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಪುಣ್ಯತಿಥಿ ನಡೆಯಲಿದೆ. ಇದಕ್ಕೂ ಮೊದಲು ಕಂಠೀರವ ಸ್ಟುಡಿಯೋದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಅವರ ಕುಟುಂಬದ ಸದಸ್ಯರಿಂದ ವಿಶೇಷ ಪೂಜೆ ನಡೆಯಲಿದೆ. ನಂತರ ನವೆಂಬರ್ 24ರಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರ ನಡುವೆ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಅಂದು ಅಭಿಮಾನಿಗಳು ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದಾರೆ. 

ಲಯನ್ಸ್ ಕ್ಲಬ್ ನಿಂದ ಬ್ಲೆಡ್ ಕಾಂಪ್ ಕೂಡ ಆಯೋಜಿಲಾಗಿದೆ.