ಈಗಾಗಲೇ ಕೆಲವು ನಿರ್ದೇಶಕರು ಅಭಿಷೇಕ್ ಅಂಬರೀಶ್ ಕಾಲ್‌ಶೀಟ್‌ಗೆ ಮುಗಿಬಿದಿದ್ದಾರೆನ್ನುವ ಮಾತುಗಳು ಕೇಳಿಬಂದಿವೆ. ಮೂಲಗಳ ಪ್ರಕಾರ ಎರಡು ಕೋಟಿ ಸಂಭಾವನೆ ಆಫರ್ ಮಾಡಿರುವ ಸುದ್ದಿ ಇದೆ. ಸದ್ಯಕ್ಕೆ ಅಭಿಷೇಕ್ ಅಂಬ ರೀಶ್ ಇದುವರೆಗೂ ಯಾವುದೇ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಆಗಸ್ಟ್ ತಿಂಗಳ ಆರಂಭದಲ್ಲಿ ಅಭಿಷೇಕ್ ಮುಂದಿನ ಚಿತ್ರದ ಘೋಷಣೆ ಮಾಡಲಿದ್ದಾರೆ.

ಅಭಿಗಿಂತ ಅಂಬಿಗೇ ಮೊದಲು ಬಂದ ಡಾಕ್ಟರೇಟ್!

ಅಭಿಷೇಕ್ ಈಗಷ್ಟೇ ಬೆಳ್ಳಿತೆರೆಗೆ ಎಂಟ್ರಿಯಾದ ನಟ. ಅಭಿಷೇಕ್ ಅಂಬರೀಶ್ ತಮ್ಮ ಮುಂದಿನ ಸಿನಿಮಾಕ್ಕೆ ಇಂತಿಷ್ಟೇ ಸಂಭಾವನೆ ಬೇಕು ಎನ್ನುವುದನ್ನು ಫಿಕ್ಸ್ ಮಾಡಿಕೊಂಡಿಲ್ಲವಾದರೂ, ಕೆಲವು ನಿರ್ದೇಶಕರೇ 2 ಕೋಟಿ ಸಂಭಾವನೆ ನೀಡುತ್ತೇವೆ, ತಮ್ಮ ಸಿನಿಮಾದಲ್ಲಿ ಅಭಿನಯಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರಂತೆ. ಅಲ್ಲಿಗೆ ಎಂಟ್ರಿಯಲ್ಲೇ ಅಭಿಷೇಕ್ ಅಂಬರೀಶ್ ಅತೀ ಹೆಚ್ಚು ಸಂಭಾವನೆಯ ಯುವ ನಟ ಎನಿಸಿಕೊಳ್ಳುವುದು ಗ್ಯಾರಂಟಿ ಎನ್ನುತ್ತಿದೆ ಗಾಂಧಿನಗರ. ಮೂಲಗಳ ಪ್ರಕಾರ ಅಭಿಷೇಕ್ ಅಂಬರೀಶ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾಗಿರುವ ನಿರ್ದೇಶಕ ಪೈಕಿ ಈಗ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ರಾವ್ ಹಾಗೂ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಖ್ಯಾತಿಯ ಯುವ ನಿರ್ದೇಶಕ ಗರುದತ್ ಗಾಣಿಗ ಅವರ ಹೆಸರು ಕೇಳಿ ಬಂದಿವೆ. ಈ ಪೈಕಿ ನಿರ್ದೇಶಕ ಮಹೇಶ್ ರಾವ್ ‘ಅಮರ್’ ಬಿಡುಗಡೆ ಬೆನ್ನಲ್ಲೇ ಅಭಿಷೇಕ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.

ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ ಅಭಿಷೇಕ್ ಅಂಬರೀಶ್

‘ಹೌದು, ನನ್ನ ಸಿನಿಮಾಕ್ಕೆ ಅವರನ್ನು ಹೀರೋ ಆಗಿ ಕರೆ ತರಬೇಕೆನ್ನುವ ಉದ್ದೇಶದಿಂದಲೇ ತುಂಬಾ ದಿನಗಳ ಹಿಂದೆ ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಆದರೆ ಸಿನಿಮಾ ಸಂಬಂಧ ಯಾವುದು ಫೈನಲ್ ಆಗಿಲ್ಲ’ ಎನ್ನುತ್ತಾರೆ ಮಹೇಶ್‌ರಾವ್. ಅಭಿಷೇಕ್ ಅಂಬರೀಶ್ ಅವರಿಗೆ ಈ ಮಟ್ಟದ ಬೇಡಿಕೆ ಬರುವುದಕ್ಕೂ ಕಾರಣವಿದೆ. ಅಭಿಷೇಕ್ ಅಂಬರೀಶ್ ಹಾಕಿಕೊಂಡು ಸಿನಿಮಾ ಮಾಡಿದರೆ, ಚಿತ್ರದ ಪ್ರಮೋಷನ್ ಸುಲಭವಾಗಿ ಆಗುತ್ತೆ. ಅಭಿಷೇಕ್ ಅವರ ತಾಯಿ ಸುಮಲತಾ ಕೂಡ ಈಗ ರಾಜಕಾರಣದಲ್ಲಿರುವುದರಿಂದ ಅವರು ಕೂಡ ಚಿತ್ರದ ಪ್ರಮೋಷನ್‌ಗೆ ಸಹಕರಿಸುತ್ತಾರೆನ್ನುವ ಭರವಸೆ ಮೇಲೆ ಎರಡು ಕೋಟಿ ರುಪಾಯಿ ಸಂಭಾವನೆ ಬೇಡಿಕೆಯೊಂದಿಗೆ ಕೆಲವು ನಿರ್ದೇಶಕರು ಅಭಿಷೇಕ್ ಅಂಬರೀಶ್ ಅವರನ್ನು
ತಮ್ಮ ಚಿತ್ರಗಳಿಗೆ ಹೀರೋ ಆಗಿಸಿಕೊಳ್ಳಲು ಮುಂದಾಗಿದ್ದಾರೆನ್ನುತ್ತಿವೆ ಮೂಲಗಳು.