ಸ್ಯಾಂಡಲ್‌ವುಡ್‌ ಕೃಷ್ಣ ಅಜಯ್ ರಾವ್ ಹಾಗೂ ಸ್ವಪ್ನ ದಂಪತಿಯ ಮುದ್ದು ಮಗಳು ಚರಿಷ್ಮಾ ಒಂದು ವರ್ಷಕ್ಕೆ ಕಾಲಿಟ್ಟಿದ್ದು ಕುಟುಂಬಸ್ಥರು ಅದ್ಧೂರಿಯಾಗಿ ಹುಟ್ಟಹಬ್ಬ ಆಚರಿಸಿದ್ದಾರೆ.

6 ತಿಂಗಳ ನಂತರ ಅಜಯ್ ರಾವ್ ಮಗಳ ಫೋಟೋ ರಿವೀಲ್!

ಬರ್ತಡೇ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡು ಪಿಂಗ್ ಬಾಕ್ಸ್‌ ಗಿಫ್ಟ್‌ ಆಗಿ ನೀಡಿದ್ದಾರೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ 'ಚರಿಷ್ಮಾ' ಎಂಬ ಖಾತೆ ಹೊಂದಿದ್ದು ಸಾಕಷ್ಟು ಫ್ಯಾನ್ ಫಾಲೋವರ್ಸ್‌ ಹೊಂದಿದ್ದಾಳೆ. ಫೋಷಕರು ಆಕೆಯನ್ನು ಮುದ್ದಾಗಿ 'ಚೆರಿ' ಎಂದು ಕರೆಯುತ್ತಾರೆ.

ಚೆರಿ ಚೆರಿಯಾಗಿದ್ದಾಳೆ ಅಜಯ್ ರಾವ್‌ ಮಗಳು! ಚೆರಿ ಟೇಲ್ಸ್‌ ಫೋಟೋಗಳಿವು!

ಮಗಳು ಹುಟ್ಟಿ 6 ತಿಂಗಳಾದ ಬಳಿಕೆ ಸ್ಪೆಷಲ್ ದಿನದಂದು ಮಗಳ ಫೋಟೋವನ್ನು ರಿವೀಲ್ ಮಾಡಲಾಗಿತ್ತು. 2018 ನವೆಂಬರ್ 22 ರಂದು ಚರಿಷ್ಮಾ ಹುಟ್ಟಿದ್ದರೆ ಡಿಸೆಂಬರ್ 2 ರಂದು ಐರಾ ಹುಟ್ಟಿದ್ದಳು. ಅಜಯ್ ಹಾಗೂ ಯಶ್ ಇಬ್ಬರು ತಂದೆಯಾದ ಸಂಭ್ರಮದಲ್ಲಿದ್ದರು.