ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾಮ್ 6 ತಿಂಗಳ ಬಳಿಕ ಸ್ಪೇಷಲ್ ದಿನದಂದು ಮಗಳ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದು ವೈರಲ್ ಆಗುತ್ತಿದೆ.

ನಟ-ನಟಿಯರು ತಮ್ಮ ಮಕ್ಕಳ ಫೋಟೋಗಳನ್ನು ಕ್ರಿಯೇಟಿವ್ ಆಗಿ ರಿವೀಲ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗಿದೆ. ಮಂಗಳವಾರ ನಟ ಅಜಯ್ ರಾವ್ ಪತ್ನಿ ಸ್ವಪ್ನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅಂದು ವಿಶ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.

ಅಜಯ್ ಮಗಳಿಗೆ cherishma ಎಂದು ಹೆಸರಿಟ್ಟಿದ್ದಾರೆ. ದಂಪತಿಗಳು ಮಗಳನ್ನು ಮುದ್ದಾಗಿ ‘ಚೆರೆ’ ಎಂದು ಕರೆಯುತ್ತಾರೆ.

View post on Instagram

‘ಹ್ಯಾಪಿ ಬರ್ತಡೇ ಸ್ವಪ್ನಾ. ನಿನ್ನ ಜೀವನದಲ್ಲಿ ಖುಷಿ ಸಂತೋಷಗಳು ತುಂಬಲಿ. ಈ ವಿಶೇಷ ದಿನದಂದು ನಮ್ಮ ಏಂಜಲ್ ಫೋಟೋವನ್ನು ರಿವೀಲ್ ಮಾಡುತ್ತಿದ್ದೀವಿ’ ಎಂದು ಬರೆದುಕೊಂಡಿದ್ದಾರೆ.

View post on Instagram