ಧನ್ವೀರ್ ತಂದೆ ಪಾತ್ರದಲ್ಲಿ ಮಿಂಚುತ್ತಿರುವ ಅಚ್ಯುತ್ ಕುಮಾರ್. ಲಿವಿಂಗ್ ಟುಗೆದರ್‌ ಬಗ್ಗೆ ಹಿರಿ ನಟನ ಮಾತು 

ಸಂತು (Santu) ನಿರ್ದೇಶನ ಮಾಡಿರುವ ಬೈಟು ಲವ್ (Bytwo) ಸಿನಿಮಾ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಧನ್ವೀರ್ (Dhanveer) ಮತ್ತು ಶ್ರೀಲೀಲಾ (Sreeleela) ಕಾಂಬಿನೇಷನ್‌ಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ಲೀಲಾ ತಾಯಿ ಪಾತ್ರದಲ್ಲಿ ಪವಿತ್ರಾ ಲೋಕೇಶ್ (Pavitra Lokesh) ಕಾಣಿಸಿಕೊಂಡರೆ, ಧನ್ವೀರ್ ತಂದೆ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ತಂದೆ-ಮಗ ಮುಖ ಕೊಟ್ಟು ಮಾತನಾಡುತ್ತಿಲ್ಲ ಅಂದ್ರೆ ಕುಟುಂಬ ಹೇಗಿರುತ್ತದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. 

ಅಚ್ಯುತ್ ಕುಮಾರ್:
'ಅಲೆಮಾರಿ ಸಂತು ನಿರ್ದೇಶನ ಮಾಡಿರುವ ಸಿನಿಮಾ ಇದು, ನಮ್ಮ ಧನ್ವೀರ್ ಮತ್ತು ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಲವ್ ಸ್ಟೋರಿ (Love story) ಪ್ರೇಮಾ ಕಥಾನಕ ಅಂತ ಹೇಳಬಹುದು. ಇದರಲ್ಲಿ ಧನ್ವೀರ್ ತಂದೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿರುವೆ. ಒಬ್ಬ ತಂದೆ ಮಗನ ಜೊತೆ ಮಾತುಕತೆಯಾಡದೇ, ಯಾವುದೇ ರೀತಿಯ ಸಂವಾದ ಇಲ್ಲದೆ ಹೇಗೆ ಮಗನನ್ನು ಪ್ರೀತಿಸಬಲ್ಲ ಅನ್ನೋದು ಒಂದು ರೂಪ. ನೀವು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ತಂದೆ ಮಕ್ಕಳನ್ನು ಎಷ್ಟು ಪ್ರೀತಿ ಮಾಡುತ್ತಾರೆಂದು,' ಎಂದು ಅಚ್ಯುತ್ ಕುಮಾರ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಸಮಾಜದಲ್ಲಿರುವ ಹಳೆ ಅಭ್ಯಾಸ ಮತ್ತು ಹೊಸ ಕಾಲದ ಯುವಕರಿಗೆ ಬರುವ ಆಲೋಚನೆ ಏನಿದೆ? ಆ ತಾಕಲಾಟ ಅದು ಈ ಚಿತ್ರದ ಒಂದು ಕಥೆ. ಸಿನಿಮಾ ಚೆನ್ನಾಗಿದೆ. ಒಂದು ಮ್ಯೂಸಿಕಲ್ ಲವ್ ಸ್ಟೋರಿ. ಎಮೋಷನಲ್ ಮೆಸೇಜ್ (Emotional Message) ಇದೆ. ಸಿನಿಮಾದ ಕೊನೆಯಲ್ಲಿ ಎಲ್ಲವೂ ಸುಖಾಂತ್ಯವೇ. ತಂದೆ ಮತ್ತು ಮಗ ಒಂದಾಗುತ್ತಾರೆ, ಸಂಬಂಧನೇ ಕಿತ್ತೊಗು ತರ ಕಥೆ ಇಲ್ಲ. ನಾವಿಬ್ಬರು ಸೇರಿ ಸನ್ನಿವೇಶ ಕಟ್ಟುತ್ತೀವಿ. ನಟರಾಗಿ ಇದು ನಮ್ಮ ಕರ್ತವ್ಯ,' ಎಂದು ಅಚ್ಯುತ್ ಹೇಳಿದ್ದಾರೆ.

Fourwalls Film Review: ಮಕ್ಕಳು ಪಾಪ, ತಂದೆಯ ವಿಶ್ವರೂಪ

'ಸಿನಿಮಾದಲ್ಲಿ ಹಿರಿಯ ಕಲಾವಿದರು ಇದ್ದಾರೆ. ಕಡಿಮೆ ಅವಧಿಯಲ್ಲಿ ಅವರು ಕಾಣಿಸಿಕೊಂಡರೂ, ಕೂಡ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಚಿತ್ರಕ್ಕೆ ಅದು ಪ್ಲಸ್ ಪಾಯಿಂಟ್. ನೀವು ಲೀವ್ ಇನ್‌ನಲ್ಲಿ (Living Relationship) ಇರ್ತೀರೋ ಅಥವಾ ಗಂಡ ಹೆಂಡತಿ (Marriage) ಆಗಿರ್ತೀರೋ, ಒಬ್ಬರನ್ನೊಬ್ಬರು ಎಷ್ಟು ದೂರ ಪ್ರೀತಿ ಮಾಡ್ತೀರಾ, ಮನುಷ್ಯರಾಗಿರುತ್ತೀರಾ ಅನ್ನೋದು ಮುಖ್ಯ. ಯಾವ ರೀತಿ ಬಂಧನದಲ್ಲಿರುತ್ತೀವಿ ಅನ್ನೋದೂ ಮುಖ್ಯ ಅಲ್ಲ. ಯಾವ ಬಂಧನದಲ್ಲಿ ಇದ್ದು ಮನುಷ್ಯರಾಗಿ ಇರುತ್ತೀವಿ ಅನ್ನೋದು ಮುಖ್ಯ. ಇದು ವ್ಯತ್ಯಾಸ ಅನಿಸೊಲ್ಲ ನನಗೆ. ಈಗಿನ ತುರ್ತು ಏನು ಅಂದ್ರೆ ಎಷ್ಟು ಮನುಷ್ಯರಾಗಿ ಇರ್ತೀವಿ. ಸಾಯ್ತೀವಿ ಅನ್ನೋದು ಮುಖ್ಯವಾಗುತ್ತದೆ' ಎಂದಿದ್ದಾರೆ ಅಚ್ಯುತ್.

ಗಂಡನ ಮನೆಯಿಂದ ನನಗೆ ಏನೂ ಸಿಗೋಲ್ಲ, ನಿಜವಾದ ಪ್ರೀತಿಗೆ ಬೆಲೆ ಇಲ್ಲ: ನಟಿ Pavitra Lokesh

ಕೊರೋನಾ (Covid19) ಹಾವಳಿ ಮುಗಿದು 100% ಸೀಟಿಂಗ್ ಅನುಮತಿ ಸಿಕ್ಕಿದೆ. ಎಲ್ಲರೂ ಚಿತ್ರಮಂದಿರಕ್ಕೆ ಅಗಮಿಸಿ ಸಿನಿಮಾ ನೋಡಬೇಕು, ಎಂದು ಇಡೀ ತಂಡ ಮನವಿ ಮಾಡಿಕೊಂಡಿದೆ. ಧನ್ವೀರ್, ಶ್ರೀಲೀಲಾ ಮತ್ತು ಪುಟ್ಟ ಪಾಪು ನಂತರ ಸಿನಿಮಾದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವುದು ಅಚ್ಯುತ್ ಕುಮಾರ್ ಮತ್ತು ಪವಿತ್ರಾ ಲೋಕೇಶ್ ಪಾತ್ರಕ್ಕೆ ಎನ್ನಬಹುದು.