ಪುನೀತ್‌ ರಾಜ್‌ಕುಮಾರ್‌ ಈ ಹಾಡಿನ ಕುರಿತು ‘ಸಿಂಪಲ್‌ ಆ್ಯಂಡ್‌ ಸೂಪರ್‌ ಹಾಡು’ ಎಂದು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ಲಭ್ಯ.

ಮಸೋರೆಯ 'ಆಕ್ಟ್‌-1978'ನಲ್ಲಿ ಬಾಂಬ್ ಆದ ಯಜ್ಞಾ ಶೆಟ್ಟಿ! 

‘ಆಕ್ಟ್ 1978’ ಚಿತ್ರಕ್ಕೆ ಕತೆಗಾರ ದಯಾನಂದ ಟಿಕೆ ಕತೆ ಬರೆದಿದ್ದಾರೆ. ಯು ಪ್ರಮಾಣ ಪತ್ರ ಸ್ವೀಕರಿಸಿರುವ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕನ್ನಡ ರಾಜ್ಯೋತ್ಸವ, ನವೆಂಬರ್‌ 1ಕ್ಕೆ ಸಿನಿಮಾ ಥಿಯೇಟರ್‌ಗಳಿಗೆ ಬರುತ್ತಿದೆ. ಜನ ಸಾಮಾನ್ಯರಿಗೆ ಸಂಬಂಧಿಸಿದಂತೆ ಒಂದು ಕಾಯಿದೆಯ ಹುಡುಕಾಟ ಹಾಗೂ ಅದರ ವಿಶ್ಲೇಷಣೆ ನಮ್ಮನ್ನು ಬೆರಗು ಮೂಡಿಸಿದೆ. ಇದರ ಪರಿಣಾಮವೇ ಈ ಸಿನಿಮಾ’ ಎನ್ನುತ್ತಾರೆ ನಿರ್ದೇಶಕ ಮಂಸೋರೆ. 
ದೇವರಾಜ್‌ ಆರ್‌ ಈ ಚಿತ್ರದ ನಿರ್ಮಾಪಕರು. ಬಿ ಸುರೇಶ್‌, ಪ್ರಮೋದ್‌ ಶೆಟ್ಟಿ, ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ,ಶರಣ್ಯ, ಶೋಭರಾಜ್‌, ಅವಿನಾಶ್‌, ರಾಘು ಶಿವಮೊಗ್ಗ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ರಿಲೀಸ್ ಮಾಡಲಾಗಿದ್ದ ಪೋಸ್ಟರ್ ಲುಕ್‌ನಲ್ಲಿ ಯಜ್ಞಾ ಶೆಟ್ಟಿ ದೇಹಕ್ಕೆ ಬಾಂಬ್ ಸುತ್ತಿಕೊಂಡು, ಕೈಯಲ್ಲಿ ವೈರ್‌ಲೆಸ್‌ ಜತೆ ಪಿಸ್ತೂಲು ಹಿಡಿದಯ ಕೂತಿದ್ದರು. ಚಿತ್ರಕ್ಕೆ ಹೆಸರು ಕೂಡ ಭಿನ್ನವಾಗಿರುವ ಕಾರಣ ಸಾಕಷ್ಟು ಕುತೂಹಲ ಮೂಡಿಸಿದೆ.