ತುಂಬಿ ಗರ್ಭಿಣಿ, ದೇಹಕ್ಕೆ ಬಾಂಬು ಸುತ್ತಿಕೊಂಡು, ಕೈಯಲ್ಲಿ ವೈರ್ ಲೆಸ್ ಜತೆಗೆ ಪಿಸ್ತೂಲು ಹಿಡಿದು ಕೂತಿರುವ ಯಜ್ಞಾ ಶೆಟ್ಟಿ ಅವರ ಲುಕ್ಕು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ಚಿತ್ರಕ್ಕಿಟ್ಟಿರುವ ಹೆಸರು ಕೂಡ ಭಿನ್ನವಾಗಿದೆ.

ಕಿಚ್ಚನ ಹೆಗಲೇರಿದ ದರ್ಶನ್ ಪುತ್ರ; ಫೋಟೋ ವೈರಲ್!

ಇದು ಮಂಸೋರೆ ಅವರ ಮೂರನೇ ಚಿತ್ರವಾಗಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಕಥೆಗೆ ಪೂರಕವಾಗಿ ಆಕ್ಟ್-೧೯೭೮ ಎನ್ನುವ ಹೆಸರು ಇಡಲಾಗಿದೆ.ಯಜ್ಞಾಶೆಟ್ಟಿ ಸೇರಿದಂತೆ ಬಿ.ಸುರೇಶ್ ಪ್ರಮೋದ್ ಶೆಟ್ಟಿ, ಹಿರಿಯ ಕಲಾವಿದೆ ಶ್ರುತಿ, ದತ್ತಣ್ಣ, ಅಚ್ಯುತ ಕುರ್ಮಾ, ಅವಿನಾಶ್, ಶೋಭರಾಜ್, ಸುಧಾ ಬೆಳವಾಡಿ, ಕವಲುದಾರಿ ಖ್ಯಾತಿಯ ಸಂಪತ್
ಮೈತ್ರೇಯ, ಶರಣ್ಯ ಮುಂತಾದವರು ನಟಿಸಿದ್ದಾರೆ.

 

ದೇವರಾಜ್ ಆರ್. ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರ ಜತೆಗೆ ದಯಾನಂದ್ ಟಿ ಕೆ, ವೀರು ಮಲ್ಲಣ್ಣ ಅವರು ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ.  ನಾತಿಚರಾಮಿ ಚಿತ್ರದ ನಂತರ ಮಂಸೋರೆ ಈ ಆಕ್ಟ್-1978 ಚಿತ್ರವನ್ನು ನಿರ್ದೇಶಿಸಿದ್ದಾರೆ. ನನ್ನತನವನ್ನು ಉಳಿಸಿಕೊಂಡು ನನಗಿದ್ದ ಇತಿಮಿತಿಗಳನ್ನು ಮೀರಿ ದೊಡ್ಡ ಕ್ಯಾನ್ವಾಸಿನ ಚಿತ್ರವೊಂದನ್ನು ನಿರ್ದೇಶನ ಮಾಡಿದ ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. ಆಕ್ಟ್-1978 ಒಂದು ಸೋಷಿಯಲ್ ಥ್ರಿಲ್ಲರ್ ಸಿನೆಮಾ. ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್‌ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇವೆ... ಇದು ಮಂಸೋರೆ ತಮ್ಮ ಚಿತ್ರದ ಕುರಿತು ಹೇಳುವ ಮಾತು.