ಕುತೂಹಲ ಹೆಚ್ಚಾಗ್ತಿದೆ, ಕಾಂತಾರ ನೋಡಲು ಕಾಯುತ್ತಿದ್ದೇನೆ; ನಟಿ ಕಂಗನಾ ರಣಾವತ್

ನಟಿ ಕಂಗನಾ ರಣಾವತ್ ಕನ್ನಡದ ಕಾಂತಾರ ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. 

Kangana Ranaut about Kantara film says intrigued and curious sgk

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಗಡಿಗೂ ಮೀರಿ ಅಬ್ಬರಿಸುತ್ತಿದೆ. ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿಯಲ್ಲಿ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡುತ್ತಿದೆ. ಅಂದಹಾಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. 

ತೆಲುಗು ಸ್ಟಾರ್ ಪ್ರಭಾಸ್, ನಾನಿ, ರಾಣಾ ದಗ್ಗುಬಾಟಿ, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಅನೇಕ ಸ್ಟಾರ್ಸ್ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ವಿಶೇಷ ಎಂದರೆ ತೆಲುಗು ಸ್ಟಾರ್ ಪ್ರಭಾಸ್ ಎರಡು ಬಾರಿ ಕಾಂತಾರ ಸಿನಿಮಾ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.  ಇದೀಗ ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಇದೀಗ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ  ಸೇರಿದಂತೆ ಅನೇಕರು ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ. ಇದೀಗ ಕಾಂತಾರ ನಟಿ ಕಂಗನಾ ರಣಾವತ್ ಸಿನಿಮಾ ನೋಡಲು ಕಾಯುತ್ತಿದ್ದೀನಿ  ಎಂದು ಹೇಳಿದ್ದಾರೆ. 

ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಕಂಗನಾ ಕಾಂತಾರ ಸಿನಿಮಾ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರ ಪೋಸ್ಟರ್ ಶೇರ್ ಮಾಡಿ, 'ಕಾಂತಾರ ಬಗ್ಗೆ ಅಸಾಧಾರಣವಾದ ವಿಷಯಗಳನ್ನು ಕೇಳಲು ತುಂಬಾ ಕುತೂಹಲವಾಗುತ್ತಿದೆ. ಕಾಂತಾರ ನೋಡಲು ಕುತೂಹಲದಿಂದ ಕಾಯುತ್ತಿದ್ದೀನಿ' ಎಂದು ಹೇಳಿದರು.

 Kangana Ranaut about Kantara film says intrigued and curious sgk

ಯಾರು ಗೊತ್ತಾಯ್ತಾ? ಇವ್ರೇ ರೀ 'ಕಾಂತಾರ'ದ ಶೀಲಾ; ನಿಜಕ್ಕೂ ಯಾರಿವರು, ಇಲ್ಲಿದೆ ಸಂಪೂರ್ಣ ಮಾಹಿತಿ

ಶಿಲ್ಪಾ ಶೆಟ್ಟಿ ಮೆಚ್ಚಿದ ಕಾಂತಾರ

 ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ ಎಂಥ ಅದ್ಭುತವಾದ ಸಿನಿಮಾ ಎಂದು ಹೇಳಿದ್ದಾರೆ. ಸಿನಿಮಾ ನೋಡಿ ರೊಮಾಂಚನ ವಯಿತು ಎಂದು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. 'ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಪೋಸ್ಟ್. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ. ಓ ಮೈ ಗಾಡ್ ಎಂಥ ಸಿನಿಮಾ. ಅದ್ಭುತವಾದ ನರೇಟಿವ್, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್‌ ನೋಡಿ ಗೂಸ್‌ಬಂಪ್ಸ್ ಬಂತು. ನಾನು ಸೇರಿದಂತೆ ವೀಕ್ಷಕನನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೆ. ನಿಜವಾಗಿಯೂ ನನ್ನನ್ನು ನನ್ನ ಊರಿಗೆ ಕರೆದೊಯ್ತು ಇದು ಸಿನಿಮಾ ಶಕ್ತಿ. 

'ಪೊನ್ನಿಯಿನ್ ಸೆಲ್ವನ್‌'ಗೆ ಸೆಡ್ಡು ಹೊಡೆದ 'ಕಾಂತಾರ'; ಮೊದಲ ವೀಕೆಂಡ್ ಹಿಂದಿಯಲ್ಲಿ ಭರ್ಜರಿ ಕಲೆಕ್ಷನ್

ಕಾಂತಾರ ಬಗ್ಗೆ

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

  

Latest Videos
Follow Us:
Download App:
  • android
  • ios