*  ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲು*  ಹೃದಯ ಬಡಿತ ಕಡಿಮೆ ಆಗಿದ್ದರಿಂದ ಸುಸ್ತಾಗಿದ್ದ ದೊಡ್ಡಣ್ಣ *  ಚಿಕಿತ್ಸೆಗೆ ಸ್ಪಂದಿಸುತ್ತಿರುವ ದೊಡ್ಡಣ್ಣ 

ಬೆಂಗಳೂರು(ಆ.27): ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದೊಡ್ಡಣ್ಣ ಅವರು ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೃದಯ ಬಡಿತದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಐಸಿಯುನಲ್ಲಿ ಇದ್ದಾರೆ.

ಹೃದಯ ಬಡಿತ ಕಡಿಮೆ ಆಗಿದ್ದರಿಂದ ದೊಡ್ಡಣ್ಣ ಸುಸ್ತಾಗಿದ್ದರು. ಈಗ ಅವರಿಗೆ ಶಾಶ್ವತ ಪೇಸ್‌ಮೇಕರ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ. 

ದಚ್ಚು, ಕಿಚ್ಚನ ಮುನಿಸಿನ ಬಗ್ಗೆ ದೊಡ್ಡಣ್ಣ ಹೇಳಿದ್ದೇನು ಗೊತ್ತಾ?

ವೈದ್ಯಕೀಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚಿಕಿತ್ಸೆಗೆ ದೊಡ್ಡಣ್ಣ ಸ್ಪಂದಿಸುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ಮೂಲಗಳು ತಿಳಿಸಿವೆ.