ತಾಯಿ ತಲೆ ತಗ್ಗಿಸದಂತೆ ನೋಡಿಕೊಂಡ ತೆಲುಗು ನಟ ಜ್ಯೂ ಎನ್‌ಟಿಆರ್ಮಾತೃ ಭಾಷೆಯ ಪವರ್ ಏನು ಎಂದು ತೋರಿಸಿಕೊಟ್ಟ ತಾರಕ್ಕನ್ನಡ ಚಿತ್ರಗಳಿಗೂ ಡಬ್ ಮಾಡದ ರಶ್ಮಿಕಾ ಮೇಲೆ ಮತ್ತೆ ನೆಟ್ಟಿಗರ ಮುನಿಸು 

ರಾಜಮೌಳಿ ನಿರ್ದೇಶನದ RRR ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಎಲ್ಲೆಡೆ ಪ್ರದರ್ಶನವಾಗ್ತಿದ್ದು, ಮಲ್ಟಿ ಸ್ಟಾರರ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬಾಹುಬಲಿ ಸಿನಿಮಾದ ದಾಖಲೆಯನ್ನ ತಮ್ಮದೇ ಸಿನಿಮಾ ಮೂಲಕ ಮುರಿದಿದ್ದಾರೆ ನಿರ್ದೇಶಕ ರಾಜಮೌಳಿ (Director Rajamouli). ಇನ್ನು ಸಿನಿಮಾದ ಮೇಕಿಂಗ್ , ಗ್ರಾಫಿಕ್ಸ್ , ಕಥೆ ಪ್ರತಿಯೊಂot ವಿಚಾರದಲ್ಲಿಯೂ ರಾಜಮೌಳಿ ಯಶಸ್ಸು ಕಂಡಿದ್ದು ಥ್ರಿಬಲ್ ಆರ್ ಸಿನಿಮಾ ಪ್ರೇಕ್ಷಕರಿಗೆ ಹಬ್ಬವನ್ನುಂಟು ಮಾಡಿದೆ.

ತ್ರಿಬಲ್ ಆರ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದಿದ್ದು, ವಿಶೇಷ ಅಂದ್ರೆ ಕನ್ನಡದ ಸಿನಿಮಾ ಅಭಿಮಾನಿಗಳಿಗೆ ರಾಜಮೌಳಿ ಆ್ಯಂಡ್ ಟೀಂ ಭರ್ಜರಿ ಎಂಟರ್ಟೈನ್ಮೆಂಟ್ ಕೊಟ್ಟಿದೆ. ಹೌದು ಈಗಾಗಾಲೇ ರಾಜ್ಯಾರದ್ಯಂತ RRR ಸಿನಿಮಾದ ಕನ್ನಡ ವರ್ಷನ್ ರಿಲೀಸ್ ಆಗಿದ್ದು, ಹೆಚ್ಚೆಚ್ಚು ಪ್ರೇಕ್ಷಕರು ಕನ್ನಡ ವರ್ಷನ್ ನೋಡಲು ನಿರ್ಧರಿಸಿದ್ದಾರೆ. ಕಾರಣ ಥ್ರಿಬಲ್ ಆರ್ ಚಿತ್ರದ ಕನ್ನಡ ವರ್ಷನ್ ಗೆ ರಾಮ್ ಚರಣ್ ಹಾಗೂ ಜ್ಯೂ ಎನ್ ಟಿ ಆರ್ ಅವ್ರೇ ಡಬ್ಬಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಅನ್ಯ ಭಾಷೆಯ ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್‌ಗಳನ್ನು ಬಳಸಿಕೊಂಡು, ಡಬ್ ಮಾಡಿಸುತ್ತಾರೆ,. ಆದ್ರೆ ಈ ಭಾರಿ ರಾಜಮೌಳಿ ಚಿತ್ರದ ನಾಯಕರಿಂದಲೇ ಡಬ್ಬಿಂಗ್ (Dubbinng) ಮಾಡಿಸಿದ್ದಾರೆ. ಕನ್ನಡ ಸಿನಿಮಾ ಪ್ರೇಮಿಗಳ (Kannada Cine Lovers) ಮನ ಗೆದ್ದಿದ್ದಾರೆ.

RRR ನೋಡಲು ಚಿತ್ರಮಂದಿರ ಗೇಟ್‌,ಬಾಗಿಲು ಮುರಿಯಲು ಮುಂದಾದ ರಾಯಚೂರು ಅಭಿಮಾನಿಗಳು!

ಮೊದಲ ಪ್ರಯತ್ನದಲ್ಲೇ ಕನ್ನಡತನವನ್ನ ಉಳಿಸಿಕೊಂಡ ತಾರಕ್ 
ಜ್ಯೂ ಎನ್‌ಟಿ ಆರ್ ಕನ್ನಡದ ಸಿನಿಮಾರಂಗಲ್ಲಿ ಸಾಕಷ್ಟು ಸ್ನೇಹಿತರನ್ನ ಹೊಂದಿದ್ದಾರೆ. ಅದರಲ್ಲಿಯೂ ಪುನೀತ್ ಹಾಗೂ ಜ್ಯೂ ಎನ್‌ಟಿಆರ್ ಅವ್ರ ಸ್ನೇಹ ಎಲ್ಲರಿಗೂ ಗೊತ್ತಿರೋ ವಿಚಾರ ಈ ಹಿಂದೆ ಅಪ್ಪುಗಾಗಿ ಚಕ್ರವ್ಯೂಹ ಸಿನಿಮಾದಲ್ಲಿಯೂ ಗೆಳೆಯಾ ಗೆಳೆಯಾ ಹಾಡನ್ನ ಹಾಡಿದ್ರು. ಆಗ ಕನ್ನಡ ಅಷ್ಟು ಸ್ಪಷ್ಟವಾಗಿ ಹಾಡಿಲ್ಲ ಎಂದು ಮಾತು ಕೇಳಿಬಂದಿತ್ತು. ಆದ್ರೆ ಥ್ರಿಬಲ್ ಆರ್ ಸಿನಿಮಾ ನೋಡಿ ಬಂದವರು ಜ್ಯೂ ಎನ್‌ಟಿಆರ್ ಕನ್ನಡದ ಪ್ರೀತಿಗೆ ಮನಸೋತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಕನ್ನಡದ ತನವನ್ನ ಉಳಿಸಿಕೊಂಡ ಜ್ಯೂ ಎನ್‌ಟಿ‌ಆರ್ ಶ್ರದ್ಧೆಗೆ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ. ಭಾವ ತುಂಬಿ ಕನ್ನಡ ಭಾಷೆ ಮಾತನಾಡಿರೋದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇವ್ರನ್ನ ನೋಡಿ ರಶ್ಮಿಕಾ ಬುದ್ದಿ ಕಲಿಯಲಿ ಎಂದ ನೆಟ್ಟಿಗರು
ಇನ್ನು ಕನ್ನಡವರೇ ಆಗಿ, ಕನ್ನಡ ಮಾತನಾಡಲು ಬಂದರೂ ಮಾತನಾಡದೇ ಇರೋ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇವ್ರನ್ನ ನೋಡಿ ಬುದ್ದಿ ಕಲಿಯಲಿ ಅಂತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಅವ್ರೇ ಅಭಿನಯಿಸಿದ ಚಿತ್ರಕ್ಕೂ ಡಬ್ಬಿಂಗ್ ಮಾಡಲು ಸಮಯ ಇಲ್ಲ ಎಂದು ಸಬೂಬು ಕೊಡೋ ನಟಿಯ ಮೇಲೆ ಮತ್ತೆ ಕನ್ನಡಿಗರು ಕೆಂಡ ಕಾರಿದ್ದಾರೆ.. ಒಟ್ಟಾರೆ ಅದೇನೆ ಇರಲಿ ಮಾತೃ ಭಾಷೆ ಮೇಲೆ ಮಾತೃವಿನ ಮೇಲಿರುವಷ್ಟೇ ಪ್ರೀತಿ ಇರಬೇಕು ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ರು ಜ್ಯೂ ಎನ್‌ಟಿಆರ್.