ಅಪ್ಪ ಅಮ್ಮನಂತೆ ಆಡಲು ಮೈದಾನಕ್ಕಿಳಿದ ಜ್ಯೂ ಚಿರು ಸರ್ಜಾ
Junior Chiru Sarja: ಮಕ್ಕಳನ್ನು ಮೊಬೈಲ್ ಚಟದಿಂದ ಬಿಡಿಸಿ ಮೈದಾನದಲ್ಲಿ ಆಡಲು ಬಿಡಬೇಕು ಎಂಬ ಉತ್ತಮ ಸಂದೇಶವನ್ನು ಮೇಘನಾ ರಾಜ್ ಸಾರಿದ್ದಾರೆ.
ನಟ ಚಿರಂಜೀವಿ ಹಾಗೂ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಸದ್ಯ ಸ್ಟಾರ್ ಕಿಡ್ಸ್ ಗಳ ಪೈಕಿಯಲ್ಲಿ ಹೆಚ್ಚು ಆಕ್ಟಿವ್ ಹಾಗೂ ಹೆಚ್ಚು ಅಭಿಮಾನಿಗಳ ಪ್ರೀತಿ ಪಡೆದಿರೋ ಮಗು. ತಮ್ಮ ಮಗನ ವಿಡಿಯೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಮೇಘನಾ ರಾಯನ್ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಮೊಬೈಲ್ ಬಿಡಿ, ಮೈದಾನಕ್ಕೆ ನಡಿ ಎಂದ ಮೇಘನಾ ರಾಜ್.
ಈಗಾಗಲೇ ಒಂದು ವರೆ ವರ್ಷದವನಾಗಿರೋ ರಾಯನ್ ಮನೆಯಿಂದ ಹೊರ ಬಂದು ಆಟ ಆಡ್ತಿದ್ದಾನೆ...ಇತ್ತೀಚಿಗಷ್ಟೇ ರಾಯನ್ ತಮ್ಮ ಅಕ್ಕ ಪಕ್ಕದ ಮನೆ ಮಕ್ಕಳ ಜೊತೆ ಆಟ ಆಡ್ತಿರೋ ವಿಡಿಯೋವನ್ನ ನಟಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ...ವಿಡಿಯೋ ಜೊತೆಯಲ್ಲಿ ನಾನು ಹಾಗೂ ಚಿರು ಯಾವ ರೀತಿಯಲ್ಲಿ ಆಟ ಆಡಿಕೊಂಡು ಬೆಳೆದೆವೋ ಅದೇ ರೀತಿಯಲ್ಲಿ ನಾನು ರಾಯನ್ ನನ್ನ ಕೂಡ ಬೆಳೆಸಲು ಇಷ್ಟ ಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ...ಅದಷ್ಟೇ ಅಲ್ಲದೆ ಮಕ್ಕಳು ಟಿವಿಯಲ್ಲಿ ಕಾರ್ಟೂನ್ ನೋಡಲು, ಮನೆ ಒಳಗೂ ಆಟ ಆಡಲಿ ಅದೇ ರೀತಿ ಮನೆ ಹೊರಗಡೆ ಕೂಡ ಆಟ ಆಡಲು ಅವಕಾಶ ಮಾಡಿಕೊಡಿ ಎಂದು ಮೊಬೈಲ್ ಬಿಡಿ, ಮೈದಾನಕ್ಕೆ ನಡಿ ಎಂಬ ಸಂದೇಶವನ್ನು ಕೊಟ್ಟಿದ್ದಾರೆ....
ಇದನ್ನೂ ಓದಿ: ಈ ಬಾಲಿವುಡ್ ನಟಿಗೆ MNS RAJ THACKERAY ಆಗಿದ್ದರು ಫಿದಾ!
ಬ್ಯಾಟ್ ಹಿಡಿದು ರಸ್ತೆಗಿಳಿದ ಜ್ಯೂ ಚಿರು:
ಸದ್ಯ ಜ್ಯೂ ಚಿರು ಮಕ್ಕಳ ಜೊತೆ ಬ್ಯಾಟ್ ಹಿಡಿದು ಕ್ರಿಕೆಟ್ ಆಟ ಆಡುತ್ತಿರೋ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ಮೂಲಕ ಮೇಘನಾ ತಮ್ಮ ಸಿನಿಮಾ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ಪ್ರಚಾರವನ್ನೂ ಮಾಡಿದ್ದಾರೆ.
ವಿಡಿಯೋ ಮೂಲಕ ಸಿನಿಮಾ ಪ್ರಚಾರ ಮಾಡಿದ ಮೇಘನಾ:
ಕಳೆದ ವಾರ ಅಂದರೆ ಮೇ 13 ರಂದು ಮೇಘನಾ ಹಾಗೂ ಸೃಜನ್ ಅಭಿನಯದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ತೆರೆಕಂಡಿತ್ತು..ಮಧುಚಂದ್ರ ಚಿತ್ರವನ್ನ ನಿರ್ದೇಶನ ಮಾಡಿದ್ರು ಈ ಚಿತ್ರದಲ್ಲಿ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆದ್ರೆ ಎಷ್ಟು ಸಮಸ್ಯೆ ಆಗುತ್ತೆ ಈಗಿನ ಮಕ್ಕಳ ಪರಿಷ್ಥಿತಿ ಹೇಗಿದೆ ಅನ್ನೋದನ್ನ ಸಿನಿಮಾ ಮೂಲಕ ತೋರಿಸಲಾಗಿದೆ.
ಇದನ್ನೂ ಓದಿ: Casting Couch ಸಂತ್ರಸ್ತರು ನಟಿಯರಷ್ಟೇ ಅಲ್ಲ, ಬಾಲಿವುಡ್ ನಟರೂ ಅನುಭವಿಸಿದ್ದಾರಂತೆ
ರಿಯಾಲಿಟಿ ಶೋನಲ್ಲಿ ಮೇಘನಾ ಬ್ಯುಸಿ:
ಸದ್ಯ ಚಿತ್ರರಂಗದಲ್ಲಿ ನಿಧಾನವಾಗಿ ಆಕ್ಟಿವ್ ಆಗ್ತಿರೋ ಮೇಘನಾ ರಾಜ್ ರಿಯಾಲಿಟಿ ಶೋ ಜಡ್ಜ್ ಆಗಿ ಮತ್ತು ಕೆಲ ಸಿನಿಮಾಗಳಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ...ಮೇಘನಾ ಹಾಗೂ ಚಿರಂಜೀವಿ ಸರ್ಜಾ ಸ್ನೇಹಿತ ಪನ್ನಘಭರಣ ನಿರ್ಮಾಣದ ಚಿತ್ರವೊಂದರಲ್ಲಿ ಮೆಘನಾ ನಟಿಸುತ್ತಿದ್ದು, ಇರುವುದೆಲ್ಲವ ಬಿಟ್ಟು ಚಿತ್ರ ನಿರ್ದೇಶನ ಮಾಡಿದ್ದ ಕಾಂತ ಕನ್ನಲಿ ಅವ್ರ ಜೊತೆ ಶಬ್ಧ ಎನ್ನುವ ಸಿನಿಮಾ ಮಾಡ್ತಿದ್ದಾರೆ.