'ಜೋಶ್' ನಾಯಕಿ ಪೂರ್ಣಾ ಗಂಡು ಮಗುವಿಗೆ ಜನ್ಮ ನೀಡಿದದ್ದಾರೆ. ದುಬೈ ಆಸ್ಪತ್ರೆಯಲ್ಲಿ ನಟಿ ಮಗುವಿಗೆ ಜನ್ಮ ನೀಡಿದ್ದು ಫೋಟೋ ಹಂಚಿಕೊಂಡಿದ್ದಾರೆ.
ಬಹುಭಾಷಾ ನಟಿ, ಜೋಶ್ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಗೆದ್ದ ನಟಿ ಪೂರ್ಣಾ ತಾಯಯಾದ ಸಂಭ್ರಮದಲ್ಲಿದ್ದಾರೆ. ಪೂರ್ಣಾ ಮೂಲ ಹೆಸರು ಶಾಮ್ನಾ ಕಾಸೀಮ್. ಆದರೆ ಪೂರ್ಣ ಹೆಸರಿನ ಮೂಲಕವೇ ಖ್ಯಾತಿಗಳಿಸುವ ನಟಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದುಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪೂರ್ಣಾ ಅಲಿಯಾಸ್ ಶಮ್ನಾ ಕಾಸಿಮ್ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಜೊತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಮನೆಗೆ ಮಗ ಬಂದಿರುವ ಸಂತಸದ ವಿಚಾರವನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಗಂಡು ಮಗು ಆಗಮಿಸಿದ್ದಾನೆ. ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಪೂರ್ಣ ಮತ್ತು ಶಾನಿದ್ ದಂಪತಿ ಮಗನ ಜೊತೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ ಮಗನ ಮುಖ ರಿವೀಲ್ ಮಾಡಿಲ್ಲ. ಫೆಬ್ರವರಿ ತಿಂಗಳಲ್ಲಿ ನಟಿ ಪೂರ್ಣ ಸೀಮಂತ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿದ್ದರು. ಒಂದಿಷ್ಟು ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದರು. ಕೆಂಪು ಬಣ್ಣದ ಜೆರಿ ಸೀರೆಯಲ್ಲಿ ಪೂರ್ಣ ಮಿಂಚಿದ್ದರು.
ಮದುವೆ ಆದ 3 ತಿಂಗಳಿಗೆ 'ಜೋಶ್' ನಟಿ ಪೂರ್ಣ ಪ್ರೆಗ್ನೆಂಟ್; 5 ತಿಂಗಳ ಬೇಬಿ ಬಂಪ್ ಫೋಟೋಗಳಿದು
ಇನ್ನು ಸಿನಿಮಾ ಬಗ್ಗೆ ಹೇಳುವುದಾರೆ ಶಮ್ನಾ ಬಹುಭಾಷೆಯಲ್ಲಿ ಮಿಂಚಿದ್ದಾರೆ. 2004ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಮ್ನಾ ಮಲಯಾಳಂನ ಮಂಜು ಪೋಲೂರು ಪೆಂಕುಟ್ಟಿ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ಕನ್ನಡದ ಜೋಶ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮಿಂಚಿದರು. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಳಿಕ ದೊಡ್ಡ ಸ್ಟಾರ್ ಆದರು. ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು. ಈ ಸಿನಿಮಾ ಮೂಲಕ ಶಮ್ನಾ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮಿಂಚಿದರು. ಈ ಸಿನಿಮಾ ಮೂಲಕ ಪೂರ್ಣ ಮತ್ತೆ ದೊಡ್ಡ ಖ್ಯಾತಿಗಳಿಸಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಜೋಶ್' ನಟಿ ಶಮ್ನಾ; ಹುಡುಗ ಯಾರು? ಇಲ್ಲಿದೆ ಸಂಪೂರ್ಣ ವಿವರ
ಕೊನೆಯದಾಗಿ ನಟಿ ಪೂರ್ಣ ದಸರ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಾನಿ ನಟನೆಯ ದಸರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತ ಸದ್ಯ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಸದ್ಯ ತಾಯಿಯಾದ ಸಂಭ್ರಮದಲ್ಲಿರುವ ಪೂರ್ಣ ಮತ್ತೆ ಸಿನಿಮಾಗೆ ವಾಪಾಸ್ ಆಗ್ತಾರಾ ಕಾದು ನೋಡಬೇಕಿದೆ.
