Asianet Suvarna News Asianet Suvarna News

'ಏಕ್ ಲವ್ ಯಾ' ಬಿಡುಗಡೆ ದಿನಾಂಕ ತಿಳಿಸಿದ ಜೋಗಿ ಪ್ರೇಮ್!

* ಏಕ್ ಲವ್ ಯಾ  ಚಿತ್ರದ ಬಿಡುಗಡೆ ದಿನಾಂಕ ಫಿಕ್ಕ
* ಮುಂದಿನ ವರ್ಷದ ಆರಂಭಕ್ಕೆ ದೊಡ್ಡ ಕೊಡುಗೆ
* ಬಿಡುಗಡೆ ದಿನಾಂಕ ತಿಳಿಸಿದ ಜೋಗಿ ಪ್ರೇಮ್
*  ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಚಿತಾ ರಾಮ್

Jogi Prem s musical visual treat Raanna and Rachita Ram Ek Love Ya gets a release date
Author
Bengaluru, First Published Oct 15, 2021, 7:33 PM IST
  • Facebook
  • Twitter
  • Whatsapp

ಬೆಂಗಳೂರು(ಅ. 15)  ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಚಿತ್ರದ ಬಿಡುಗಡೆ (Release) ದಿನಾಂಕವನ್ನು ಅನೌನ್ಸ್ (Announce) ಮಾಡಿದೆ. 

ಹೌದು! ಈ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್  2022  ಜನವರಿ 21ನೇ ತಾರೀಖು ಕನ್ನಡ (Kannada), ತಮಿಳು (Tamil), ತೆಲುಗು (Telugu), ಮತ್ತು ಮಲಯಾಳಂ (Malayalam) ಭಾಷೆಗಳಲ್ಲಿ ಏಕಕಕಾಲಕ್ಕೆ 'ಏಕ್ ಲವ್ ಯಾ' ಚಿತ್ರ ತೆರೆ ಕಾಣಲಿದೆ ಎಂದು ಟ್ವೀಟ್ (Tweet) ಮಾಡಿದ್ದಾರೆ. ಜೊತೆಗೆ ನಾಯಕನ ಮೋಷನ್ ಪೋಸ್ಟರ್‌ನ್ನು (Motion Poster) ಹಂಚಿಕೊಂಡಿದ್ದಾರೆ.

ರಚಿತಾ ರಾಮ್ ಕೈಯಲ್ಲಿ ಸಿಗರೇಟು..ಲಿಪ್ ಲಾಕ್!

ಈ ಚಿತ್ರದ ನಾಯಕ ಅಭಿಷೇಕ್ (Abhishek) (ರಾಣಾ)  ರಕ್ಷಿತಾ ಸಹೋದರ, ಹಾಗಾಗಿ ಅಕ್ಕ-ಭಾವನ ಸಿನಿಮಾ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿರುವ 'ಅಭಿರಾಣಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಆಂಡ್ ಲವ್ ಸೆಂಟಿಮೆಂಟ್ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಪ್ರೇಮ್ ಭಾಮೈದುನ ಸಿನಿಮಾಗೆ ವಿಭಿನ್ನ ಕಥೆ ಹೆಣೆದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ (Arjun Janya) ಸಂಗೀತದಲ್ಲಿ ಹಾಡುಗಳು ಮೂಡಿಬಂದಿದ್ದು, ವಿಶೇಷವಾಗಿ ತೆಲುಗು ಗಾಯಕಿ ಮಂಗ್ಲಿ (Mangli) ಎಣ್ಣಿ ಸಾಂಗ್ ಹಾಡಿದ್ದಾರೆ. ಜೊತೆಗೆ ಅರ್ಮಾನ್ ಮಲಿಕ್ (Arman Malik) ಹಿನ್ನೆಲೆ ಗಾಯನದಲ್ಲಿ 'ಯಾರೆ ಯಾರೆ' ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿತ್ತು.

"

ಇತ್ತೀಚೆಗಷ್ಟೇ  ಚಿತ್ರದ ಕೊನೆಯ ಶೆಡ್ಯೂಲ್‌ನ್ನು ಮುತ್ತತ್ತಿಯಲ್ಲಿ ಮಾಡಲಾಗಿದ್ದು, ಅಲ್ಲಿನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಇಡೀ ತಂಡ ಅಂತಿಮಗೊಳಿಸಿತ್ತು. ತಮ್ಮ ಚಿತ್ರದಡಿ ಕೆಲಸ ಮಾಡಿದ ಪ್ರತಿಯೊಬ್ಬ ಸದಸ್ಯನ ಜೊತೆಯೂ, ರಕ್ಷಿತಾ ಪ್ರೇಮ್ ಫೋಟೋ ಕ್ಲಿಕ್ಕಿಸಿಕೊಂಡು 'ನನ್ನ ತಂಡದಲ್ಲಿದ್ದ ಪ್ರತಿಯೊಬ್ಬ ತಂತ್ರಜ್ಞರು, ಕಲಾವಿದರು ಹಾಗೂ ಈ ಪ್ರಾಜೆಕ್ಟ್ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಯೂಟಿಫುಲ್ ಜರ್ನಿ ನೀವಿಲ್ಲದೆ ಸುಲಭವಾಗಿ ಸಾಗುತ್ತಿರಲಿಲ್ಲ. ಅದರಲ್ಲೂ ಈ ತಂಡದಲ್ಲಿ ಎಲ್ಲರೂ ಹಾರ್ಡ್‌ ವರ್ಕಿಂಗ್ ಬಾಯ್ಸ್ ಇದ್ದಾರೆ,' ಎಂದು ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದರು.   

'ಇದೊಂದು ಅದ್ಭುತ ಚಿತ್ರವಾಗಿ ಬರಲಿದೆ. ನೀವು ಖಂಡಿತ ಎಂಜಾಯ್ ಮಾಡುತ್ತೀರಾ ಎಂದು ಭಾವಿಸುವೆ. ಐ ಲವ್ ಯು 'ಏಕ್ ಲವ್ ಯಾ' ಟೀಂ. ಹೀಗೆ ಮುಂದಕ್ಕೂ ಒಟ್ಟಿಗೆ ಕೆಲಸ ಮಾಡೋಣ,' ಎಂದು ಇಡೀ ಕುಟುಂಬದ ಬಗ್ಗೆ ರಕ್ಷಿತಾ ಪ್ರೇಮ್ ಹಾಡಿ ಹೊಗಳಿದ್ದರು. ಇನ್ನು ಈ ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಇನ್ನೊಂದು ಮುಖ್ಯ ಪಾತ್ರದಲ್ಲಿ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದ್ದು, ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟು ಸೇದಿ, ಲಿಪ್‌ ಲಾಕ್‌ ಕೂಡ ಮಾಡಿದ್ದಾರೆ.

 

Follow Us:
Download App:
  • android
  • ios