ಬಿಡುಗಡೆ ಆದ ಒಂದೇ ದಿನದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡು, ಸಲಗ ತಂಡ. ಸೆನ್ಸಾರ್ ಮಂಡಳಿ ಎದುರು ಪ್ರತಿಭಟನೆ ಜೋರು.....  

ಕೊರೋನಾದಿಂದ ದೊಡ್ಡ ಹೊಡೆತ ತಿಂದ ಕನ್ನಡ ಚಿತ್ರರಂಗ (Sandalwood) ಕರ್ನಾಟಕ ಸರ್ಕಾರ ನೀಡಿದ ಫುಲ್ ಸೀಟಿಂಗ್ ಅನುಮತಿಯಿಂದ ನಿಟ್ಟುಸಿರು ಬಿಟ್ಟಿದೆ. ಚಿತ್ರಮಂದಿರ ಹೌಸ್‌ಫುಲ್ ಆಗಬೇಕು, ನಿರ್ಮಾಪಕರಿಗೆ ಒಳ್ಳೆಯದು ಆಗಬೇಕು ಅಂದ್ರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕು. ಹೀಗಾಗಿ ಸಿನಿ ರಸಿಕರ ಗಮನ ಸೆಳೆಯಲು ಅಕ್ಟೋಬರ್ 14ರಂದು ಬಿಗ್ ಬಜೆಟ್ ಸಿನಿಮಾ ಸಲಗ (Salaga) ಬಿಡುಗಡೆಯಾಗಿದೆ 

ಬೆಳಗ್ಗೆ ಆರಂಭವಾದ ಫಸ್ಟ್‌ ಫ್ಯಾನ್ ಶೋನಿಂದ ಹಿಡಿದ ದಿನದ ಕೊನೆ ಶೋವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಲಗ ಮತ್ತು ಸಾಮ್ರಾಟ್‌ ಇಡೀ ಚಿತ್ರವನ್ನು ಅದ್ಭುತವಾಗಿ ತೆಗೆದುಕೊಂಡು ಹೋಗಿದ್ದಾರೆ, ಮಾಸ್ ಸಿನಿಮಾವಾದರೂ, ಕಾಮಿಡಿ ಆ್ಯಂಡ್ ಲವ್ ಇದೆ ಎಂದು ಎಲ್ಲೆಡೆ ವಿಮರ್ಶೆ (Review) ಕೇಳಿ ಬರುತ್ತಿದೆ. ಆದರೆ ಈ ಸಮಯದಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಬೇಕು ಎಂದು ಜಯ ಕರ್ನಾಟಕ (Jaya Karnataka) ಸಂಘದವರು ಸೆನ್ಸರ್ ಮಂಡಳಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. 

ದುನಿಯಾ ವಿಜಯ್-ಡಾಲಿ ಧನಂಜಯ್ ಅಭಿನಯದ 'ಸಲಗ' ಸಿನಿಮಾ ಹೇಗಿದೆ?

ಸಲಗ ಸಿನಿಮಾದಲ್ಲಿ ಕೆಟ್ಟ ಪದಗಳನ್ನು ಬಳಸಿದ್ದಾರೆ. ಕುಟುಂಬದವರು, ಮಕ್ಕಳು, ದೊಡ್ಡವರು ನೋಡುವಂತ ಸಿನಿಮಾ ಇದಲ್ಲ. ಸಿನಿಮಾ ನೋಡಿದವರಿಗೆ ಮುಜುಗರ ಆಗುತ್ತದೆ. ನಾವು ಸಿನಿಮಾ ನೋಡಿದ್ದೇವೆ. ಒಂದು ಸಿನಿಮಾ ಮಾಡೋಕೆ ಎಷ್ಟು ಕಷ್ಟ ಅಂತ ನಮಗೆ ಗೊತ್ತಿದೆ. ಆದರೆ ಇದರಲ್ಲಿ ನಮ್ಮ ಸಂಸ್ಕೃತಿಯನ್ನು ಕೆಟ್ಟದಾಗಿ ತೋರಿಸಲಾಗಿದೆ. ನಮ್ಮ ಸೆನ್ಸರ್ ಮಂಡಳಿ ಸರ್ಟಿಫಿಕೆಟ್ (Central Board of Film Certification) ಕೊಡುವಾಗ ನೋಡಿ ಕೊಡಬೇಕಿತ್ತು. ಎ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಆದರೆ ಸಿನಿಮಾದಲ್ಲಿ ಕೆಟ್ಟ ಪದಗಳೇ ತುಂಬಿಕೊಂಡಿವೆ, ಎಂದು ಜಯಕರ್ನಾಟಕ ಸಂಘಟನಾ ಕಾರ್ಯದರ್ಶಿ ಶೈಲಜಾ ಮಂಜುನಾಥ್ (Shylaja Manjunath) ಹೇಳಿದ್ದಾರೆ. 

ಪ್ರದರ್ಶನ ರದ್ದು ಮಾಡಬೇಕು ಎಂದು ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಸೆನ್ಸಾರ್ ಮಂಡಳಿ ಇಂದು ರಜೆ ಇರುವ ಕಾರಣ ತೆರೆದ ಮೇಲೆ ಬನ್ನಿ ಎಂದು ಕೋರಮಂಗಲ ಪೊಲೀಸರು (Koramangala Police) ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. 

ಸಲಗ ಚಿತ್ರ ಹೇಗಿದೆ ಎಂಬುದರ ಬಗ್ಗೆ ದುನಿಯಾ ವಿಜಯ್ (Duniya Vijay) ಅವರ ಪತ್ನಿ ಕೀರ್ತಿ (Keerthi) ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಿ, ಮಾತನಾಡಿದ್ದಾರೆ. ' ಅಭಿಮಾನಿಗಳು ಪ್ರತಿಯೊಂದೂ ಸೀನ್ ಎಂಜಾಯ್ ಮಾಡುತ್ತಿದ್ದರು. ಎಲ್ಲಾ ಕ್ಯಾರೆಕ್ಟರ್ ಬಂದ್ರೂ ಜೋರಾಗಿ ಕೂಗುತ್ತಿದ್ದರು. ಫ್ಯಾನ್ಸ್ ಜೊತೆ ಸಿನಿಮಾ ನೋಡೋಕೆ ಖುಷಿ ಆಗುತ್ತಿದೆ. ವಿಜಯ್ ಅವರು ತುಂಬಾ ಒಳ್ಳೆಯ ಲೀಡರ್, ನಟನೆಯಲ್ಲಿ ಆಗಲೇ ತಾವು ಹೇಗೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಡೈರೆಕ್ಟರ್ ಆಗಿ ನನಗೆ ನಂಬಿಕೆ ಇತ್ತು. ಏಕೆಂದರೆ ಅವರು ಸ್ಕ್ರಿಪ್ಟ್‌ಗೆ ನೀಡುತ್ತಿದ್ದ ಸಮಯ ನಾನು ನೀಡಿದ್ದೀನಿ. ಸಿನಿಮಾ ಹಾಡುಗಳು ಇಷ್ಟ ಪಟ್ರು, ಪಬ್ಲಿಸಿಟಿ ಚೆನ್ನಾಗಿತ್ತು. ಚಿತ್ರರಂಗದ ಸ್ಟಾರ್ ವಿಶ್ ಮಾಡಿದ್ದಾರೆ. ಸಕ್ಸಸ್ ಸಿಗುತ್ತೆ ಅಂತ ಗೊತ್ತಿತ್ತು. ರಿಯಾಲಿಟಿ ಏನಿದೆಯೋ ಅದೇ ಪರದೆ ಮೇಲೆ ತೋರಿಸಿದ್ದಾರೆ. ಇನ್ ಮುಂದೆ ದುನಿಯಾ ವಿಜಯ್ ಅವರನ್ನು ಯಾರೂ ಮುಟ್ಟೋಕೆ ಆಗೋಲ್ಲ. ಕೊಬ್ಬಿನಿಂದ ಹೇಳಿಕೊಳ್ಳುತ್ತಿಲ್ಲ ಪ್ರೀತಿಯಿಂದ ಹೇಳುತ್ತಿರುವೆ,' ಎಂದು ಮಾತನಾಡಿದ್ದಾರೆ.

"