Asianet Suvarna News Asianet Suvarna News

Jaggesh ಕನ್ನಡಿಗರಿಗೆ ನಾಚಿಕೆ ಆಗ್ಬೇಕು, ನಾವ್ಯಾಕೆ ಬೇಲಿ ಹಾಕ್ಕೊಂಡಿದ್ದೇವೆ: ಜಗ್ಗೇಶ್‌

ತೋತಾಪುರಿ ಎಲ್ಲರ ಮನ ಗೆದ್ದಿದೆ ಎಂದೇಳಿದ ನಿರ್ದೇಶಕ ವಿಜಯಪ್ರಸಾದ್‌. ಸಕ್ಸಸ್‌ ಮೀಟ್‌ನಲ್ಲಿ ಮಾತನಾಡಿದ ಸಿನಿಮಾ ತಂಡ...

Jaggesh talks about totapuri film success vcs
Author
First Published Oct 8, 2022, 9:56 AM IST

‘ಕನ್ನಡಿಗರಿಗೆ ನಾಚಿಕೆ ಆಗ್ಬೇಕು. ತಮಿಳು ಸಿನಿಮಾ ಎಲ್ಲ ಹೊಡ್ಕೊಂಡು ಹೋಗ್ತಾ ಇದೆ, ರಜನೀಕಾಂತ್‌ರಂಥಾ (Rajinikanth) ನಟರೂ ಆ ಸಿನಿಮಾ ಪರ ಪ್ರಚಾರ ಮಾಡುತ್ತಾರೆ. ಅವರ ಅಭಿಮಾನಿಗಳೆಲ್ಲ ಸಿನಿಮಾ ನೋಡಿದ ಕಾರಣ ಉತ್ತಮ ಕಲೆಕ್ಷನ್‌ ಆಗ್ತಿದೆ. ನಾವ್ಯಾಕೆ ಬೇಲಿ ಹಾಕ್ಕೊಂಡಿದ್ದೇವೆ, ನಮ್ಮವರು ನಮ್ಮ ಸಿನಿಮಾ ಬಗ್ಗೆ ಪರಸ್ಪರ ಪ್ರಚಾರ, ಪ್ರೀತಿ ಯಾಕೆ ತೋರಿಸ್ತಿಲ್ಲ, ನಾನೇ ನಂದೇ ಬೆಸ್ಟುಅಂತ ಯಾಕಂತಾರೆ? ಈ ಥರ ಆದ್ರೆ ಒಂದಿನ ಅನಾಥ ಭಾವ ಅವರನ್ನು ಕಾಡುತ್ತೆ’

ತೋತಾಪುರಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಿಟ್ಟಿನಲ್ಲೇ ಮಾತು ಶುರು ಮಾಡಿದ ಜಗ್ಗೇಶ್‌ ತಮ್ಮ ಸಿನಿಮಾವನ್ನು ಟೀಕಿಸಿದವರ ಬಗೆಗೂ ಅಸಮಾಧಾನ ಹೊರ ಹಾಕಿದರು. ‘ನಮ್ಮ ತೋತಾಪುರಿ ಚಿತ್ರ ದಸರಾದ ಗಜದ ಹಾಗೆ ಗಂಭೀರವಾಗಿ ಸಾಗ್ತಿದೆ. ಆರಂಭದಿಂದಲೂ ಪ್ರದರ್ಶನದಲ್ಲಿ ಸ್ಥಿರತೆ ಕಂಡುಕೊಂಡಿದೆ’ ಎಂದರು.

‘ತೋತಾಪುರಿಯಲ್ಲಿ (Totapuri) ಜಾತೀಯತೆಯನ್ನು ಪ್ರಶ್ನಿಸಲಾಗಿದೆ. ನನಗೆ ಮೊದಲಿಂದಲೂ ಜಾತಿ ಪದ್ಧತಿ ವಿರೋಧಿ. ಅಂತರ್‌ಜಾತೀಯ ಮದುವೆ ಆದವನು. ಚಿತ್ರದಲ್ಲಿ ರಾಯರ ಮಠಕ್ಕೆ ಸಂಬಂಧಿಸಿದಂತೆ ಬಂದಿರುವ ದೃಶ್ಯಗಳಿಗೆ ಬಗ್ಗೆ ವಿರೋಧ ಬಂದಿದೆ. ಆದರೆ ಅಂಥಾ ಘಟನೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ರಾಯರ ಭಕ್ತ. ರಾಯರು ಮನುಷ್ಯರನ್ನಷ್ಟೇ ನೋಡಿದವರು, ಅವರ ಜಾತಿ, ಧರ್ಮವನ್ನಲ್ಲ’ ಎಂದರು.

ನಿರ್ದೇಶಕ ವಿಜಯ ಪ್ರಸಾದ್‌ (Vijay Prasad), ‘ ಚಿತ್ರ ಬಿಡುಗಡೆ ಆಗಿ ಎಲ್ಲರ ಮನಗೆದ್ದಿದೆ. ಕಲೆಕ್ಷನ್‌ ಚೆನ್ನಾಗಿದೆ. ನಾವು ಮಾತಾಡೋದಕ್ಕಿಂತ ಕೆಲಸ ಮಾತಾಡ್ತಿರೋದು ಖುಷಿ ತಂದಿದೆ. ಇದಕ್ಕೆ ಮಹಿಳಾ ಆಡಿಯನ್ಸ್‌ ಹೆಚ್ಚಿದ್ದರು. ಸಿನಿಮಾದಲ್ಲಿ ಗಟ್ಟಿವಿಚಾರ, ಚೇಷ್ಟೆಎಲ್ಲವನ್ನೂ ಜನ ಮೆಚ್ಚಿಕೊಂಡಿದ್ದಾರೆ’ ಎಂದರು.

ನಿರ್ಮಾಪಕ ಕೆ ಎ ಸುರೇಶ್‌, ನಟಿ ಹೇಮಾ ದತ್‌ (Hema dath) ಉಪಸ್ಥಿತರಿದ್ದರು.

ಜಗ್ಗೇಶ್‌ ಮಾತುಗಳು:

'ನಾನು ಕಾಲೇಜ್‌ ಪಕ್ಕದಲ್ಲಿರುವುದು ಹೀಗಾಗಿ ಆ ಮಕ್ಕಳು ಮಾತನಾಡುವುದು ಗೊತ್ತಿದೆ. ಇಂದು ಆಪ್‌ಗಳ ಮೂಲಕ ನಾವು ನೇರವಾಗಿ ಎಲ್ಲವನ್ನು ನೋಡುತ್ತಿದ್ದೇವೆ ಆದರೆ ಡೈಲಾಗ್ ಮಾತನಾಡಿದರೆ ಮಾತ್ರ ಬೋಧನೆ ಶುರುವಾಗುತ್ತದೆ. ನಾನು ಯಾವುದೋ ಕಾಲದಲ್ಲಿ ಈ ತರ ಡೈಲಾಗ್ ಹಿಡೆದಿದ್ದೇನೆ. ನಿರ್ದೇಶಕ ವಿಜಯ್ ವಿಜಯ್ ಪ್ರಸಾದ್ ಈ ತರ ಸ್ಕ್ರಿಪ್ಟ್ ಬರೆಯುವುದು ಜನರ ಗಮನ ಸೆಳೆಯುವುದಕ್ಕೆ ಅಷ್ಟೆ. ನೇರವಾಗಿ ಹೇಳಿದರೆ ಯಾರೂ ಕೇಳಿಸಿಕೊಳ್ಳುವುದಿಲ್ಲ ಟ್ವಿಸ್ಟ್ ಮಾಡಿ ಹೇಳಿದರೆ ಅದನ್ನು ಗ್ರಹಿಸುತ್ತಾರೆ' ಎಂದು ಜಗ್ಗೇಶ್ ಮಾತನಾಡಿದ್ದಾರೆ. 

'20ನೇ ವಯಸ್ಸಿನಲ್ಲಿ ನಾನು ಅಂತರ್ಜಾತಿ ಮದುವೆ ಮಾಡಿಸಿದ್ದೆ ಆಗ ನನ್ನ ಕುಟುಂಬದವರು 10 ವರ್ಷಳ ಕಾಲ ನನ್ನನ್ನು ದೂರ ಇಟ್ಟಿದ್ದರು. ನಾನು ಜಾತಿ ಅಂದರೆ ಮುಖಕಕ್ಕೆ ಹೊಡೆಯುತ್ತೇನೆ. ಎಲ್ಲರೂ ಒಂದೇ ಎಂದು ನಾನು ಭಾವಿಸುತ್ತೇನೆ. ನಾನು ಸೂಪರ್ ಸ್ಟಾರ್ ನಟ, ಡೈರೆಕ್ಟರ್‌ ಮಗನೂ ಅಲ್ಲ ಅಥವಾ ನನ್ನ ಹಿಂದೆ ದೊಡ್ಡ ಪ್ರೊಡಕ್ಷನ್‌ ಹೌಸ್‌ ಕೂಡ ಇಲ್ಲ. ಯಾರೇ ನನ್ನನ್ನು ದ್ವೇಷ ಮಾಡಿದ್ದರೂ ಕೂಡ ನನಗೆ ಅರ್ಥ ಆಗುವುದಿಲ್ಲ. ಒಳ್ಳೆಯದಾಗಲಿ ಎಂದು ಹೇಳುವ ಸಂಸ್ಕೃತಿ ನನ್ನದು. ಸಿನಿಮಾದಲ್ಲಿ ಕಾಮಿಡಿ ಮಾಡುವ ನಾನು ನಿಜ ಜೀವನದಲ್ಲಿ ಕಾಂತ್ರಿ ಇರುವ ವ್ಯಕ್ತಿ. ಈ ಪ್ರಪಂಚದಲ್ಲಿ ಜಾತಿ ಇರಬಾರದು ಎಂದು ಪ್ರಾಮಾಣಿಕ ಕಡಿ ಇತ್ತು. ಹೀಗಾಗಿ ಅಂತರ್ಜಾತಿ ವಿವಾಹ ಮಾಡಿಸಿರುವೆ. ನನ್ನ ಮಗ ಕೂಡ ಬೇರೆ ದೇಶದವರನ್ನು ಮದುವೆಯಾಗಿದ್ದಾನೆ ಚೆನ್ನಾಗಿದ್ದಾನೆ. ಆ ಬಗ್ಗೆ ನನಗೆ ತುಂಬಾನೇ ಖುಷಿ ಇದೆ' ಎಂದು ಜಗ್ಗೇಶ್ ಹೇಳಿದ್ದಾರೆ.

'ನಟನೆ ನನ್ನಿಂದ ಎಲ್ಲವನ್ನು ಕಿತ್ತುಕೊಂಡರೂ ತೊಂದರೆ ಇಲ್ಲ ಆದರೆ ರಾಯರು ದೂರವಾದರೆ ನನ್ನ ಸಾವಾಗಲಿ. ನಾನು ಶೂದ್ರನಾದರೂ ನನ್ನನ್ನು ಬೃಂದಾವನದ ಮುಂದೆ ಕೂರಸ್ತಾರೆ ಅಲ್ಲಿ ವಿಷ್ಣುಸಹಸ್ರನಾಮ ಓದಿ ನನ್ನ ಎಲ್ಲ ಪೂಜೆ ಮುಗಿಸಿ ಬರುತ್ತೇನೆ ಅದು ನಮ್ಮ ಮಠ.  ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತಿ ವರ್ಷ ಗಣಪತಿ ಪೂಜೆ ಮಾಡ್ತಾರೆ ಅವರಿಗೆ ಮನಸ್ಸು ವಿಶಾಲವಾಗಿದೆ, ಈ ಧರ್ಮದವರು ಆ ಧರ್ಮದವರಿಗೆಎ ಬೈತಾರೆ ಆ ಧರ್ಮದವರು ಈ ಧರ್ಮಮದವರಿಗೆ ಬೈತಾರೆ' ಎಂದಿದ್ದಾರೆ ಜಗ್ಗೇಶ್.

Follow Us:
Download App:
  • android
  • ios