ಗೀತೆ ರಚನೆಕಾರ ಹಾಗೂ ನಿರ್ದೇಶಕ ಕವಿರಾಜ್ ಈಗ ಹೊಸದೊಂದು ಗಿಮಿಕ್ ಮಾಡಲು ಹೊರಟಿದ್ದಾರೆ. ಅವರೀಗ ಆ್ಯಕ್ಷನ್ ಕಟ್ ಹೇಳಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಪ್ರಚಾರಕ್ಕೆ ವಿಭಿನ್ನ ತಂತ್ರ ಹೆಣೆದಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಜಗ್ಗೇಶ್ ಅಭಿನಯದ ಚಿತ್ರ ಎನ್ನುವ ಟ್ರಂಪ್ ಕಾರ್ಡ್ ಇದೆ. ಅದರ ಜತೆಗೆ ಇದು ಆರಂಭದಿಂದಲೂ ವಿಭಿನ್ನ ಬಗೆಯ ಟೈಟಲ್ ಮೂಲಕವೂ ಸುದ್ದಿ ಮಾಡುತ್ತಾ ಬಂದಿದೆ.

ಹಾಗೆಯೇ ಚಿತ್ರದ ಟೀಸರ್ ಕೂಡ ಸಾಕಷ್ಟು ಸೋಷಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡ್ ಮಾಡಿತ್ತು. ಅವುಗಳ ಜತೆಗೀಗ ಪ್ರೇಕ್ಷಕರನ್ನು ಮುಟ್ಟಲು ಸ್ಪೆಷಲ್ ಸಾಂಗ್‌ವೊಂದನ್ನು ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದು, ಅದರಲ್ಲಿ ಕನ್ನಡದ 21 ಸ್ಟಾರ್ ನಟಿಯರನ್ನೇ ತೋರಿಸಲು ಮುಂದಾಗಿರುವುದು ವಿಶೇಷ.

ರಕ್ಷಿತ್ ಶೆಟ್ಟಿ VS ರಶ್ಮಿಕಾ ಮಂದಣ್ಣ ಒಂದೇ ದಿನ ಧಮಾಕಾ!

ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ಪೈಕಿ ರಚಿತಾ ರಾಮ್, ಹರಿಪ್ರಿಯಾ, ಅದಿತಿ ಪ್ರಭುದೇವ್, ನಿಶ್ವಿಕಾ ನಾಯ್ಡು, ಸೋನು ಗೌಡ, ಸಂಯುಕ್ತಾ ಹೊರನಾಡು, ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ ಇದ್ದಾರೆ. ಮಲ್ಟಿಸ್ಟಾರ್ಸ್ ಸಿನಿಮಾದ ಹಾಗೆ ಇದೊಂದು ಮಲ್ಟಿಸ್ಟಾರ್ಸ್ ಅಭಿನಯದ ಸ್ಪೆಷಲ್ ಸಾಂಗ್. ಹಿಂದಿಯಲ್ಲಿ ಬಂದ ‘ಓಂ ಶಾಂತಿ ಓಂ’ ಚಿತ್ರದ ಹಾಡಿನ ಶೈಲಿ ಇದು. ಕನ್ನಡಕ್ಕೆ ಇದೊಂದು ಹೊಸ ಪ್ರಯೋಗ. ಬಹಳಷ್ಟು ನಟರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿರಬಹುದು. ಆದರೆ ಚಾಲ್ತಿಯಲ್ಲಿರುವ ಅಷ್ಟು ಸ್ಟಾರ್ ನಟಿಯರೇ ಒಂದೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲು.

ಎಲ್ಲಿ ಹೋದರೂ ಸಂಭಾವನೆ ಕಿರಿಕ್; ತೆಲುಗು ಸಿನಿಮಾದಿಂದ ಔಟ್?

ನಿರ್ದೇಶಕ ಕವಿರಾಜ್ ನೀಡಿರುವ ಮಾಹಿತಿ ಪ್ರಕಾರ ತಾರೆಯರ ದಂಡೇ ಇಲ್ಲಿದೆ. ಮದುವೆ ನಂತರ ಬಹುತೇಕ ನಟನೆಯಿಂದ ದೂರ ಉಳಿದಿರುವ ಅಮೂಲ್ಯ ಕೂಡ ಈ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಜತೆಗೆ ಶುಭ ಪೂಂಜಾ, ರೂಪಿಕಾ, ಸಿಂಧು ಲೋಕನಾಥ್, ದಿಶಾ ಪೂವಯ್ಯ, ಕೃಷಿ ತಪಂಡ, ದಿವ್ಯಾ ಉರುಡಗ ಕೂಡ ಕುಣಿದಿದ್ದಾರೆ. ಹಾಗೆಯೇ ಹಿರಿಯ ನಟ ಜೈಜಗದೀಶ್ ಪುತ್ರಿಯರಾದ ವೈಸಿರಿ, ವೈನಿಧಿ ಹಾಗೂ ವೈಭವಿ ಕೂಡ ಇದ್ದಾರೆ. 

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿವೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂಥದ್ದೊಂದು ಕಥಾ ಹಂದರ ಇಟ್ಟುಕೊಂಡು ಕಾಳಿದಾಸ ಕನ್ನಡ ಮೇಷ್ಟ್ರು ಎನ್ನುವ ಸಿನಿಮಾವೊಂದು ತೆರೆಗೆ ಬರುತ್ತಿದೆ. 

ಅಕ್ಟೋಬರ್ 23ರ ಟಾಪ್ 10 ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: