ಬೆಂಗಳೂರು(ಅ. 22) ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾಗಳು ಒಂದೇ ದಿನ ತೆರೆಯಲ್ಲಿ ಮುಖಾಮುಖಿಯಾಗಲಿವೆ. ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ "ಅವನೇ ಶ್ರೀಮನ್ನಾರಾಯಣ" ಮತ್ತು ಧ್ರುವ ಸರ್ಜಾ ಹಾಗೂ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಒಂದೇ ದಿನ ತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷದ ಕೊನೆಗೆ ಕನ್ನಡ ಚಿತ್ರರಸಿಕರಿಗೆ ಡಬಲ್ ಕಪೊಡುಗೆಯೂ ಇದೆ. ನಂದ ಕಿಶೋರ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಪೊಗರು ಹಾಗೂ ರಕ್ಷಿತ್ ಶೆಟ್ಟಿ ನಟನೆಯ, ನಿರ್ದೇಶಕರಾಗಿ ಸಚಿನ್ ರವಿ ಅವರ ಮೊದಲ ಸಿನಿಮಾ ಅವನೇ ಶ್ರೀಮನ್ನಾರಾಯಣ ಡಿ.27 ರಂದು ಬಿಡುಗಡೆಯಾಗಲಿವೆ.

ಜನ್ಮಾಷ್ಟಮಿಯ;ಲ್ಲಿ ಹುಲಿ ಹಾಡಿಗೆ ರಕ್ಷಿತ್ ಡಾನ್ಸ್ 

ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಹೊಸದಾಗಿ ಪ್ರಕಟಿಸಿದೆ. ಹಾಗಾಗಿ ಎರಡು ಚಿತ್ರಗಳು ಒಂದೇ ದಿನ ತೆರೆ ಮೇಲೆ ಬರಲಿವೆ. 2019 ರ ಡಿ.27 ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯ 3 ನೇ ವಾರ್ಷಿಕೋತ್ಸವದ ದಿನ ಸಹ ಆಗಿದೆ.

ಇನ್ನು ಪೊಗರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಅನೇಕ ಸಂದರ್ವಾಭದಲ್ದಲಿ ಡಿ.27 ರಂದು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.