ಬಹುಭಾಷಾ ನಟಿ ಭಾವನಾ ಹೆಸರಿನಲ್ಲಿ ನಕಲಿ ಖಾತೆಗಳ ಹಾವಳಿ. ಫೋಟೋ, ವಿಡಿಯೋ ಹಾಗೂ ಪೋಸ್ಟ್ ಹಾಕುತ್ತಿರುವುದು ನಾನಲ್ಲ....

16ನೇ ವಯಸ್ಸಿಗೇ ಮಲಯಾಳಂ ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಭಾವನಾ ಈಗ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡಿಗನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ, ಲೈಫನ್ನು ಎಂಜಾಯ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಕೆಲವು ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುವ ಭಾವನಾ ಈಗ ಆ ಖಾತೆ ನನ್ನದಲ್ಲ ಎಂದು ಹೇಳಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.

ಭಜರಂಗಿ 2 ಚಿತ್ರದಲ್ಲಿ ಭಾವನಾ ಡಿಫರೆಂಟ್‌ ಗೆಟಪ್‌!

ಇದು ನಕಲಿ ಖಾತೆ:

ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ 41 ಚಿತ್ರಗಳಲ್ಲಿ ಮಿಂಚಿದ ನಂತರ 'ಜಾಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಪುನೀತ್‌ ರಾಜ್‌ಕುಮಾರ್‌ ಜೊತೆ ನಟಿಸಿದ ಜಾಕಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಅಷ್ಟೇ ಅಲ್ಲದೆ ಇದಾದ ನಂತರ ಕನ್ನಡ ಚಿತ್ರರಂಗದಲ್ಲಿ ಭಾವನಾ ಬೇಡಿಕೆ ಹೆಚ್ಚಾಗಿತ್ತು. ಜೊತೆ ಜೊತೆಗೆ ತೆಲಗು, ತಮಿಳು, ಮಲಯಾಳಂ ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ ಭಾವನಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದರು. 

ತಮ್ಮ ಎರಡನೇ ಸಿನಿಮಾ 'ವಿಷ್ಣುವರ್ಧನ'ದಲ್ಲಿ ಕಿಚ್ಚ ಸುದೀಪ್‌ಗೆ ಜೋಡಿಯಾಗಿ ಕಾಣಿಸಿಕೊಂಡರು. ಮೂರನೇ ಸಿನಿಮಾ 'ರೋಮಿಯೋ'ದಲ್ಲಿ ಗಣೇಶ್‌ಗೆ ಪಾರ್ಟ್‌ನರ್ ಆದರು. ಮೊದಲು ಮೂರು ಸಿನಿಮಾಗಳು ಸೂಪರ್‌ ಹಿಟ್‌ ಆದ ಕಾರಣ ಕನ್ನಡ ಚಿತ್ರರಂಗದಲ್ಲಿ ಭಾವನಾ ಹಿಟ್ ನಟಿಯರ ಪಟ್ಟಿಗೆ ಸೇರಿಕೊಂಡರು.

View post on Instagram

ಕನ್ನಡಿಗನನ್ನು ವರಿಸಿದ ಭಾವನಾ:
ಕೇರಳದ ತ್ರಿಶೂರ್‌ನಲ್ಲಿ ಭಾವಾನಾ ಮೇಲೆ ನಡೆದ ಹಲ್ಲೆಯಿಂದ ತುಸು ವಿಚಲಿತರಾಗಿದ್ದರು. ಆದರೆ, ತಮ್ಮನ್ನು ಮುಗಿಸಲು ಯತ್ನಿಸಿದವರನ್ನೇ ಜೈಲಿಗಟ್ಟಿ, ತಾವು ಫೀನಿಕ್ಸ್‌ನಂತೆ ಎಲ್ಲಾ ದುಃಖವನ್ನೂ ಮರೆತು, ಮರಳಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ಮಾದರಿ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆತು, ಭಾವನಾ ತಮ್ಮ ಬಹುಕಾಲದ ಸ್ನೇಹಿತ, ಖ್ಯಾತ ನಿರ್ಮಾಪಕ ನವೀನ್‌ ಜೊತೆ ಜನವರಿ 22,2018ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಬೋಲ್ಡ್ ಆ್ಯಂಡ್ ಬ್ಯುಟಿಫುಲ್ ನಟಿ:
ಭಾವನಾ ಸೌಂದರ್ಯ, ಬೋಲ್ಡ್‌ನೆಲ್ ಹಾಗೂ ಪ್ರತಿಭೆ ಮೂರರ ಸಮ್ಮಿಲನದ ನಟಿ. ಹಿಂದೊಮ್ಮೆ ಮತ್ತೊಬ್ಬ ಬಹುಭಾಷಾ ನಟಿ ಪ್ರಿಯಾಮಣಿ ನಡೆಸಿದ ಸಂದರ್ಶನದಲ್ಲಿ ತಾವು ತುಂಬಾ ಮೂಡಿ, ಭಾವಾನಾಜೀವಿ ಹಾಗೂ ಕೆಲವೊಮ್ಮೆ ಸಿಲ್ಲಿ, ಸ್ಟುಪಿಡ್ ಆಗಿಯೂ ಆಡುವುದಿದೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ಪ್ರಾಕ್ಟಿಕಲ್ ಹಾಗೂ ಸೂಕ್ಷ್ಮ ಮನಸ್ಸಿನವರ ತಾನೆಂದಿದ್ದರು. 

ಕನ್ನಡಿಗನಾದ ಕಾರಣ ನವೀನ್ ಅವರನ್ನು ವರಿಸಲು ಮಲಯಾಳಿ ಕುುಟಂಬದ ಭಾವನಾ ತಂದೆ ಒಪ್ಪಿರಲಿಲ್ಲವಂತೆ. ಆದರೆ ನವೀನ್ ಅವರನ್ನು ಚೆನ್ನಾಗಿ ಬಲ್ಲ ಅವರ ತಾಯಿ ಸಪೋರ್ಟ್ ಮಾಡಿದ್ದರಿಂದ ಎಲ್ಲರನ್ನೂ ಒಪ್ಪಿಸುವುದು ಸುಲಭವಾಗಿ ಆಯಿತಂತೆ. 

ಮೊದ ಮೊದಲು ಬಹುತೇಕ ಸೆಕೆಂಡ್ ಹೀರೋಯಿನ್ ಪಾತ್ರ ಮಾಡಿದ್ದ ಭಾವಾನಾಗೆ ಈ ಚಿತ್ರೋದ್ಯಮವೇ ಬೇಡವೆನ್ನಿಸುವಷ್ಟು ಬೇಜಾರು ಆಗಿತ್ತಂತೆ. ಆದರೆ, ನಂತರ ಬಂದ ತಮಿಳು ಹಾಗೂ ತೆಲಗು ಚಿತ್ರಗಳು ಅವರಿಗಿ ಖುಷಿ ನೀಡಿ, ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಹಕರಿಸಿತು, ಎಂದು ಪ್ರಿಯಾಮಣಿ ಅವರಿಗೆ ನೀಡಿದ ಸಂದರ್ಶನದಲ್ಲಿ ಭಾವನಾ ತಮ್ಮ ಮನದಾಳ ಮಾತುಗಳನ್ನು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. 

ಫಿಟ್‌ನೆಸ್ ಫ್ರೀಕ್ ಆಗಿರುವ ಭಾವನಾ ವಾರದಲ್ಲಿ ಆರು ದಿನ ಸಿಕ್ಕಾಪಟ್ಟೆ ವರ್ಕ್ ಔಟ್ ಮಾಡುತ್ತಾರಂತೆ. ಹಾಗಂತ ಜಂಕ್ ಫುಡ್ ಸಹ ತಿನ್ನುತ್ತಾರಂತೆ. ಅವರ ಪಚನಕ್ರಿಯೆ ಅತ್ಯುತ್ತಮವಾಗಿರುವುದರಿಂದ, ತಿಂದಿದ್ದು ಕರಗಿಸಿಕೊಳ್ಳುವ ಶಕ್ತಿ ಇದೆ. ತೂಕ ಹೆಚ್ಚಾಗುವುದಿಲ್ಲವೆಂದು ಹೇಳುತ್ತಾರೆ ಈ ನಟಿ.