ಶಮಿಕಾ ಕುಮಾರಸ್ವಾಮಿ ನಿಮಗೆ ಗೊತ್ತಿದ್ದಾಳಾ ಎಂತ ಕೇಳೋದೇ ತಪ್ಪು, ಗೊತ್ತೇ ಇರುತ್ತೆ. ರಾಧಿಕಾ ಕುಮಾರಸ್ವಾಮಿ ಈಕೆ ತಮ್ಮ ಜಗತ್ತು ಅಂತ ಇತ್ತೀಚೆಗೆ ಹೇಳಿಕೊಂಡಿದ್ದರು. ಈಗ ಆಕೆ ಏನ್ ಮಾಡ್ತಿದಾಳೆ ಅನ್ನೋದು ಹೊಸ ಸುದ್ದಿ. 

ಶಮಿಕಾ ಕುಮಾರಸ್ವಾಮಿ ಈಗ ಹೈಸ್ಕೂಲ್ ಹುಡುಗಿ. ಈಕೆಯ ಬರ್ತ್‌ಡೇ ಸಂಭ್ರಮದಲ್ಲೇ ತಾಯಿ ರಾಧಿಕಾ ಹಾಗೂ ತಂದೆ ಮದುವೆ ಮಾಡಿಕೊಂಡಿದ್ದುದು ಜಗಜ್ಜಾಹೀರಾದದ್ದು. ಅದನ್ನೂ ಬಹಿರಂಗಪಡಿಸಿದ್ದೂ ರಾಧಿಕಾ ಅವರೇ. ಹೀಗಾಗಿ ತನ್ನ ತಂದೆ- ತಾಯಿಯ ದಾಂಪತ್ಯದ ಸಂಪೂರ್ಣ ಸತ್ಫಲ ಎಂದು ಶಮಿಕಾರನ್ನು ಕರೆದರೂ ತಪ್ಪಾಗಲಿಕ್ಕಿಲ್ಲ.

ಲೇಟೆಸ್ಟ್ ಸುದ್ದಿ ಅಂದರೆ ಶಮಿಕಾ, ಚಿತ್ರರಂಗಕ್ಕೆ ಬರೋಕೆ ರೆಡಿಯಾಗ್ತಿದಾಳೆ ಅನ್ನುವುದು. ಶಮಿಕಾ ಕಲಿಕೆಯಲ್ಲಿ ಮುಂದಿದ್ದಾಳೆ. ಆದರೆ ಕಲಿಕೆಗಿಂತಲೂ ಹೆಚ್ಚಿನ ಆಸಕ್ತಿ ಆಕೆಗೆ ಚಿತ್ರರಂಗದಲ್ಲಿ ಇದೆಯಂತೆ. ಹೀಗಾಗಿ ತನ್ನದೇ ಒಂದು ಚಿತ್ರದಲ್ಲಿ ಆಕೆಯನ್ನು ಲಾಂಚ್ ಮಾಡುವ ಅವಕಾಶ ರಾಧಿಕಾ ಅವರಿಗೆ ಇದೆ. ಹಾಗೆ ಮಾಡುವುದೇ ಅವರಿಗೆ ಸದ್ಯಕ್ಕೆ ಸುರಕ್ಷಿತ ದಾರಿ. ಅದು ಕ್ಲಿಕ್ ಆದರೆ ಬೆಳೆಯುವ ಅವಕಾಶ ಮಾಡಿಕೊಡುವ ಗಾಡ್‌ಫಾದರ್ ಹೇಗೂ ಇದ್ದೇ ಇದ್ದಾರೆ.

ಸಿನಿಮಾ ಮಾಡಲು ಹೋಗಿ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿಕೊಂಡು ರಾಧಿಕಾ ಕುಮಾರಸ್ವಾಮಿ? ...

ಶಮಿಕಾ ಆಸಕ್ತಿ ಇರೋದು ಡ್ಯಾನ್ಸಿಂಗ್‌ನಲ್ಲಿ. ಅದರಲ್ಲೂ ಪ್ರೊಫೆಷನಲ್ ಡ್ಯಾನ್ಸಿಂಗ್‌ನಲ್ಲಿ. ನೃತ್ಯದ ಕ್ಲಾಸುಗಳನ್ನು ಶಮಿಕಾ ಅಟೆಂಡ್ ಮಾಡ್ತಿದ್ದಾಳೆ. ಇದರ ಜೊತೆಗೆ ಕರಾಟೆ, ಹಾರ್ಸ್ ರೈಡಿಂಗ್ ಕೂಡ ಕಲೀತಿದಾರೆ. ವೃತ್ತಿಪರ ನಟನಾ ಪಟುಗಳ ಜೊತೆಗೆ ಅಭಿನಯ ಕಲಿಕೆ ಕೂಡ ನಡೆದಿದೆ.  ಹೀಗೆ ಸರ್ವ ರೀತಿಯಲ್ಲೂ ಚಿತ್ರರಂಗಕ್ಕೆ ಇಳಿಯುವ ಮುನ್ನ ಮಗಳು ಸಜ್ಜಾಗಿರಲಿ ಎಂಬುದು ರಾಧಿಕಾ ಪ್ಲಾನು. 

ಮೊದಲು ರಾಧಿಕಾ ಫಿಲಂನಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ  ಮಗಳನ್ನು ತರುವ ಚಿಂತನೆ ಅವರಿಗೆ ಇತ್ತು. ಆದರೆ ಅದು ಕೈಗೂಡಲಿಲ್ಲ. ಸದ್ಯಕ್ಕಂತೂ ಕೈಗೂಡುವ ಲಕ್ಷಣವೂ ಕಾಣಿಸುತ್ತಿಲ್ಲ. ಹೀಗಾಗಿ ಮಗಳಿಗಾಗಿಯೇ ಒಂದು ಫಿಲಂ ಸಿದ್ಧಪಡಿಸುವ, ಅದರಲ್ಲಿ ಲೀಡ್ ರೋಲ್‌ನಲ್ಲೇ ಮಗಳನ್ನು ಮುಂದೆ ತರುವ ಯೋಚನೆಯೂ ರಾಧಿಕಾಗೆ ಇದೆ. ಎಂದರೆ ಇದು ಮಕ್ಕಳ ಫಿಲಂ ಆಗಿರುತ್ತದೆ ಮಾತ್ರ. ಬಹುಶಃ ಟೀನೇಜ್ ಮಕ್ಕಳ ಫಿಲಂನಲ್ಲಿ ಈಕೆಗೆ ಲೀಡ್ ರೋಲ್.

ದರ್ಶನ್ 'ರಾಬರ್ಟ್' ಬಿಡುಗಡೆ ದಿನ ರಾಧಿಕಾ ಕುಮಾರಸ್ವಾಮಿ ಬರ್ತಿದ್ದಾರೆ; ಏನಿದು ಇಂಟ್ರೆಸ್ಟಿಂಗ್ ಸುದ್ದಿ? ...

ಸದ್ಯಕ್ಕೆ ರಾಧಿಕಾ ಅವರ ಕೆರಿಯರ್ ಗ್ರಾಫ್ ಒಂದು ಬಗೆಯ ಡೈಲೆಮಾದಲ್ಲಿದೆ. ಯುವರಾಜ್ ಎಂಬಾತನ ಜೊತೆಗೆ ಇಟ್ಟುಕೊಂಡ ಹಣಕಾಸಿನ ಸಂಬಂಧ ಇವರಿಗೆ  ತುಂಬಾ ಕೋಟಲೆ ನೀಡುತ್ತಾ ಇದೆ. ಅವರ ಜೊತೆ ಸೇರಿ ಸಿನಿಮಾ ಮಾಡಲು ಹೋಗಿರುವ ರಾಧಿಕಾ ಅವರು ವಂಚನೆ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಹೊಸ ಫಿಲಂಗಳನ್ನು ಆರಂಭಿಸಲೂ ಸನ್ನಿವೇಶ ಅಡ್ಡಿಯಾಗಿದೆ. ಗಂಡ ಬೇರೆ ಈಗ ಅಧಿಕಾರದಲ್ಲೂ ಇಲ್ಲ, ರಾಜಕೀಯ ಪ್ರಭಾವವೂ ಅಷ್ಟೊಂದು ಇಲ್ಲ. ಜೊತೆಗೆ ತಮ್ಮ ಮಗನನ್ನು ಇಂಡಸ್ಟ್ರಿಯಲ್ಲು ಪುಶ್ ಮಾಡುವ, ಹೀರೋ ಮಾಡುವ ಅನಿವಾರ್ಯತೆ ದಟ್ಟವಾಗಿದೆ.

ಸಿಸಿಬಿ ಮುಂದೆ ಸತ್ಯ ಬಾಯ್ಬಿಟ್ಟ ಯುವರಾಜ್, ರಾಧಿಕಾಗೆ ಮತ್ತೆ ಬುಲಾವ್‌ ಕೊಡುತ್ತಾ ಸಿಸಿಬಿ? ...

ಇಲ್ಲವಾದರೆ ಮನೆ ರಣರಂಗ ಆಗುವುದು ಖಚಿತ. ಹಿಂದೊಮ್ಮೆ ನಿಖಿಲ್ ಜೊತೆ ರಾಧಿಕಾ ಬಗ್ಗೆ ಕೇಳಿದಾಗ, ನನಗೂ ಆಕೆಗೂ ಯಾವ ಸಂಬಂಧವೂ ಇಲ್ಲ, ಅದೆಲ್ಲಾ ಮುಗಿದುಹೋದ ಅಧ್ಯಾಯ ಎಂದು ರೇಗಿದ್ದರು. ಎಂದಿದ್ದರೂ ಎರಡು ಮನೆ, ಎರಡು ಮನೆಯೇ.  ಆದರೂ ಅಪ್ಪ ಸದಾ ಜೊತೆಯಲ್ಲಿ ಇರೋಲ್ಲ ಎಂಬ ಭಾವನೆ ಬರದಂತೆ ಮಗಳನ್ನು ಬೆಳೆಸುವಲ್ಲಿ. ಆಕೆಗೆ ಸಕಾಲಿಕವಾದ ಉತ್ತಮ ಶಿಕ್ಷಣ ಕಲಿಕೆ ಇತ್ಯಾದಿಗಳನ್ನು ಕೊಡಿಸಿ ಮುಂಬರುವ ಬದುಕಿನ ಸವಾಲಿಗೆ ಆಕೆಯನ್ನು ತಯಾರು ಮಾಡುವಲ್ಲಿ ರಾಧಿಕಾ ಸದಾ ಮುಂದೇ ಇದ್ದಾರೆ. ಶಮಿಕಾ ಕೂಡ ಅಮ್ಮನ ಪ್ರಯತ್ನಗಳಿಗೆ ಹೆಗಲಾಗಿ ಹೆಜ್ಜೆ ಹಾಕುತ್ತಾ ಇದ್ದಾಳೆ.