ಇಬ್ಬರ ನಡುವೆ ರೋಚಕವಾದ ಫೈಟ್‌ ಕುದುರಿಸುವುದಕ್ಕೆ ಸಾಹಸ ನಿರ್ದೇಶಕ ಸೋದರರಾದ ಅನ್ಬರಿವ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ‘ರಾಕಿ ವರ್ಸಸ್‌ ಅಧೀರ’ ಟ್ಯಾಗ್‌ಲೈನ್‌ನಲ್ಲಿ ‘ಕೆಜಿಎಫ್‌ 2’ ಚಿತ್ರದ ಕ್ಲೈಮ್ಯಾಕ್ಸ್‌ ಸೀನ್‌ ಸೆಟ್‌ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಹೈದರಾಬಾದ್‌ನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಇಡೀ ಸಿನಿಮಾ ತಂಡ ಮುತ್ತಿನ ನಗರಿಯಲ್ಲಿ ಬೀಡುಬಿಟ್ಟಿದೆ.

ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ಅನ್ಬರಿವ್‌ ಸಹೋದರರು ಸಾಕಷ್ಟುಸಿನಿಮಾಗಳಿಗೆ ಸ್ಟಂಟ್‌ ಮಾಸ್ಟರ್‌ ಆಗಿ ಕೆಲಸ ಮಾಡಿದ್ದಾರೆ. ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರಕ್ಕೂ ಫೈಟ್‌ ಕಂಪೋಸ್‌ ಮಾಡಿದ ಪ್ರತಿಭಾನ್ವಿತರು. ಇವರಿಬ್ಬರು ‘ಕೆಜಿಎಫ್‌ 2’ ಸೆಟ್‌ನಲ್ಲಿರುವ ಫೋಟೋ ನಿರ್ದೇಶಕ ಪ್ರಶಾಂತ್‌ ನೀಲ್‌ ಹಂಚಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಡಿಸೆಂಬರ್‌ ತಿಂಗಳಲ್ಲಿ ಶೂಟಿಂಗ್‌ ಮುಕ್ತಾಯ ಆಗಲಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದಾಗಲೇ ನಿರ್ದೇಶಕ ಪ್ರಶಾಂತ್‌ ನೀಲ್‌ ಪ್ರಭಾಸ್‌ ಜತೆಗಿನ ‘ಸಲಾರ್‌’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಕೆಜಿಎಫ್‌ 2 ರಿಲೀಸ್‌ಗೂ ಮುನ್ನವೇ ಚಾಪ್ಟರ್‌ 3ಗೆ ಒಪ್ಪಿಗೆ ಆಗಿದ್ಯಂತೆ? 

ಯಶ್‌ ಹುಟ್ಟು ಹಬ್ಬಕ್ಕೆ ‘ಕೆಜಿಎಫ್‌ 2’ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಾಗಿ ಬಿಗ್‌ ಸರ್‌ಪ್ರೈಸ್‌ ಕೊಟ್ಟಿರುವ ಚಿತ್ರತಂಡ, ಶೂಟಿಂಗ್‌ ಕ್ಲೈಮ್ಯಾಕ್ಸ್‌ ಹಂತ ತಲುಪಿರುವುದನ್ನು ಖುಷಿಯಾಗಿ ಹೇಳಿಕೊಂಡಿದೆ. ಸಂಜಯ್‌ ದತ್‌್ತ ಹಾಗೂ ಯಶ್‌ ನಡುವಿನ ಕ್ಲೈಮ್ಯಾಕ್ಸ್‌ ಫೈಟ್‌ ಹೇಗಿರುತ್ತದೆಂಬ ಕುತೂಹಲ ಹೆಚ್ಚುತ್ತಿದೆ.