ನಿರ್ದೇಶಕ ಫಣೀಶ್‌ರ ಎರಡು ಮಾತು

1. ಕತ್ತಲು ತುಂಬಿದ ಬಂಗಲೆಯಲ್ಲಿ ನಾಯಕಿ, ಆಕೆಯ ಪ್ರಿಯಕರ, ಬದುಕಿನಲ್ಲಿ ನೆಲೆ ನಿಲ್ಲಬೇಕು ಎಂದು ಬಯಸುವ ನಾಯಕ ನಟ, ಬೆಟ್ಟಿಂಗುಗಳಿಂದ ಹಣ ಮಾಡಲು ನಿಂತ ಮತ್ತೊಬ್ಬ ವ್ಯಕ್ತಿ ಹೀಗೆ ಹಲವಾರು ಪಾತ್ರಗಳು ಸಿಲುಕಿಕೊಳ್ಳುತ್ತಾರೆ. ದುಡ್ಡು ಮನುಷ್ಯರ ಚಿಂತನೆಯನ್ನು ಹೇಗೆ ಬದಲಿಸುತ್ತದೆ, ಹಣಕ್ಕಾಗಿ ಹೇಗೆ ಬದಲಾಗುತ್ತಾರೆ, ಒಬ್ಬೊಬ್ಬರ ಬದುಕಲ್ಲೂ ನೋಟು ಹೇಗೆ ಆಟವಾಡುತ್ತದೆ ಅನ್ನೋದು ಚಿತ್ರದ ಕತೆ.

ಡಾರ್ಕ್ ಫ್ಯಾಂಟಸಿ ಪೋಸ್ಟರ್‌ ಬಿಡುಗಡೆ; ಶ್ರೀ ನಟನೆಯ ಹಾರರ್‌ ಸಿನಿಮಾ! 

2. ಆರೋಗ್ಯ ಇಲಾಖೆಯ ಕೆಲವಾರು ಪ್ರಾಜೆಕ್ಟ್ಗಳನ್ನು ರೂಪಿಸುತ್ತಿದ್ದವರು ನಾಗರಾಜ್‌ ವಿ ಹಾಗೂ ಆರ್‌ ವಿ ನಿತಿನ್‌. ನಾನು ಹೇಳಿದ ಕತೆ ಇಷ್ಟಪಟ್ಟು ಈಗ ಚಿತ್ರದ ನಿರ್ಮಾಪಕರಾಗಿದ್ದಾರೆ. ಶ್ರೀ ಚಿತ್ರದ ನಾಯಕ ಸುನೀತಾ, ಸುಶ್ಮಿತಾ ಈ ಚಿತ್ರದ ನಾಯಕಿಯರು. ಶೋಭರಾಜ್‌, ಮನದೀಪ್‌ ರಾಯ…, ಮೋಹನ್‌ ಜುನೇಜ ಚಿತ್ರದಲ್ಲಿ ಇದ್ದಾರೆ. ಎಂಭತ್ತರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಶಿವರಾಜ್‌ಕುಮಾರ್‌ ಅವರ ಜತೆಗೆ ನಟನೆ ಆರಂಭಿಸಿದ ಬಾಲರಾಜ್‌ ಈ ಚಿತ್ರದ ಮೂಲಕ ಮತ್ತೆ ನಟನೆಗೆ ಬಂದಿದ್ದಾರೆ.

5 ನಿಮಿಷ ಕತೆ ಕೇಳಿ ನಿರ್ಮಾಣಕ್ಕೆ ಸೈ ಎಂದೆ: ನಿತಿನ್‌

‘ಕತೆಯನ್ನು ಐದು ನಿಮಿಷ ಕೇಳಿದ ಕೂಡಲೇ ಸಿನಿಮಾ ನಿರ್ಮಾಣಕ್ಕೆ ಒಪ್ಪಿಕೊಂಡೆ. ಆ ಮಟ್ಟಿಗೆ ಕಾಡುವಂತಹ ಕತೆ ಈ ಚಿತ್ರದಲ್ಲಿದೆ. ಜತೆಗೆ ಈ ವಿಚಾರವನ್ನು ನನ್ನ ಸ್ನೇಹಿತ ನಾಗರಾಜ್‌ ಅವರಿಗೆ ತಿಳಿಸಿದೆ. ಅವರು ಕೂಡ ನಿರ್ಮಾಣಕ್ಕೆ ಸಾಥ್‌ ಕೊಡುವುದಾಗಿ ಹೇಳಿದರು. ಹೀಗೆ ಒಂದು ಒಳ್ಳೆಯ ಸಿನಿಮಾ ಶುರು ಆಯಿತು’ ಎನ್ನುತ್ತಾರೆ ನಿರ್ಮಾಪಕ ನಿತಿನ್‌.

ಪುನೀತ್, ಜೇಮ್ಸ್ ಚಿತ್ರತಂಡದಿಂದ ಸರ್ಕಾರಿ ಶಾಲೆಗೆ ನೆರವು..! ಇಲ್ನೋಡಿ ಫೋಟೋಸ್ 

‘ಈ ಚಿತ್ರದ ನಾಯಕ ಶ್ರೀ ನಮ್ಮ ಊರಿನ ಕಡೆಯವನು. ನಟನಾಗುವ ಎಲ್ಲ ಲಕ್ಷಣಗಳು ಇವೆ. ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯ ಆಗುತ್ತಿದ್ದಾನೆ. ಮುಂದೆ ಆತ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಹೀರೋ ಆಗಲಿ. ಆ ಭರವಸೆ ನನಗೆ ಇದೆ’ ಎಂದಿದ್ದು ಎಸ್‌ ಎ ಗೋವಿಂದರಾಜು. ನಾಯಕ ಶ್ರೀ, ‘ನಿರ್ದೇಶಕ ಫಣೀಶ್‌ ಸಿದ್ಧಸೂತ್ರಗಳ ಆಚೆಗೆ ಯೋಚಿಸುತ್ತಾರೆ. ಅವರ ಕ್ರಿಯಾಶೀಲತೆ ನನಗೆ ಬಹಳ ಇಷ್ಟ’ ಎನ್ನುತ್ತಾರೆ.

‘ಈ ಚಿತ್ರದ ನಿರ್ಮಾಪಕ ನಾಗರಾಜ್‌ ನನ್ನ ಹಳೆಯ ಸ್ನೇಹಿತ. ‘ಆನಂದ್‌’ ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜತೆಗೇ ಇದ್ದೇವೆ. ಫಣೀಶ್‌ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ’ ಎಂದರು ಹಿರಿಯ ನಟ ಬಾಲರಾಜ್‌.