ಬಾಲಿವುಡ್ ನಟಿ ರಿಚಾ ಚಡ್ಡಾ ಅಭಿನಯದ ಶಕೀಲಾ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯಾಗಿದೆ. 2 ನಿಮಿಷದ ಟ್ರೈಲರ್‌ನಲ್ಲಿ ಸಂಪ್ರದಾಯಿಕ ಮನೆಯ ಯುವತಿ ಹೇಗೆ ಅಡಲ್ಟ್ ಸ್ಟಾರ್ ಆದಳು ಎಂಬುದನ್ನು ಸುಂದರವಾಗಿ ತೋರಿಸಲಾಗಿದೆ.

ಶಕೀಲಾ ಬಯೋಪಿಕ್ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. 90ರ ಅಡಲ್ಟ್ ತಾರೆ ಸಿಲ್ಕ್ ಸ್ಮಿತಾ ಅವರ ಆತ್ಮಹತ್ಯೆ ಸುದ್ದಿಯ ವರದಿಗಳೊಂದಿಗೆ ಟ್ರೈಲರ್ ತೆರೆಯುತ್ತದೆ.

ಕೋಟಿಗಟ್ಟಲೆ ಹಣವಿಲ್ಲ, ಬಂಗಲೆ ಇಲ್ಲ, ಚಿಕ್ಕ ಮನೆ, ಒಂಟಿ ಜೀವನ: ಲೈಫ್ ಬಗ್ಗೆ ಶಕೀಲಾ ಮಾತು

ಶಕೀಲಾ ಅವರ ಕೆಳ ಮಧ್ಯಮ ವರ್ಗದ ಜೀವನ ಮತ್ತು ಮದುವೆಯನ್ನು ಬಿಟ್ಟು ಬೇರೆ ಯಾವುದೇ ಕನಸಿಲ್ಲದ ಶಕೀಲಾ ಜೀವನವನ್ನು ತೋರಿಸಲಾಗುತ್ತದೆ. ತಂದೆಯ ಅಕಾಲಿಕ ಮರಣದಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳೋ ಅನಿವಾರ್ಯತೆ ಬರುತ್ತದೆ.

ಸಂಬಂಧಿಕರಿದ್ದರೂ ಯಾರೂ ಇಲ್ಲದಂತೆ ಒಂಟಿಯಾಗಿ ಬದುಕುತ್ತಿರೋ ಶಕೀಲಾ ಸ್ಟ್ರಾಂಗ್ ಆಗಿಯೇ ಇದ್ದಾರೆ. ಬಹಳಷ್ಟು ನೋವನುಭವಿಸಿದ ಮೇಲೂ ನಟಿ ದೃಢವಾಗಿ ಬದುಕುತ್ತಿದ್ದಾರೆ. ಸುಂದರವಾಗಿ ಮೂಡಿ ಬಂದಿರುವ ಟ್ರೈಲರ್ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟು ಹಾಕಿದೆ.