'ಮಿಂಚಾಗಿ ನೀನು ಬರಲು ಮಿಂಚಂತೆ ಈ ಮಳೆಗಾಲ...' ಎಂಬ ರೊಮ್ಯಾಂಟಿಕ್ ಹಾಡುಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳ ಮನದಲ್ಲಿ ಮನೆ ಮಾಡಿರುವ ಗಾಯಕ ಸೋನು ನಿಗಮ್‌ ಈಗ ಕೊರೋನಾ ವೈರಸ್‌ ಅನ್ನು ಇನ್ನೊಬ್ಬರಿಗೆ ಹರಡದಂತೆ ಮಾಡಲು,  ದೂರದ ದೇಶದಲ್ಲಿ ಇರಲು ನಿರ್ಧರಿಸಿದ್ದಾರೆ. 

ನಾನು ಪಾಕಿಸ್ತಾನಿಯಾಗಬೇಕಿತ್ತು : ಸೋನು ನಿಗಮ್

ಹಿಮಾಲಯದಲ್ಲಿ ಸಮಯ ಕಳೆಯುತ್ತಿದ್ದ ಸೋನು ನಿಗಮ್‌ ಮಾರ್ಚ್‌ 7ರಂದು ದುಬೈನ ಸಂಗೀತ ಕಾರ್ಯಕ್ರಮಕ್ಕೆಂದು ತೆರಳಿದ್ದಾರೆ. ಆದರೆ ಕೊರೋನಾ ಭೀತಿ ಹೆಚ್ಚಾದ ಕಾರಣ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ಸೋನು ಪುತ್ರ ನಿವಾನ್‌ಗೂ ಶಾಲಾ ರಜೆ ಘೋಷಿಸಿದ ಕಾರಣ ದುಬೈನಲ್ಲೆ ಇದ್ದಾರೆ. ಸೋನು ತಂದೆ ಹಾಗೂ ಅಕ್ಕ ಮುಂಬೈನಲ್ಲೇ ವಾಸವಿದ್ದಾರೆ. ವಿಮಾನವನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆಗಳಿದ್ದು,  ದುಬೈನಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೊರೋನಾ ಸಂಪೂರ್ಣವಾಗಿ ನಿವಾರಣೆ ಆಗುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. 

ಐಸಿಯುನಲ್ಲಿದ್ದ ಗಾಯಕ ಸೋನು ನಿಗಮ್ ಡಿಸ್ಚಾರ್ಜ್

ಇಡೀ ಭಾರತವೇ ಭಾನುವಾರ ಜನತಾ ಕರ್ಫ್ಯೂ ಮಾಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಪ್ರಯುಕ್ತ ಮಾರ್ಚ್‌ 22ರಂದು ರಾತ್ರಿ 8 ಗಂಟೆಗೆ ಸೋನು ನಿಗಮ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಲೈವ್‌ ಮಾಡಲು ನಿರ್ಧರಿಸಿದ್ದಾರೆ.  ಇದನ್ನು ಕೊರೋನಾ ಪೀಡಿತರು ಹಾಗೂ ವೈರಸ್‌ ಎದುರಿಸುತ್ತಿರುವ ವೈದ್ಯರಿಗೆ ಅರ್ಪಿಸಲಿದ್ದಾರೆ.

ಸೈನಿಕರ ಸಾವಿಗೆ ಮರುಗಬೇಡಿ: ಸೋನು ನಿಗಂ ಭಿನ್ನ ಹೇಳಿಕೆ