ಮುಂಬೈ :  ದೇಶದ ಪ್ರಸಿದ್ಧ ಗಾಯಕ ಸೋನು ನಿಗಮ್ ತಾವು ಪಾಕಿಸ್ತಾನಿಯಾಗಿರಬೇಕಿತ್ತು ಎನ್ನುವ ಹೇಳಿಕೆಯೊಂದನ್ನು ನೀಡಿದ್ದಾರೆ. 

ಹಾಡುಗಾರ, ನಟನೂ ಆಗಿರುವ ಸೋನು ನಿಗಮ್ ಗೆ ಅತ್ಯಂತ ಹೆಚ್ಚಿನ ಸಂಖ್ಯೆಯ  ಫ್ಯಾನ್ಸ್ ಗಳಿದ್ದು, ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ.  

ಇತ್ತೀಚೆಗಷ್ಟೇ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ  ನೀಡಿದ ಸಂದಶರ್ನದಲ್ಲಿ ಸೋನು ನಿಗಮ್ ಪಾಕಿಸ್ತಾನಿಯಾಗಿದ್ದರೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಆದ್ದರಿಂದ ತಾವು ಪಾಕಿಸ್ತಾನಿಯಾಗಿರಬೇಕಿತ್ತು ಎಂದು ಹೇಳಿರುವುದು ಸಾಕಷ್ಟು ಸುದ್ದಿಯಾಗಿದೆ. 

ಅಲ್ಲದೇ ಇತ್ತೀಚಿನ ಮ್ಯೂಸಿಕ್ ಇಂಡಸ್ಟ್ರಿ ಬಗ್ಗೆಯೂ ಸೋನು ನಿಗಮ್ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.  

ಇತ್ತೀಚಿನ ದಿನಗಳಲ್ಲಿ ಹಾಡುಗಾರರು ಮ್ಯೂಸಿಕ್ ಕಂಪನಿಗಳಿಗೆ ಹಾಡು ಹಾಡಲು  ಹಣ ನೀಡಬೇಕು. ಬೇರೆಯವರಿಗಾಗಿ ನಮ್ಮಿಂದ ಹಾಡಿಸಿಕೊಂಡು ಅವರು ಹಣ ಪಡೆದುಕೊಳ್ಳುತ್ತಾರೆ ಇಂತಹ ಸ್ಥಿತಿ ಇಂದು ಇದೆ ಎಂದು ಹತಾಷೆ ವ್ಯಕ್ತಪಡಿಸಿದ್ದಾರೆ.