ಮುಂಬೈ : ಬಾಲಿವುಡ್ ಪ್ರಸಿದ್ಧ  ಹಿನ್ನೆಲೆ ಗಾಯಕ ಸೋನು ನಿಗಮ್ ಚರ್ಮದ ಅಲರ್ಜಿಗೆ ಒಳಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. 

ಸೋನು ಅವರನ್ನು  ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದ್ದು, ಸಾಮಾಜಿಕ ತಾಲತಾಣದ ಮೂಲಕ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. 

ಸೀ ಫುಡ್ ಸೇವನೆಯಿಂದ ತೀವ್ರ ಅಲರ್ಜಿಯಾಗಿ,  ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಬೆಡ್ ಮೇಲೆ ಆಕ್ಸಿಜನ್ ಮಾಸ್ಕ್ ಧರಿಸಿದ ಫೊಟೊಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೊಟೊದಲ್ಲಿ ಸೋನು ಕಣ್ಣು ಊದಿಕೊಂಡಿರುವುದನ್ನು ಕಾಣಬಹುದಾಗಿದೆ. 

ಅಲ್ಲದೇ ತಮ್ಮ ಅಭಿಮಾನಿಗಳಿಗೆ ಸೋನು ಧನ್ಯವಾದ ತಿಳಿಸಿದ್ದು,  ನಿಮ್ಮ ಪ್ರೀತಿ ಹಾಗೂ ಹಾರೈಕೆಯಿಂದ  ಗುಣಮುಖನಾಗಿದ್ದೇನೆ. ಇದು ನಮಗೊಂದು ಪಾಠವಾಯ್ತು.  ಅಲರ್ಜಿ ಉಂಟು ಮಾಡುವ ಆಹಾರ ಸೇವಿಸುವ ಗೋಜಿಗೆ ಹೋಗಬೇಡಿ.  ಹ್ಯಾಪಿ ಆ್ಯಂಡ್ ಹೆಲ್ದಿ ಲೈಫ್  ಎವರಿ ಒನ್ ಎಂದು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.