'ಸವಾರಿ','ಪೃಥ್ವಿ', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಸೇರಿದಂತೆ ಅನೇಕ ಕನ್ನಡ, ತುಳು, ತೆಲುಗು ಹಾಗೂ ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಮಣಿಕಾಂತ್ ಕದ್ರಿ ಅವರಿಗೆ ಕೊರೋನಾ ಸೋಂಕು ಇರುವುದು ಧೃಡವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಹಿರಿಯ ಸಿನಿಮಾ ನಿರ್ಮಾಪಕ ಕಮಲಾಕರ ರೆಡ್ಡಿ ಸಾವು 

'ನನಗೆ ಕೋವಿಡ್‌19 ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ. ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವೆ. ನಮ್ಮ ಸರ್ಕಾರ ಮಾಡುತ್ತಿರುವ ಕೋವಿಡ್‌ ಸೇವೆ ಮತ್ತು ನಿಯಮಗಳನ್ನು  ನಾವು ಗೌರವಿಸಲೇಬೇಕು.  ತುಂಬಾ ಸುಲಭ ವಿಧಾನ, ಸ್ವಚ್ಛತೆ ಹಾಗೂ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜನರಲ್ಲಿ ಆತಂಕ ಬೇಡವೆಂದು ಟಿಪ್ಸ್ ನೀಡಿದ್ದಾರೆ. 'ದಯವಿಟ್ಟು ಇದಕ್ಕೆ ಹೆದರಬೇಡಿ. ಯಾವುದಾದರೂ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ.ವೈದ್ಯರ ಸಲಹೆಯಿಂದ ಮುಂಜಾಗೃತ ಕ್ರಮಗಳನ್ನು  ಕೈಗೊಳ್ಳಿ' ಎಂದು ಹೇಳಿದ್ದಾರೆ.

 

2006ರಲ್ಲಿ 'ಸ್ಮಾರ್ಟ್‌ ಸಿಟಿ' ಎಂಬ ಮಲಯಾಳಂ ಚಿತ್ರದ ಮೂಲಕ ವೃತ್ತಿ ಆರಂಭಿಸಿದ ಮಣಿಕಾಂತ್ ಕದ್ರಿ ಸುಮಾರು 55ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 10ಕ್ಕೂ ಹೆಚ್ಚು ಬೆಸ್ಟ್‌ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಿಗೂ ಟೈಟಲ್‌ ಟ್ರ್ಯಾಕ್‌ ನಿರ್ದೇಶನ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಅವರು ಆದಷ್ಟು ಬೇಗ ಚೇತರಿಸಿಕೊಂಡು ಆರೋಗ್ಯವಂತರಾಗಲಿ ಎಂದು ಪ್ರಾರ್ಥಿಸೋಣ.