ಬೆಂಗಳೂರಿಗೆ ಬಂದಿದ್ದ ಕೋಬ್ರಾ ತಂಡ.ಅಜಯ್‌ ಜ್ಞಾನಮುತ್ತು ನಿರ್ದೇಶನ, ಲಲಿತ್‌ ಕುಮಾರ್‌ ನಿರ್ಮಾಣದ ಚಿತ್ರವಿದು.

ತಮಿಳಿನ ನಟ ಚಿಯಾನ್‌ ವಿಕ್ರಮ್‌ ತಮ್ಮ ನಟನೆಯ ‘ಕೋಬ್ರಾ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅಜಯ್‌ ಜ್ಞಾನಮುತ್ತು ನಿರ್ದೇಶನ, ಲಲಿತ್‌ ಕುಮಾರ್‌ ನಿರ್ಮಾಣದ ಚಿತ್ರವಿದು. ಆಗಸ್ಟ್‌ 31ಕ್ಕೆ ಎಲ್ಲ ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಹಾರಿಜೋನ್‌ ಸ್ಟುಡಿಯೊಸ್‌ ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಕ್ರಮ್‌ ಮಾತುಗಳು ಇಲ್ಲಿವೆ.

- ನನ್ನ ಹಿಂದಿನ ಚಿತ್ರಗಳು ತಮಿಳಿನಲ್ಲಿ ಮಾತ್ರ ಬರುತ್ತಿದ್ದವು. ಬೇರೆ ಭಾಷೆಗೆ ಡಬ್‌ ಆಗುತ್ತಿದ್ದವು. ಈಗ ನನ್ನ ನಟನೆಯ ಚಿತ್ರಗಳು ಕೂಡ ಪ್ಯಾನ್‌ ಇಂಡಿಯಾ ಆಗುತ್ತಿವೆ. ಏಕಕಾಲದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಆ ನಿಟ್ಟಿನಲ್ಲಿ ಕೋಬ್ರಾ ಸಿನಿಮಾ ಬರುತ್ತಿದೆ.

‘ಕೆಜಿಎಫ್‌’ ನಂತರ ನನ್ನ ನಟನೆಯ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಬರುತ್ತಿದೆ. ಕನ್ನಡದಲ್ಲೂ ‘ಕೋಬ್ರಾ’ ಬರುತ್ತಿರುವುದು ಖುಷಿ. ನಾನೇ ನನ್ನ ಪಾತ್ರಕ್ಕೆ ಡಬ್‌ ಮಾಡಿದ್ದೇನೆ. ವಿಕ್ರಮ್‌ ಅವರ ಜತೆಗೆ ನಟಿಸಿದ್ದು ಮರೆಯಲಾಗದ ಸಂಗತಿ. ಕನ್ನಡದಲ್ಲಿ ಒಳ್ಳೆಯ ಕತೆಗಳು ಸಿಕ್ಕರೆ ನಟಿಸುತ್ತೇನೆ.

 ಶ್ರೀನಿಧಿ ಶೆಟ್ಟಿ, ನಟಿ

- ಇದು ಆಕ್ಷನ್‌ ಥ್ರಿಲ್ಲರ್‌, ಸೈನ್ಸ್‌ ಫಿಕ್ಷನ್‌ ಚಿತ್ರ. 9 ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಹಳೆ ಸಿನಿಮಾಗಳಿಗೆ ಹೋಲಿಸಿದರೆ ಈ ಚಿತ್ರವೇ ಬೇರೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಾನೇ ಮೊದಲ ಬಾರಿಗೆ ಕನ್ನಡದಲ್ಲಿ ಡಬ್‌ ಮಾಡಿದ್ದೇನೆ.

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಂ ರಂಗು! ಕೋಬ್ರಾ ಜೊತೆ ಮಿಂಚಿದ ಕೆಜಿಎಫ್ ಕ್ವೀನ್!

- ಕರ್ನಾಟಕ ಎಂದಾಗ ನನಗೆ ಪುನೀತ್‌ರಾಜ್‌ಕುಮಾರ್‌ ಅವರು ಮೊದಲು ನೆನಪಾಗುತ್ತಾರೆ. ನನ್ನ ನಟನೆಯ ‘ಐ’ ಚಿತ್ರದ ಮುಹೂರ್ತಕ್ಕೆ ಅವರು ಬಂದು ಲಾಂಚ್‌ ಮಾಡಿದ್ದರು. ಈಗ ಅವರು ಇಲ್ಲ ಎನ್ನುವುದು ನೋವಿನ ಸಂಗತಿ.

- ನಾನು ಮತ್ತು ಯಶ್‌ ಒಳ್ಳೆಯ ಸ್ನೇಹಿತರು. ಒಂದು ಜಾಹೀರಾತಿನಲ್ಲಿ ಕೆಲಸ ಮಾಡಿದ್ದೇವೆ. ‘ಕೆಜಿಎಫ್‌’ ಹಾಗೂ ‘ಬಾಹುಬಲಿ’ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಹೀಗಾಗಿ ಪ್ಯಾನ್‌ ಇಂಡಿಯಾ ಚಿತ್ರಗಳ ಮೇಲೆ ಎಲ್ಲರಿಗೂ ನಿರೀಕ್ಷೆಗಳು ಇವೆ. ಅದು ‘ಕೋಬ್ರಾ’ ಸಿನಿಮಾ ನಿರೀಕ್ಷೆಗಳನ್ನು ಹುಸಿ ಮಾಡಲ್ಲ. ‘ಕೆಜಿಎಫ್‌’ ಚಿತ್ರದ ನಟಿ ಶ್ರೀನಿಧಿ ಶೆಟ್ಟಿನಮ್ಮ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಖುಷಿ ಕೊಟ್ಟಿದೆ.

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್; ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕೋಬ್ರಾ' ಸ್ಟಾರ್

- ಈಗ ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರ. ಭಾಷೆಯ ಗಡಿ ಎಂಬುದು ಇರಲ್ಲ. ಯಾರೇ ಒಳ್ಳೆಯ ಕತೆಯೊಂದಿಗೆ ಬಂದರೆ ನಾನು ಸಿನಿಮಾ ಮಾಡುತ್ತೇನೆ. ಕನ್ನಡದಲ್ಲಿ ನಟಿಸುವಂತೆ ಈಗಾಗಲೇ ಹಲವು ನಿರ್ದೇಶಕರು ನನ್ನ ಕೇಳಿದ್ದಾರೆ. ಈ ಪೈಕಿ ಲೂಸಿಯಾ ಪವನ್‌ ಕುಮಾರ್‌ ಅವರ ಕತೆ ಕೇಳಿದ್ದೇನೆ. ಕತೆ ತುಂಬಾ ಚೆನ್ನಾಗಿದೆ. ಅವರ ಜತೆಗೆ ನಾನು ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಆ ಬಗ್ಗೆ ಹೇಳುತ್ತೇನೆ.