ನಾನು ಯಾವತ್ತೂ ತಮ್ಮನ ಸಮಾಧಿ ಬಳಿ ಹೋಗಲ್ಲ, ಅವನು ಬರ್ತಾನೆ ನಾನು ಕಾಯ್ತೀನಿ: ಶಿವರಾಜ್‌ಕುಮಾರ್

 ತಮಿಳು ಸಿನಿಮಾ ಪ್ರಚಾರದ ವೇಳೆ ಪುನೀತ್ ರಾಜ್‌ಕುಮಾರ್‌ನ ನೆನಪಿಸಿಕೊಂಡ ಶಿವಣ್ಣ. ಕಣ್ಣು ಮುಚ್ಚಿದರೆ ಅವರೇ ಬರುತ್ತಾರೆ.... 

I will wait for him he will come back says Shivarajkumar thinking of Puneeth Rajkumar vcs

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೈಲರ್ ಮತ್ತು ಕ್ಯಾಪ್ಟನ್ ಮಿಲ್ಲರ್ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಸಹೋದರ ಪುನೀತ್ ರಾಜ್‌ಕುಮಾರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ತಮ್ಮನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆಂದು ಹಂಚಿಕೊಂಡಿದ್ದಾರೆ.

'ತಮ್ಮನನ್ನು ಕಳೆದುಕೊಂಡಿರುವ ನೋವು ಹೆಚ್ಚಿದೆ. ಅಲ್ಲಿ ಕೇಳುತ್ತಾರೆ ಯಾಕೆ ಸರ್ ನೀವು ಸಮಾಧಿ ಬಳಿ ಬರುವುದಿಲ್ಲ ಅಂತ...ಸಮಾಧಿಗೆ ಭೇಟಿ ನೀಡಿ ತಮ್ಮನ್ನು ನೋಡುವುದನ್ನು..ಇದರಲಿ ನನಗೆ ನಂಬಿಕೆ ಇಲ್ಲ. ಎಲ್ಲೋ ಹೋಗಿದ್ದಾನೆ ಮುಂದಿನ ವರ್ಷ ಬರ್ತಾನೆ ಅಂತ ಕಾಯುತ್ತಿರುವೆ..ನಾನು ಕಾಯುತ್ತಲೇ ದಿನ ಕಳೆಯುತ್ತೀನಿ. ಅಪ್ಪು ಬಗ್ಗೆ ಮಾತನಾಡದೆ ಒಂದು ದಿನವೂ ಕಳೆದಿಲ್ಲ. ದಿನ ಅವನ ಬಗ್ಗೆ ಯಾವುದಾದರೂ ಒಂದು ವಿಚಾರ ಬರುತ್ತದೆ' ಎಂದು ಬಿಹೈಂಡ್‌ಹುಡ್‌ ಯುಟ್ಯೂಬ್ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ. 

ಮನೆ ಊಟ ಸಿಗುತ್ತಿಲ್ಲ, ಸೌಕರ್ಯವಿಲ್ಲದ ರೂಮ್; ಗೀತಾ ಶಿವರಾಜ್‌ಕುಮಾರ್ ಕೆಲಸ ಮೆಚ್ಚಿದ ಧನುಷ್!

'ತಮ್ಮ ಇದ್ದರೆ ನನಗೆ ದೊಡ್ಡ ಬಲ ಇದ್ದಂತೆ. ನಮ್ಮ ಇಡೀ ಕುಟುಂಬಕ್ಕೆ ಅಪ್ಪು ದೊಡ್ಡ ಬಲ. ಅವರ ಮಕ್ಕಳಿಗೆ ಬಲ. ಎಂದೂ ಕೂಡ ಕುಟುಂಬ ಸಫರ್‌ ಮಾಡುವಂತೆ ಅಪ್ಪು ಮಾಡಿಲ್ಲ..ಈಗಲೂ ಆ ಕುಟುಂಬ ಖುಷಿಯಾಗಿದೆ. ಒಂಟಿಯಾಗಿ ಕುಳಿತಿರುವಾಗ ನೆನಪಾಗುತ್ತಾನೆ ಅಗ ಅವನ ಹುಡುಗಳನ್ನು ಹಾಡುತ್ತೀನಿ' ಎಂದು ಶಿವಣ್ಣ ಹೇಳಿದ್ದಾರೆ. 

ಲೀಲಾವತಿ ಅಮ್ಮ ತುಂಬಾ ಸ್ಟ್ರಾಂಗ್;ವಿನೋದ್ ರಾಜ್ ಕೈ ಬಿಗಿಯಾಗಿ ಹಿಡಿದು ಕುಳಿತ ಶಿವಣ್ಣ !

'ಅಪ್ಪು ಯಾರನೇ ತಬ್ಬಿಕೊಂಡರೂ ಅವರ ತಲೆ ನಮ್ಮ ಹೃದಯ ಮುಟ್ಟುತ್ತದೆ. ಪ್ರತಿಯೊಬ್ಬ ಆರ್ಟಿಸ್ಟ್‌ಗಳ ಜೊತೆ ಅಪ್ಪು ಫೋಟೋ ಇದೆ ಅಲ್ಲಿ ನೋಡಿ ಹೃದಯ ಭಾಗವನ್ನು ಅಪ್ಪು ತಬ್ಬಿಕೊಂಡಿರುತ್ತಾನೆ. ಅದು ಪುನೀತ್ ಟಿಪಿಕಲ್ ಸ್ಟೈಲ್. ಆ ಸಿಗ್ನೇಚರ್ ನಗು ಯಾರಿಗೂ ಬರುವುದಿಲ್ಲ. ಇಡೀ ದೇಶದಲ್ಲೇ ವಿಭಿನ್ನ ನಗು ಅದು. ವಿದೇಶಕ್ಕೆ ಹೋದರು ಜನರು ಅವನ ನಗು ಬಗ್ಗೆ ಮಾತನಾಡುತ್ತಾರೆ. ನಮ್ಮಿಬ್ಬರ ನಡುವೆ ವಯಸ್ಸಿನ ಅಂತ ತುಂಬಾ ಇತ್ತು ಆದರೂ ಸ್ನೇಹಿತರಂತೆ ಇದ್ದೆವು. ನಾನು ನಟ ಆದ ಮೇಲೆ ಅಪ್ಪು ಕೂಡ ನಾಯಕನಟ ಆದ ಮೇಲೆ ಹೆಚ್ಚಿಗೆ ಸಮಯ ಕೊಡುತ್ತಿದ್ವಿ..ಒಟ್ಟಿಗೆ ಪಾರ್ಟಿ ಮಾಡುತ್ತಿದ್ವಿ. ಅಪ್ಪ 2006ರಲ್ಲಿ ಅಗಲಿದರು. ಮೂರ್ನಾಲ್ಕು ತಿಂಗಳ ನಂತರ ನನ್ನ ಸಿನಿಮಾ ಕೆಲಸಗಳು ಇತ್ತು. ಆಗ ಬ್ಯಾಂಕಾಕ್ ಮತ್ತು ಸಿಂಗಪೂರ್‌ ಕಡೆ ಪ್ರಯಾಣ ಮಾಡಿ ಶಾಪಿಂಗ್ ಮಾಡಬೇಕಿತ್ತು ಆದ ಅಪ್ಪು ನಾನು ಬರ್ತೀನಿ ಅಂದ್ರು. ನಮ್ಮ ಜೊತೆ ಮೂರು ದಿನ ಇದ್ದರೂ..ಶಾಪಿಂಗ್ ಮಾಡಿದರು. ಅಪ್ಪ ಇಲ್ಲದ ನೋವು ಇದ್ದರೂ ಅಣ್ಣನ ಕೆಲಸದ ಸಮಯದಲ್ಲಿ ನನಗೆ ಒಟ್ಟಿಗೆ ನಿಂತು ಧೈರ್ಯ ಕೊಟ್ಟರು. ನನ್ನ ಮಗನ ಸ್ಥಾನದಲ್ಲಿ ನಿಂತುಕೊಳ್ಳುತ್ತಾನೆ ಅಪ್ಪು' ಎಂದಿದ್ದಾರೆ ಶಿವರಾಜ್‌ಕುಮಾರ್. 

 

Latest Videos
Follow Us:
Download App:
  • android
  • ios