Asianet Suvarna News Asianet Suvarna News

ಲೀಲಾವತಿ ಅಮ್ಮ ತುಂಬಾ ಸ್ಟ್ರಾಂಗ್;ವಿನೋದ್ ರಾಜ್ ಕೈ ಬಿಗಿಯಾಗಿ ಹಿಡಿದು ಕುಳಿತ ಶಿವಣ್ಣ !

ಅನಾರೋಗ್ಯದಿಂದ ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ. ಮಾತನಾಡಿಸಲು ನಿವಾಸಕ್ಕೆ ಭೇಟಿ ನೀಡಿದ ಶಿವಣ್ಣ....

Shivarajkumar meets Veteran actress Leelavathi and son Vinod raj vcs
Author
First Published Nov 29, 2023, 1:41 PM IST

ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಕನ್ನಡ ಸಿನಿಮಾ ತಾರೆಯರು ಹಾಗೂ ರಾಜಕೀಯ ಗಣ್ಯರು ನಿವಾಸಕ್ಕೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮನೆ ಪ್ರವೇಶಿಸುತ್ತಿದ್ದಂತೆ ಅಮ್ಮ.....ನಾನು ಶಿವಣ್ಣ ಬಂದಿದ್ದೀನಿ ಎಂದು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಲೀಲಾವತಿರನ್ನು ವಿಚಾರಿಸಿಕೊಂಡ ನಂತರ ಮಾಧ್ಯಮಗಳ ಜೊತೆ ಶಿವಣ್ಣ ಮತ್ತು ವಿನೋದ್ ರಾಜ್ ಮಾತನಾಡಿದ್ದಾರೆ. 

'ಲೀಲಾವತಿ ಅಮ್ಮ ಧ್ವನಿ ಕೇಳಿಸಿಕೊಳ್ಳುತ್ತಾರೆ..ಅವರಿಗೆ ಅರ್ಥ ಅಗುತ್ತದೆ. ಈ ವಯಸ್ಸಿನಲ್ಲೂ ಆ ನೋವು ತಾಳುವಂತ ಶಕ್ತಿ ಇದೆ..ಅಂತಹ ವ್ಯಕ್ತಿಗಳನ್ನು ಯೋಗ ಪುರುಷರು ಎಂದು ಕರೆಯುತ್ತಾರೆ. ಲೀಲಾವತಿ ಅಮ್ಮ ಸ್ಟ್ರಾಂಗ್ ಅಗಿದ್ದಾರೆ...ಒಳ್ಳೆ ಮನಸ್ಸು ಒಳ್ಳೆ ವ್ಯಕ್ತಿತ್ವದವರು. ಎಲ್ಲರೂ ಯಾಕೆ ಲೀಲಾವತಿ ಅಮ್ಮ ಅವರನ್ನು ಇಷ್ಟು ಪ್ರೀತಿ ಮಾಡುತ್ತಾರೆ ಅಂದ್ರೆ ಅವಾಗಿನಿಂದ ಅವರು ಪ್ರೀತಿಸುತ್ತಿದ್ದರು ಆತ್ಮಿಯತಿ ಇದೆ. ವಿನೋದ್‌ರನ್ನು ನೋಡಿದಾಗ ಅವರ ತಾಯಿಯನ್ನು ನೋಡಿ ಹಾಗೆ ಅನಿಸುತ್ತದೆ. ಬೇಸರ ಆಗುತ್ತದೆ. ಲೀಲಾವತಿ ಅಮ್ಮನವರು ಚೆನ್ನಾಗಿರುತ್ತಾರೆ ನನ್ನ ಮನಸ್ಸು ಹೇಳುತ್ತಿದೆ. ದೇವರ ಆಶೀರ್ವಾದ ಜನರ ಪ್ರೀತಿ ಅವರ ಮೇಲೆ ಇದೆ' ಎಂದು ಶಿವಣ್ಣ ಮಾತನಾಡಿದ್ದಾರೆ. ಈ ಸಮಯದಲ್ಲಿ ವಿನೋದ್ ರಾಜ್ ಕೈಯನ್ನು ಬಿಗಿಯಾಗಿ ಶಿವಣ್ಣ ಹಿಡಿದುಕೊಂಡು ಧೈರ್ಯ ಕೇಳುತ್ತಿದ್ದ ಕ್ಷಣ ಜನರ ಗಮನ ಸೆಳೆದಿದೆ. 

Ego ಪಕ್ಕ ಇಡಿ,ಮಂಗಳೂರು ಜನರ ತಲೆಯಲ್ಲಿ ಕೂತು ಬಿಟ್ಟಿದೆ; ಶೆಟ್ರು ಗ್ಯಾಂಗ್‌ ವಿರುದ್ಧ ದಯಾಳ್ ಪದ್ಮನಾಭನ್

'ತಾಯಿ ಅಂದ್ಮೇಲೆ ಪ್ರೀತಿ ಇದ್ದೇ ಇರುತ್ತದೆ. ಮಗ ಚೆನ್ನಾಗಿರಬೇಕು ಅನ್ನೋದು ಅವರ ಆಸೆ. ತಾಯಿ ಮಾತುಗಳನ್ನು ವಿನೋದ್ ಮನಸ್ಸಿನಲ್ಲಿ ಇಟ್ಟಿಕೊಳ್ಳಬೇಕು. ಪೋಷಕರು ಮಕ್ಕಳ ಚೆನ್ನಾಗಿರಬೇಕು ಅಂತ ಭಯಸುತ್ತಾರೆ. ನೋವು ತಡೆದುಕೊಳ್ಳಬೇಕು...ನಾವು ನೋವು ತಡೆದುಕೊಂಡಿದ್ದೀವಿ. ಧೈರ್ಯವಾಗಿ ಇರಿ ಎಲ್ಲ ಒಳ್ಳೆಯದಾಗುತ್ತದೆ. ಅಮ್ಮ ಆಸ್ಪತ್ರೆ ಓಪನ್ ಮಾಡಿದ್ದಾರೆ ಅದು ಖುಷಿ ಇದೆ. ನನ್ನ ಮಗಳ ಮದುವೆ ಕಾರ್ಡ್ ಕೊಡಲು ಬಂದಿದ್ದೆ ಅದಾದ ಮೇಲೆ ಈಗ ಬಂದಿರುವುದು. ಆಗಾಗ ವಿನೋದ್‌ಗೆ ಕರೆ ಮಾಡಿ ಮಾತನಾಡುತ್ತೀನಿ. ಕಳೆದ ಸಲ ದಸರದಲ್ಲಿ ಭೇಟಿ ಮಾಡಿದ್ದೆ. ನಮ್ಮ ನಡುವೆ ಅದೇ ಆತ್ಮಿಯತೆ ಇರುತ್ತದೆ' ಎಂದು ಶಿವಣ್ಣ ಹೇಳಿದ್ದಾರೆ. 

Follow Us:
Download App:
  • android
  • ios