‘ಹಾರರ್‌ ಸಿನಿಮಾಗಳು ನನಗಿಷ್ಟ. ಅನಂತನಾಗ್‌ ಮತ್ತು ಲಕ್ಷ್ಮೀ ಅವರ ‘ನಾ ನಿನ್ನ ಬಿಡಲಾರೆ’ ಸಿನಿಮಾ ಮರು ಬಿಡುಗಡೆ ಆದಾಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ.

‘ಹಾರರ್‌ ಸಿನಿಮಾಗಳು ನನಗಿಷ್ಟ. ಅನಂತನಾಗ್‌ ಮತ್ತು ಲಕ್ಷ್ಮೀ ಅವರ ‘ನಾ ನಿನ್ನ ಬಿಡಲಾರೆ’ ಸಿನಿಮಾ ಮರು ಬಿಡುಗಡೆ ಆದಾಗ ನಮ್ಮ ತಂದೆ ಆ ಚಿತ್ರ ತೋರಿಸಿದ್ದರು. ನಾನು ಎಲ್ಲಾ ಭಾಷೆಯ ದೆವ್ವಗಳ ಸಿನಿಮಾಗಳನ್ನು ತಪ್ಪದೆ ನೋಡುತ್ತೇನೆ. ಹಳೆಯ ಹೆಸರಿನಲ್ಲಿ ಬಂದಿರುವ ಈ ಹೊಸ ಹಾರರ್‌ ಚಿತ್ರ ಗೆಲ್ಲಬೇಕು’ ಎಂದು ಶರಣ್‌ ಹೇಳಿದ್ದಾರೆ.

‘ನಾ ನಿನ್ನ ಬಿಡಲಾರೆ’ ಎಂಬ ಸಿನಿಮಾ ಟೀಸರ್‌ ಶರಣ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು. ನವೀನ್‌ ಜಿ ಎಸ್‌ ನಿರ್ದೇಶನದ ಚಿತ್ರವನ್ನು ಗುಲ್ಬರ್ಗಾ ಮೂಲದ ಭಾರತಿ ಬಾಳಿ ನಿರ್ಮಾಣ ಮಾಡಿದ್ದಾರೆ. ಅವರ ಪುತ್ರಿ ಅಂಬಾಲಿ ಭಾರತಿ ನಾಯಕಿಯಾಗಿ, ಪಂಚಿ ನಾಯಕನಾಗಿ ನಟಿಸಿದ್ದಾರೆ.ನವೀನ್‌ ಜಿ ಎಸ್‌, ‘ನಮ್ಮ ಕತೆಗೆ ‘ನಾ ನಿನ್ನ ಬಿಡಲಾರೆ’ ಶೀರ್ಷಿಕೆ ಸೂಕ್ತ ಆಗಿದ್ದರಿಂದ ಈ ಹೆಸರು ಇಡಲಾಗಿದೆ’ ಎಂದರು. ಅಂಬಾಲಿ ಭಾರತಿ, ‘ನಿರ್ಮಾಪಕರು ಸಿಗದೆ ಇದ್ದಿದ್ದಕ್ಕೆ ನಾವೇ ನಿರ್ಮಾಣ ಮಾಡಿದ್ದೇವೆ’ ಎಂದರು.

ಈ ಸ್ಟಾರ್ ನಟನಿಗೆ ಮಾತ್ರ ಸಮಂತಾ 'ಗುರು' ಅಂತಾ ಕರೆಯೋದು: ಏನಿದು ಹೊಸ ಕತೆ!

ಆನ್‌ಲೈನ್‌ ಗೇಮ್‌ ಕುರಿತು ಎಚ್ಚರಿಕೆ ನೀಡುವ ರಮ್ಮಿ ಆಟ: ಉಮರ್ ಷರೀಷ್ ನಿರ್ದೇಶನ, ನಿರ್ಮಾಣದ ‘ರಮ್ಮಿ ಆಟ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಆನ್‌ಲೈನ್‌ ಗೇಮ್‌ನ ಅನಾಹುತಗಳ ಕುರಿತು ಎಚ್ಚರಿಕೆ ನೀಡುವ ಈ ಸಿನಿಮಾ ಸೆ.20ರಂದು ಬಿಡುಗಡೆ ಆಗುತ್ತಿದೆ. ಉಮರ್ ಷರೀಫ್ ಮಾತನಾಡಿ, ‘ಆನ್‌ಲೈನ್‌ ಜೂಜಿನಿಂದಾಗಿ ಅನೇಕರು ತೊಂದರೆಗೆ ಒಳಗಾಗಿದ್ದಾರೆ. ಆ ಕುರಿತು ಎಚ್ಚರಿಕೆ ಮೂಡಿಸುವ ಸಿನಿಮಾ ಇದು. ನಮ್ಮೆಲ್ಲರ ಜವಾಬ್ದಾರಿ ನೆನಪಿಸುವ ಸಂಭಾಷಣೆಗಳು ಚಿತ್ರದಲ್ಲಿವೆ’ ಎಂದರು.

ನಿರೂಪಕರಾಗಿದ್ದ ರಾಘವ ಸೂರ್ಯ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸೈಯದ್ ಇರ್ಫಾನ್ ಹಿರಿಯ ನ್ಯಾಯವಾದಿಯಾಗಿ ನಟಿಸಿದ್ದಾರೆ. ಮಂಗಳೂರು ಮೂಲದ ವಿನ್ಯಾ ಶೆಟ್ಟಿ ಹಾಗೂ ಸ್ನೇಹಾ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಆಗಿದ್ದು, ಯು ಸರ್ಟಿಫಿಕೇಟ್ ದೊರೆತಿದೆ.

ಜಯರಾಜ್‌ ಮಗ ಅಜಿತ್‌ ಹೊಸ ಸಿನಿಮಾ: ಬೆಂಗಳೂರು ಭೂಗತ ಲೋಕದಲ್ಲಿ ಸದ್ದು ಮಾಡಿರುವ ಹೆಸರು ಎಂ.ಪಿ. ಜಯರಾಜ್. ಇವರ ಪುತ್ರ ಅಜಿತ್‌ ಜಯರಾಜ್‌ ನಟಿಸಿರುವ ಹೊಸ ಸಿನಿಮಾ ‘ಜಾಂಟಿ ಸನ್ ಆಫ್‌ ಜಯರಾಜ್‌’ ಟೀಸರ್ ಅನ್ನು ವಿನೋದ್‌ ಪ್ರಭಾಕರ್‌ ಹಾಗೂ ಶ್ರೀನಗರ ಕಿಟ್ಟಿ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆನಂದರಾಜ್‌, ‘ಜಯರಾಜ್ ನಂತರದ ಬೆಂಗಳೂರಿನ ಕತ್ತಲ ವ್ಯವಹಾರಗಳ ಸುತ್ತ ಮಾಡಿರುವ ಕತೆ ಇದು. ನಾನು ಕೇಳಿದ್ದು, ನೋಡಿದ್ದು ಮತ್ತು ಓದಿದ್ದ ವಿಷಯಯಗಳನ್ನು ಸಂಗ್ರಹಿಸಿ ಈ ಕತೆ ಮಾಡಿದ್ದೇನೆ’ ಎಂದರು.

ಸ್ತ್ರೀ ದೈವಗಳ ಮೊರೆ ಹೋಗ್ತಿರೋದೇಕೆ ವಿಜಯಲಕ್ಷ್ಮೀ?: ದರ್ಶನ್‌ಗಂಟಿದ ಸ್ತ್ರೀ ಶಾಪಕ್ಕೆ ಸಿಕ್ಕುತ್ತಾ ಇಲ್ಲಿ ಮುಕ್ತಿ?

ಅಜಿತ್‌ ಜಯರಾಜ್‌, ‘ಅಪ್ಪನ ಪಾತ್ರ ಮಾಡುವಾಗ ಕ್ಯಾಮೆರಾ ಮುಂದೆ ನಾನು ನರ್ವಸ್‌ ಆಗುತ್ತಿದ್ದೆ. ನನ್ನ ತಂದೆಯ ಪಾತ್ರ ಮಾಡುವ ಜತೆಗೆ ಅವರ ಮಗನ ಪಾತ್ರವನ್ನೂ ನಾನೇ ಮಾಡಿದ್ದೇನೆ. ನಿಜ ಜೀವನದ ತಂದೆ ಮತ್ತು ಮಗನ ಕತೆಗೆ ರಿಯಲ್‌ ಮಗನೇ ಎರಡೂ ಪಾತ್ರ ಮಾಡಿರುವುದು ವಿಶೇಷ’ ಎಂದರು. ಸುಗೂರುಕುಮಾರ್‌ ನಿರ್ಮಾಣದ ಚಿತ್ರವಿದು. ಜವರ್ಧನ್‌, ಶರತ್‌ ಲೋಹಿತಾಶ್ವ, ಪಟ್ರೋಲ್‌ ಪ್ರಸನ್ನ, ಕಿಶನ್‌, ಸೋನು ಪಾಟೀಲ್‌, ಸಚ್ಚಿನ್‌ ಪುರೋಹಿತ್‌, ಮೈಕೋ ನಾಗರಾಜ್‌ ನಟಿಸಿದ್ದಾರೆ.