ಕೊಡಗಿನ ಸಂಸ್ಕಾರ ಮರೆಯದ ರಶ್ಮಿಕಾ ಮಂದಣ್ಣ; ಮನೆ ಕೆಲಸದವರ ಕಾಲಿಗೂ ಎರಗುವ ಕಿರಿಕ್ ಬೆಡಗಿ

ಪ್ರತಿಯೊಬ್ಬರಿಗೂ ಗೌರವ ಕೊಡುವುದು ನಮ್ಮ ಸಂಸ್ಕಾರ ಎಂದು ಮನೆ ಕೆಲಸದವರ ಕಾಲಿಗೆ ನಮಸ್ಕಾರ ಮಾಡುವುದರ ಬಗ್ಗೆ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ ...
 

I touch house help feet back home says Rashmika Mandanna vcs

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೆ ಸಹಿ ಮಾಡಿ ನ್ಯಾಷನಲ್ ಕ್ರಶ್‌ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಮನೆಯಲ್ಲಿರುವ ಹಿರಿಯ ಕಾಲಿಗೆ ನಮಸ್ಕಾರ ಮಾಡಿಕೊಳ್ಳುವ ಸಂಪ್ರದಾಯದ ಬಗ್ಗೆ ಹಂಚಿಕೊಂಡಿದ್ದರು. ಒಮ್ಮೆ ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಆಗಿರಬಹುದು ಆದರೆ ಇದು ಕೊಡವ ಸಂಪ್ರದಾಯವಂತೆ...

'ಸಣ್ಣ ಪುಟ್ಟ ವಿಚಾರಗಳು ನನಗೆ ಮುಖ್ಯವಾಗುತ್ತದೆ. ಬೆಳಗ್ಗೆ ಎದ್ದ ಕ್ಷಣ ನನ್ನ ಪ್ರೀತಿಯ ಶ್ವಾನಗಳ ಜೊತೆ ಸಮಯ ಕಳೆಯುವೆ ಆನಂತರ ನನ್ನ ಸ್ನೇಹಿತರನ್ನು ಭೇಟಿ ಮಾಡುವೆ. ಹೀಗೆ ದಿನ ಆರಂಭಿಸುವುದರಿಂದ ನನ್ನ ದಿನ ಖುಷಿಯಾಗಿರುತ್ತದೆ. ನಾವು ಬಳಸುವ ಪದಗಳು ತುಂಬಾ ಪವರ್‌ಫುಲ್ ಆಗಿರುತ್ತದೆ ...ಏಕೆಂದರೆ ಮನಸ್ಸು ಕಟ್ಟುವ ಅಥವಾ ಮನಸ್ಸು ಹೊಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ ಯಾರು ಏನೇ ಮಾತನಾಡಿದ್ದರೂ ನನ್ನ ಬಗ್ಗೆ ಕಾಮೆಂಟ್ ಮಾಡಿದ್ದರು ಮನಸ್ಸಿಗೆ ತೆಗೆದುಕೊಳ್ಳುವೆ. ನನ್ನ ಪುಟ್ಟ ಡೈರಿಯಲ್ಲಿ ಸಣ್ಣ ಪುಟ್ಟ ವಿಚಾರಗಳನ್ನು ಬರೆದುಕೊಳ್ಳುವೆ. ಮನೆಯಲ್ಲಿ ನಮ್ಮದೊಂದು ಸಂಪ್ರದಾಯವಿದೆ..ಮನೆಯಲ್ಲಿರುವ ದೊಡ್ಡವರ ಕಾಲಿಗೆ ನಮಸ್ಕಾರ ಮಾಡಿಕೊಳ್ಳುವುದು ಇದು ನಾವು ಗೌರವ ಕೊಡುವ ರೀತಿ. ಸಮಾನತೆ ಇರಬೇಕು ಎಂದು ನಾನು ಮನೆ ಕೆಲಸದವರ ಕಾಲಿಗೂ ನಮಸ್ಕಾರ ಮಾಡಿಕೊಳ್ಳುವೆ. ಈ ರೀತಿ ವಿಚಾರದಲ್ಲಿ ತಾರತಮ್ಯ ಮಾಡುವುದಕ್ಕೆ ಇಷ್ಟವಿಲ್ಲ. ವ್ಯಕ್ತಿಯಾಗಿ ನಾನು ಇರುವುದೇ ಹೀಗೆ' ಎಂದು ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ಜಪಾನೀಸ್‌ ಫ್ಯಾಷನ್‌ ಬ್ರಾಂಡ್‌: ದೇಶದಲ್ಲೇ ಮೊದಲ ಬಾರಿಗೆ Rashmika Mandanna ರಾಯಭಾರಿ

ಕಡಿಮೆ ಅವಧಿಯಲ್ಲಿ ರಶ್ಮಿಕಾ ಮಂದಣ್ಣ ದೊಡ್ಡ ಸಾಧನೆ ಮಾಡಿರುವುದಕ್ಕೆ ಪೋಷಕರು ಎಷ್ಟು ಖುಷಿಯಾಗಿದ್ದಾರೆ ಎಂದು ಪ್ರಶ್ನೆ ಮಾಡಿದಕ್ಕೆ 'ನನ್ನ ಪೋಷಕರು ನನ್ನ ವೃತ್ತಿ ಜೀವನದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಅವರಿಗೆ ಫಿಲ್ಮಂ ಇಂಡಸ್ಟ್ರಿ ಸಂಪರ್ಕ ಇಲ್ಲವೇ ಇಲ್ಲ ಹೀಗಾಗಿ ಅವರು ಮಗಳು ಏನು ಮಾಡುತ್ತಿದ್ದಾಳೆಂದು ಅವರಿಗೆ ಗೊತ್ತಾಗುವುದಿಲ್ಲ. ಆದರೆ ನಾನು ಅವಾರ್ಡ್‌ ಹಿಡಿದುಕೊಂಡು ಮನೆಗೆ ಹೋದಾಗ ತುಂಬಾ ಖುಷಿ ಪಡುತ್ತಾರೆ. ಇದರ ಅರ್ಥ ಒಂದೇ ನಾನು ಇನ್ನು ಹೆಚ್ಚಿಗೆ ಸಾಧನೆ ಮಾಡಬೇಕು ಆಗ ಅವರು ಖುಷಿ ಪಡುತ್ತಾರೆ ಹೆಮ್ಮೆ ಪಡುತ್ತಾರೆ. ಯಾವ ನಿರ್ಬಂಧ ಇಲ್ಲದೆ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಇದುವರೆಗೂ ಯಾವ ಕೊರತೆಯೂ ಇಲ್ಲ. ಈಗ ನಾನು ಅವರನ್ನು ನೋಡಿಕೊಳ್ಳುವ ಸಮಯ ಬಂದಿದೆ' ಎಂದು ರಶ್ಮಿಕಾ ಹೇಳಿದ್ದಾರೆ.

ಶುಭ್‌ಮನ್ ಗಿಲ್‌ಗೆ ರಶ್ಮಿಕಾ ಮೇಲೆ ಕ್ರಶ್: ಹೀಗಂತ ಎಲ್ಲಿ ಹೇಳಿದೆ ಕೇಳಿದ ಕ್ರಿಕೆಟಿಗ

ನೆಗೆಟಿವ್ ಕಾಮೆಂಟ್ಸ್‌:

'ನನಗೆ ನಾನೇ I am queen of trolls ಎನ್ನುವ ಕಿರೀಟ ಕೊಟ್ಟು ಕೊಂಡಿರುವೆ. ಆರಂಭದಲ್ಲಿ ಟ್ರೋಲ್‌ಗಳು ಅತಿ ಹೆಚ್ಚು ಪರಿಣಾಮಗಳು ಬೀರುತ್ತಿತ್ತು. ಚಿತ್ರರಂಗಕ್ಕೆ ಕಾಲಿಟ್ಟ ವರ್ಷದಲ್ಲಿ ಅತಿ ಹೆಚ್ಚು ಟ್ರೋಲ್‌ಗಳನ್ನು ಎದುರಿಸಿದೆ. ವಿಚಿತ್ರ ಏನೆಂದರೆ ಮನುಷ್ಯರು ಸಂದರ್ಭ ಏನೇ ಇರಲಿ ಆರಾಮ್ ಆಗಿ ಹೊಂದಿಕೊಳ್ಳುತ್ತಾರೆ. ಮೊದಲ ವರ್ಷ ಇದನ್ನು ಅರ್ಥ ಮಾಡಿಕೊಳ್ಳಲು ತುಂಬಾನೇ ಕಷ್ಟವಾಯ್ತು. ಎರಡನೇ ವರ್ಷ ಹೊಂದಿಕೊಂಡು ಜೀವನ ಮುಂದೆ ಸಾಗಿಸಲು ಸಜ್ಜಾಗಿದ್ದೆ. ಹೀಗೆ ಮೂರನೇ ವರ್ಷ ನಾಲ್ಕನೇ ವರ್ಷ ಸಾಗಿತ್ತು 5ನೇ ವರ್ಷದಲ್ಲಿ ಒಂದು ಟ್ರೋಲ್‌ ಇಲ್ಲ. ಟ್ರೋಲ್‌ ಆಗುತ್ತಿಲ್ಲ ಅಂದ್ರೆ ಒಂದು ನಾನು ಸರಿ ಮಾಡುತ್ತಿಲ್ಲ ಇನ್ನೊಂದು ನಾನು ಏನೂ ತಪ್ಪು ಮಾಡುತ್ತಿಲ್ಲ ಎಂದು. ಈಗಿನ ಕಾಲದಲ್ಲಿ ಎಲ್ಲರೂ ಸಣ್ಣ ಪುಟ್ಟ ವಿಚಾರಕ್ಕೆ ಟ್ರೋಲ್ ಆಗುತ್ತಾರೆ. 

Latest Videos
Follow Us:
Download App:
  • android
  • ios