Kantara ಹೆಮ್ಮೆಯ ಕನ್ನಡಿಗನಾಗಿ ಕನ್ನಡ ಸಿನಿಮಾ ಮಾತ್ರ ಮಾಡೋದು: ಹಿಂದಿ ಫ್ಯಾನ್ಸ್‌ಗೆ ರಿಷಬ್ ಶೆಟ್ಟಿ ಕ್ಲಾರಿಟಿ
ವಿಶ್ವಾದ್ಯಂತ ಹೆಸರು ಮಾಡುತ್ತಿರುವ ಕಾಂತಾರ. ಬಾಲಿವುಡ್ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ಅಭಿನಯಿಸುತ್ತಾರಾ?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆ ಮಾಡುತ್ತಿದೆ. ಒಂದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿ ಅಭಿಮಾನಿಗಳ ಒತ್ತಾಯಕ್ಕೆ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ ಅಂದ್ರೆ ರಿಷಬ್ ಮತ್ತು ಹೊಂಬಾಳೆ ಫಿಲ್ಮ ಲೆವೇಲ್ ಮತ್ತೊಂದು ಹಂತ ತಲುಪಿದೆ. ಯಾವುದೇ ಸ್ಟಾರ್ಡಂ ಇಲ್ಲದೆ ಸಿಂಪಲ್ ಆಗಿ ಪಂಚೆ ಧರಿಸಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವ ರಿಷಬ್ ಶೆಟ್ಟಿಗೆ ಹಿಂದಿ ನಿರ್ಮಾಪಕರು ಬಿಗ್ ಬಜೆಟ್ ಕಥೆ ಹಿಡಿದು ಸಂಪರ್ಕ ಮಾಡುತ್ತಿದ್ದಾರೆ ಆದರೆ ಶೆಟ್ರು ನಿರಾಕರಿಸುತ್ತಿರುವುದು ಯಾಕೆ?
ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಿಷಬ್ ನೇರವಾಗಿ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ. 'ನಾನು ಕನ್ನಡ ಸಿನಿಮಾಗಳನ್ನು ಮಾಡಬೇಕು. ನಾನು ಹೆಮ್ಮೆಯ ಕನ್ನಡಿಗ. ಕನ್ನಡ ಚಿತ್ರರಂಗ ಮತ್ತು ಕನ್ನಡ ಜನತೆಯಿಂದ ನಾನು ಇಂದು ಈ ಮಟ್ಟದಲ್ಲಿ ಹೆಸರು ಮಾಡಿರುವುದು. ಒಂದು ಸಿನಿಮಾ ಹಿಟ್ ಆಗಿದೆ ಎಂದ ಮಾತ್ರಕ್ಕೆ ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರು ಬದಲಾಗುವುದಿಲ್ಲ. ನಮ್ಮ ಕೋರ್ ಕನ್ನಡ ಸಿನಿಮಾರಂಗದಲ್ಲಿ ಉಳಿಯುತ್ತದೆ' ಎಂದು ಇಂಡಿಯಾ ಎಕ್ಸಪ್ರೆಸ್‌ನಲ್ಲಿ ರಿಷಬ್ ಮಾತನಾಡಿದ್ದಾರೆ.
ಕಾಂತಾರ ಸಿನಿಮಾ ವಿಶ್ವಾದ್ಯಂತ ಹೆಸರು ಮಾಡುತ್ತಿದೆ ಗಳಿಕೆ ಮಾಡುತ್ತಿದೆ ಅನ್ನೋ ವಿಚಾರವನ್ನು ಈಗಲೂ ರಿಬಷ್ ಕನಸಿನಂತೆ ಕಾಣುತ್ತಿದ್ದಾರೆ. ಅಭಿಮಾನಿಗಳು ಕೊಡುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದಾರೆ. 'ಹೆಚ್ಚು ಪ್ರಾದೇಶಿಕತೆ ಹೆಚ್ಚು ಸಾರ್ವತ್ರಿಕವಾಗಿದೆ ಎಂದು ನಾನು ನಂಬುತ್ತೇನೆ. ಜನರಿಗೆ ನನ್ನ ಕಂಟೆಂಟ್ ಇಷ್ಟವಾದರೆ ಅವರಿಗಾಗಿ ಹಿಂದಿಯಲ್ಲಿ ರಿಲೀಸ್ ಮಾಡುವೆ ಇಲ್ಲದಿದ್ದರೆ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡುವೆ. ಕಾಂತಾರ ಸಿನಿಮಾ ರಿಲೀಸ್ ಮಾಡುವಾಗ ಪ್ಯಾನ್ ಇಂಡಿಯಾ ಬಗ್ಗೆ ಯೋಚನೆ ಮಾಡಿರಲಿಲ್ಲ. ಸಿನಿಮಾ ಅದಾಗೆ ಭಾರತದಲ್ಲಿ ಪ್ರಚಾರ ಪಡೆದುಕೊಂಡಿತ್ತು ಈಗಲ್ಲೂ ಇದೆಲ್ಲಾ ಹೇಗೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ. ಈಈಗ ಅದು ಪ್ಯಾನ್-ಇಂಡಿಯಾ ಹಿಟ್ ಆಗಿರುವುದರಿಂದ, ನಾನು ಚಲನಚಿತ್ರಗಳನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಬೇಕು ಎಂದು ನಾನು ಭಾವಿಸುವುದಿಲ್ಲ. ನನ್ನ ಜಾಗದ ಬಗ್ಗೆ ಹೆಚ್ಚಿನ ಕಥೆ ಮಾಡುವೆ. ನನ್ನ ಶ್ರಮ ಹೆಚ್ಚಿಗೆ ಇರಲಿದೆ' ಎಂದು ರಿಷಬ್ ಹೇಳಿದ್ದಾರೆ.
ಮುದ್ದು ಮಕ್ಕಳ ಜೊತೆ ಪ್ರಗತಿ ಶೆಟ್ಟಿ; 'ಕಾಂತಾರ' ಹೀರೋನ ಸುಂದರ ಕುಟುಂಬ ಹೇಗಿದೆ ನೋಡಿ
ಬಿ-ಟೌನ್‌ನಲ್ಲಿ ವಾರ್:
ಕಾಂತಾರ ಸಿನಿಮಾ ಅಮೇಜಾನ್ ಪ್ರೈಮ್ ಮೂಲಕ ಓಟಿಟಿಗೆ ಕಾಲಿಡಲು ಸಜ್ಜಾಗಿದೆ. ಈಗಾಗಲೆ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಅಗಿದ್ದು ಸಿನಿಮಾ ಸೂಪರ್ ಆಗಿದೆ ಎನ್ನುತ್ತಿದ್ದಾರೆ. ಈಗ ರಿಷಬ್ ಮತ್ತು ರಣಬೀರ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ. ಕಾಂತಾರ ಸಿನಿಮಾ ಕೊನೆ 20 ನಿಮಿಷ ಮಾತ್ರ ಚೆನ್ನಾಗಿರುವುದು ಕತೆ ಇಲ್ಲ ಆದರೆ ಬ್ರಹ್ಮಾಸ್ತ್ರ ಸಿನಿಮಾ ಆರಂಭದಿಂದಲ್ಲೂ ಚೆನ್ನಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಇದೀಗ ಕಾಂತಾರ ಸಿನಿಮಾ 300 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ ಎಂದು ವರದಿಯಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾಂತಾರ ಸಾಧನೆ ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಓವರ್‌ಸೀಸ್ ಗಳಿಕೆಯ ಒಟ್ಟು ಮೊತ್ತ 300 ಕೋಟಿ ದಾಟಿದೆ. ಈ ಮೊತ್ತದಲ್ಲಿ ಕನ್ನಡದ ಗಳಿಕೆ ರು.150 ಕೋಟಿಯಾದರೆ ತೆಲುಗಿನಿಂದ ಬಂದದ್ದು .50 ಕೋಟಿ. ಹಿಂದಿ ಅವತರಣಿಕೆಯ ಗಳಿಕೆ 50 ರೂ. ಕೋಟಿ ದಾಟಿದೆ. ತಮಿಳುನಾಡಿನ ಮಂದಿ ಮಳೆಯ ನಡುವೆಯೇ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಕೇರಳದಲ್ಲೂ ಚಿತ್ರ ಜಯಭೇರಿ ಬಾರಿಸಿದೆ.
'ಕಾಂತಾರ' ಹಾಡಿನ ವಿವಾದ; ಧರ್ಮಸ್ಥಳದಲ್ಲಿ ರಿಷಬ್ ಶೆಟ್ಟಿ ಹೇಳಿದ್ದೇನು?
ತೆಲುಗು ಭಾಷೆಯೊಂದರಲ್ಲೇ ಚಿತ್ರ 50 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ. ತೆಲುಗಿಗೆ ಡಬ್ ಆಗಿ ಈ ಮೊತ್ತ ಸಂಗ್ರಹಿಸುತ್ತಿರುವ 6ನೇ ಸಿನಿಮಾ ಇದಾಗಿದೆ. ಕನ್ನಡದ 2ನೇ ಸಿನಿಮಾವಾಗಿ ಕಾಂತಾರ ಹೊರಹೊಮ್ಮಿದೆ. ಎಲ್ಲಾ ಭಾಷೆಯಿಂದನೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದೆ.