ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಆಪ್ತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಯಶ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟ, ನಟಿಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 

ಬಹುನಿರೀಕ್ಷಿತ ಕೆಜಿಎಫ್‌ 2 ಟೀಸರ್ ಲೀಕ್.. ತಕ್ಷಣ ಪರಿಹಾರ ತಗೊಂಡ ನೀಲ್! 

ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ತಂಡ ಚಾಪ್ಟರ್ 2ರ ಟೀಸರ್‌ ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು. ಆದರೆ ಕೆಲ ಕಿಡಿಗೇಡಿಗಳನ್ನು ನಿನ್ನೆ ರಾತ್ರಿಯೇ ಟೀಸರ್ ವಿಡಿಯೋ ಲೀಕ್ ಮಾಡಿದ ಕಾರಣ ರಾತ್ರಿ 9.30ಕ್ಕೆ ಹೊಂಬಾಳೆ ಪ್ರೊಡಕ್ಷನ್ಸ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಿದೆ. ರಿಲೀಸ್‌ ಆಗಿ ದಿನ ಕಳೆಯುವ ಮುನ್ನವೇ ಯುಟ್ಯೂಬ್‌ನಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವಿನ್‌ ಕೈ ಚಳಕವನ್ನು ಮಂದಿ ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಯೂ  ಟೀಸರ್ ಶೇರ್ ಮಾಡಿಕೊಂಡು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿ ಬಾಲಿವುಡ್‌ ನಟ ಹೃತಿಕ್ ರೋಷನ್‌ ಕನ್ನಡ ಸ್ಟಾರ್ ನಟನ ಚಿತ್ರದ ಬಗ್ಗೆ ಕಾಮೆಂಟ್ ಮಾಡಿರುವುದು.

ಹೃತಿಕ್‌ ಪೋಸ್ಟ್:
'ಗ್ರೇಟ್‌ ಟೀಸರ್. ಇಡೀ ತಂಡಕ್ಕೆ ಶುಭವಾಗಲಿ. ಹುಟ್ಟುಹಬ್ಬ ಶುಭಾಶಯಗಳು ಯಶ್' ಎಂದು ಹೃತಿಕ್ ರೋಷನ್ ಟ್ಟೀಟ್ ಮಾಡಿದ್ದಾರೆ. 

ಯಶ್‌ ಪರ್ಫೆಕ್ಟ್‌ ಆಗಲು ಕಾರಣ ಗೊತ್ತಾ? ರಾಧಿಕಾ ಹೇಳ್ತಿದ್ದಾರೆ ಕೇಳಿ 

ಬಾಲಿವುಡ್‌ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ಇರುವ ಕಾರಣ ಬಿ-ಟೌನ್‌ ಮಂದಿ ಟೀಸರ್ ನೋಡುತ್ತಿದ್ದಾರಾ ಅಥವಾ ಪ್ರಶಾಂತ್ ನೀಲ್ ಮೇಕಿಂಗ್ ಹಾಗಿದ್ಯಾ ಎಂದು ತಿಳಿಯದ ಅಭಿಮಾನಿಗಳು ಕೆಜಿಎಫ್‌ 3ನೇ ಚಾಪ್ಟರ್‌ನಲ್ಲಿ ಖಂಡಿತಾ ಆ ಹೃತಿಕ್ ಇದ್ದೇ ಇರುತ್ತಾರೆ ಎಂದು ಮಾತನಾಡಿ ಕೊಳ್ಳುತ್ತಿದ್ದಾರೆ.