Asianet Suvarna News Asianet Suvarna News

ಅಣ್ಣಾವ್ರು ಸಿಟ್ಟಾದಾಗ ಹೇಗಿರ್ತಿದ್ರು ಗೊತ್ತಾ? ಅವ್ರ ಸಿಟ್ಟನ್ನು ಹತ್ತಿರದಿಂದ ಕಂಡವರು ಹೀಗಂತಾರೆ..

ಅಣ್ಣಾವ್ರು ಅಂದರೆ ನಟ ಸಾರ್ವಭೌಮ ರಾಜ್ ಕುಮಾರ್. ಅವರ ಗುಣ ಎಂಥದ್ದು, ಅಭಿಮಾನಿಗಳನ್ನವರು ಎಷ್ಟು ಇಷ್ಟ ಪಡ್ತಿದ್ರು ಅಂತ ನಮಗೆಲ್ಲ ಗೊತ್ತು. ಆದರೆ ಸಿಟ್ಟು ಬಂದಾಗ ಅಣ್ಣಾವ್ರು ಹೇಗಿರ್ತಿದ್ರು, ಅವರಿಗೆ ಸಿಟ್ಟು ಬರ್ತಿದ್ದದ್ದು ಯಾಕೆ?
 

How Dr Rajkumar behaved when he was angry with wife daughters
Author
Bengaluru, First Published Oct 16, 2021, 2:04 PM IST

ಡಾ ರಾಜ್ ಕುಮಾರ್ (Dr Rajkumar) ಒಬ್ಬ ವ್ಯಕ್ತಿ ಹೇಗಿರಬೇಕು ಅನ್ನೋದಕ್ಕೆ ಮಾದರಿಯಾಗಿ ಇರ್ತಿದ್ರು. ಅವರ ಜೊತೆ ಇರುವವರಿಗೆ ಮಾತ್ರ ಅಲ್ಲ, ಇಡೀ ಕರ್ನಾಟಕಕ್ಕೇ (Karnataka) ಅವರೆಂಥಾ ಸದ್ಗುಣಿ ಅನ್ನೋದು ಗೊತ್ತು. ಅವರದ್ದು ಯಾವತ್ತೂ ಸಾತ್ವಿಕ ಆಕ್ರೋಶ. ಗೋಕಾಕ್ (Gokak) ಚಳವಳಿಯಲ್ಲಿ ಕನ್ನಡಕ್ಕಾದ ಅನ್ಯಾಯದ ವಿರುದ್ಧ ಅವರು ಸಾತ್ವಿಕ ಸಿಟ್ಟು ಪ್ರದರ್ಶಿಸಿದ್ದರು. ರಾಜ್ಯಕ್ಕೆ ರಾಜ್ಯದ ಜನರೇ ಆಗ ಕನ್ನಡದ ಉಳಿವಿಗಾಗಿ ಸಿಡಿದೆದ್ದಿದ್ದರು. ಅವರ ಸಾತ್ವಿಕ ಆಕ್ರೋಶದಿಂದ ಕನ್ನಡದ (Kannada) ನೆಲಕ್ಕೆ, ಕನ್ನಡಿಗರಿಗೆ ಸಾಕಷ್ಟು ಒಳಿತಾಗಿತ್ತು. ಆದರೆ ಅಣ್ಣಾವ್ರು ಮನೆಯಲ್ಲಿ ಸಿಟ್ಟು ಮಾಡ್ಕೊಳ್ಳೋ ರೀತಿನೇ ಡಿಫರೆಂಟ್. ಅದರಿಂದ ಒಂದಿಷ್ಟು ಜನರಿಗೆ ಸಾಕಷ್ಟು ಪ್ರಯೋಜನ ಆಗ್ತಿತ್ತು. ಆದರೆ ಒಂದಿಷ್ಟು ಜನ ಅವರ ವಿರುದ್ಧ ಸಿಡಿಮಿಡಿ ಪಟ್ಕೊಳ್ತಿದ್ರು. ಇದರ ಹಿಂದೆ ಮಜವಾದ ಕತೆ ಇದೆ. ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ (Anubhanda Award) ಫಂಕ್ಷನ್ ವೇಳೆ ಅಣ್ಣಾವ್ರ ಮೊಮ್ಮಗಳು ನಮಗೆಲ್ಲ ಗೊತ್ತಿಲ್ಲದ ಅವರ ವಿಶಿಷ್ಟ ಗುಣವನ್ನು ಹೇಳಿದ್ದಾರೆ. ಇದು ಅಣ್ಣಾವ್ರ ಅಭಿಮಾನಿಗಳಿಗೆ ಬಹಳ ಖುಷಿ ಕೊಡುವ ಸಂಗತಿ. 

 

 ಧನ್ಯಾ ರಾಮ್ ಕುಮಾರ್ (Dhanya Ramkumar) ಡಾ ರಾಜ್ ಕುಟುಂಬದ ಕುಡಿ. ಅಣ್ಣಾವ್ರ ಮಗಳು ಪೂರ್ಣಿಮಾ ಹಾಗೂ ಹಿರಿಯ ನಟ ರಾಮ್ ಕುಮಾರ್ (Ramkumar) ಅವರ ಪುತ್ರಿ. ಅವರು ಅಭಿನಯಿಸಿದ ಚೊಚ್ಚಲ ಸಿನಿಮಾ (Debut) 'ನಿನ್ನ ಸನಿಹಕೆ' (Ninna Sanihake) ಕಳೆದ ವಾರ ತಾನೇ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಸಲ್ಮಾನ್ ಖಾನ್‌ಗೆ ಆಕ್ಷನ್ ಹೇಳಲಿದ್ದಾರೆ ಕಿಚ್ಚ.. ವಿಶಿಷ್ಟ ಕತೆ!

ರಾಮ್ ಕುಮಾರ್ ಮಗಳ ಪರ್ಫಾಮೆನ್ಸ್ (Performance) ಕಂಡು ಆನಂದಬಾಷ್ಪ ಸುರಿಸಿದ್ರೆ ಶಿವಣ್ಣ, ಅಪ್ಪು ಸೇರಿದಂತೆ ಅಣ್ಣಾವ್ರ ಫ್ಯಾಮಿಲಿ (Dr Rajkumar Family) ಮಂದಿ, ತಮ್ಮ ಕುಟುಂಬದ ಮೂರನೇ ಜನರೇಶನ್ ಕಲಾವಿದೆಗೆ (Actress) ಆತ್ಮೀಯ ಸ್ವಾಗತ ಕೋರಿದರು. ಲಿವ್‌ ಇನ್ ರಿಲೇಶನ್ ಶಿಪ್‌ನ (Live in Relationship) ಮೇಲಿರುವ ಈ ಚಿತ್ರದಲ್ಲಿ ಈ ಕಾಲದ ಸಂಬಂಧಗಳ ಕತೆ ಹೇಳಲಾಗಿದ್ದು, ಪ್ರೇಕ್ಷಕರಿಗೆ ಕನೆಕ್ಟ್ ಆದಂತಿದೆ. 'ನಿನ್ನ ಸನಿಹಕೆ' ಸಿನಿಮಾ ಬರುವವರೆಗೂ ಧನ್ಯಾ ರಾಮ್ ಕುಮಾರ್ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಅಣ್ಣಾವ್ರ ಫ್ಯಾಮಿಲಿಯಲ್ಲಿ ಗಂಡು ಮಕ್ಕಳು ಸಿನಿಮಾದಲ್ಲಿ ಮಿಂಚಿದ್ರೆ ಹೆಣ್ಣುಮಕ್ಕಳು ಫ್ಯಾಮಿಲಿ ಲೈಫ್‌ನಲ್ಲಿದ್ದರು. ಆದರೆ ಧನ್ಯಾ ಮೂಲಕ ಅಣ್ಣಾವ್ರ ಕುಟುಂಬದ ಹೆಣ್ಣುಮಗಳೊಬ್ಬಳ ಸಿನಿಮಾ ಎಂಟ್ರಿಯಾಗಿದೆ. ಬಹುಶಃ ಈಗ ಅಣ್ಣಾವ್ರು ಇರುತ್ತಿದ್ದರೆ ಮೊಮ್ಮಗಳ ಸಿನಿಮಾಕ್ಕೆ ಶುಭ ಹಾರೈಸಿ ಹರಸುತ್ತಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಇಂಥಾ ಖುಷಿಯ ಕ್ಷಣದಲ್ಲಿ ಅವರ ಫ್ಯಾಮಿಲಿ ಅಣ್ಣಾವ್ರನ್ನ ನೆನೆಸಿಕೊಂಡಿದೆ. 

ತಾತನ ಬಗ್ಗೆ ಯಾವಾಗ್ಲೂ ಅಭಿಮಾನ, ಮುದ್ದು, ಪ್ರೀತಿಯಿಂದ ಮಾತನಾಡುವ ಧನ್ಯಾ ರಾಮ್ ಕುಮಾರ್ ಕಲರ್ಸ್ ಕನ್ನಡ (Colors Kannada)ದ 'ಅನುಬಂಧ' ಅವಾರ್ಡ್ ಫಂಕ್ಷನ್ ನಲ್ಲಿ ತಾತನ ವಿಶಿಷ್ಟ ಗುಣದ ಬಗ್ಗೆ ಹೇಳಿದ್ದಾರೆ. 'ತಾತನಿಗೆ ಮೊಮ್ಮಕ್ಕಳು ಅಂದರೆ ಬಹಳ ಇಷ್ಟ. ಅಷ್ಟೂ ಮೊಮ್ಮಕ್ಕಳು ಮನೆಯಲ್ಲಿದ್ದರೂ ಒಂದೊಂದು ಮಗುವಿಗೂ ಏನೇನಿಷ್ಟ ಅಂತ ಅವರಿಗೆ ತಿಳಿದಿರುತ್ತಿತ್ತು. ಮಕ್ಕಳ ಇಷ್ಟದ ತಿಂಡಿಗಳನ್ನು ಆಗಾಗ ಮಾಡಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಹಾಗೆ ಮಾಡಿದಾಗಲೆಲ್ಲ ಆ ಮಗುವಿಗೆ ಬೇಕಾದಷ್ಟು ಆ ತಿಂಡಿ ಸಿಗುವ ಹಾಗೆ ನೋಡಿಕೊಳ್ಳುತ್ತಿದ್ದರು,' ಅಂತಾರೆ. 

ಥೇಟರಲ್ಲೇ ಸಿನಿಮಾ ನೋಡ್ಬೇಕು ಅಂತಿದ್ದಾರೆ ಅಮ್ಮ: ಕಿಚ್ಚ ಜೊತೆ ಮಾತುಕತೆ

ಅಣ್ಣಾವ್ರು ಸಿಟ್ಟು ಮಾಡಿಕೊಳ್ಳುತ್ತಿದ್ದದ್ದು ಯಾಕೆ ಅಂತಲೂ ಹೇಳಿದ್ದಾರೆ ಧನ್ಯಾ. 'ಅಮ್ಮಂಗೆ ಶಾಪಿಂಗ್ (Shopping) ಮಾಡುವ ಹಾಬಿ ಇತ್ತು. ಅವರು ಶಾಪಿಂಗ್ ಹೋಗುವಾಗ ನಮ್ಮನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಅದನ್ನು ಕಂಡರೆ ತಾತಂಗೆ ಸಿಟ್ಟು ಬರುತ್ತಿತ್ತು. ಮಕ್ಕಳಿಗೂ ಹೊರಗಿನ ಓಡಾಟ ಖುಷಿ ಕೊಡುತ್ತೆ. ಅವರನ್ಯಾಕೆ ಬಿಟ್ಟು ಹೋಗೋದು ಅಂತ ಅವರಿಗೆ ಸಿಟ್ಟು. ನಮ್ಮನ್ನು ಮನೆಯಲ್ಲಿ ಬಿಟ್ಟು ಶಾಪಿಂಗ್ ಗೆ ಹೋದಾಗ ಅಮ್ಮ ತಾತನ ಕೈಯಲ್ಲಿ ಬೈಯಿಸಿಕೊಳ್ತಿದ್ರು' ಅಂತ ಹೇಳ್ತಾರೆ ಧನ್ಯಾ. 

ಅಷ್ಟೇ ಅಲ್ಲ. ವೇದಿಕೆಯಲ್ಲಿ ರಾಜ್ ಪುತ್ರಿ ಪೂರ್ಣಿಮಾ ಅವರೂ ಇದ್ದರು. 'ಅಪ್ಪಾಜಿ ಕೈಯಲ್ಲಿ ನಾವೆಲ್ಲ ಬೈಯಿಸಿಕೊಂಡಿದ್ದೀವಿ. ಅವರು ಬೈಯಲ್ಲ ಅನ್ನೋದೆಲ್ಲ ಸುಳ್ಳು. ನಮಗೆ ಚೆನ್ನಾಗಿ ಬೈಯುತ್ತಿದ್ರು. ಆದ್ರೆ ನಾವು ಬೆಳೆಯೋ ಹೊತ್ತಿಗೆ ಅವರು ಬಹಳ ಬ್ಯುಸಿ ಇದ್ದರು. ನಮಗೆ ಟೈಮ್ (Time) ಕೊಡೋಕೆ ಅವರಿಂದ ಆಗುತ್ತಿರಲಿಲ್ಲ. ಆದರೆ ಮೊಮ್ಮಕ್ಕಳಿಗೆ (Grand kids) ಸಾಕಷ್ಟು ಸಮಯ ಕೊಡುತ್ತಿದ್ದರು. ಎಷ್ಟೋ ಸಲ ಅವರನ್ನು ಸ್ಕೂಲಿಗೆ ಕರೆದುಕೊಂಡು ಹೋಗಿ ವಾಪಾಸ್ ಕರೆದುಕೊಂಡು ಬಂದಿದ್ದೂ ಇದೆ' ಅನ್ನುವ ಪೂರ್ಣಿಮಾ ರಾಜ್ ಅವರ ಸರಳತೆ ಹೇಗಿತ್ತು ಅನ್ನೋದನ್ನೂ ವಿವರಿಸ್ತಾರೆ. ಒಟ್ಟಾರೆ ಮೊಮ್ಮಗಳ ಬಾಯಿಂದ ತಾತನ ವಿಶಿಷ್ಟ ಗುಣವೊಂದರ ವಿಚಾರ ಹೊರಬಿದ್ದಿದೆ. 

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಗಟ್ಟಿಮೇಳ' ನಟಿ ಶರಣ್ಯ ಶೆಟ್ಟಿ!

Follow Us:
Download App:
  • android
  • ios