ಸಲ್ಮಾನ್ ಖಾನ್‌ಗೆ ಆಕ್ಷನ್ ಹೇಳಲಿದ್ದಾರೆ ಕಿಚ್ಚ.. ವಿಶಿಷ್ಟ ಕತೆ!
ಬೆಂಗಳೂರು/ ಮುಂಬೈ(ಅ. 12) ದೊಡ್ಡದೊಂದು ಸುದ್ದಿ ಹೊರಗೆ ಬಂದಿದೆ. ಇಬ್ಬರು ಸ್ಟಾರ್ ಗಳ ಅಭಿಮಾನಿಗಳಿಗೆ ಇದು ಭರ್ಜರಿ ಭೋಜನ. ಬಾಲಿವುಡ್ (Bollywood) ನಾಯಕ ಸಲ್ಮಾನ್ ಖಾನ್ ಗೆ (Salman Khan)ಕಿಚ್ಚ ಸುದೀಪ್(Kiccha Sudeep) ಆಕ್ಷನ್ ಕಟ್ ಹೇಳಲಿದ್ದಾರೆ.

ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಕೇಳೋದಕ್ಕೆ ಕಿಚ್ಚ ಸುದೀಪ್ ರೆಡಿಯಾಗಿದ್ದು ಈಗಾಗಲೆ ಸಿನಿಮಾದ ಕಥೆ ರೆಡಿ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್ ನಲ್ಲೇ ಸಲ್ಮಾನ್ ಖಾನ್ ಗೆ ಕಥೆ ಹೇಳಬೇಕಿತ್ತು. ಈ ಬಗ್ಗೆ ಸಲ್ಮಾನ್ ಖಾನ್ ಜೊತೆಗೂ ಸುದೀಪ್ ಮಾತನಾಡಿದ್ದರು.
ಹಿಂದಿಯಲ್ಲಿ ಮಾತ್ರ ನಟಿಸುವಂತೆ ಸಲ್ಮಾನ್ ಖಾನ್ ಗೆ ಸುದೀಪ್ ಕೇಳಿದ್ದಾರೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಸುದೀಪ್ ನಟಿಸಲಿದ್ದಾರೆ.
Sudeep vikrat Rona
ಈ ಬಗ್ಗೆ ಸಲ್ಮಾನ್ ಖಾನ್ ರನ್ನ ಸಂಪರ್ಕ ಮಾಡಿರುವ ಕಿಚ್ಚ ಸಲ್ಮಾನ್ ಖಾನ್ ಗೆ ಪಾತ್ರ ಒಪ್ಪುತ್ತೆ ಅಂತ ಅವರನ್ನ ಹಿಂದಿ ಭಾಷೆಗೆ ಆಯ್ಕೆ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ಅವರನ್ನ ಭೇಟಿ ಮಾಡಿ ಕಥೆ ಹೇಳುತ್ತೇನೆ ಎಂದಿದ್ದಾರೆ.
ಸಲ್ಮಾನ್ ಖಾನ್ ಜೊತೆ ಸ್ನೇಹ ಹೊಂದಿರೋ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಜತೆ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಶೋನಲ್ಲಿಯೂ ವೇದಿಕೆ ಹಂಚಿಕೊಂಡಿದ್ದರು.
ಹಿಂದಿಯ ಬಿಗ್ ಬಾಸ್ ಶೋ ವನ್ನು ಸಲ್ಮಾನ್ ಖಾನ್ ನಿರ್ವಹಿಸಿದರೆ ಕನ್ನಡದ ಎಲ್ಲ ಸೀಸನ್ ಗಳಿಗೆ ಸುದೀಪ್ ಸೂತ್ರಧಾರಿಯಾಗಿದ್ದಾರೆ. ಕಿರುತೆರೆ ಮಟ್ಟಿಗೆ ಅತ್ಯಂತ ಯಶಸ್ವಿ ಶೋ ಎಂಬ ಖ್ಯಾತಿ ಬಿಗ್ ಬಾಸ್ ನದ್ದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.