Asianet Suvarna News Asianet Suvarna News

ನಾಗರಹಾವು ಚಿತ್ರಕ್ಕೆ ವಿಷ್ಣುವರ್ಧನ್ ಆಯ್ಕೆಯಾಗಿದ್ದು ಹೇಗೆ, ಯಾಕೆ? ಪುಟ್ಟಣ್ಣ ಕಣಗಾಲ್ ಅಂದು ಹೇಳಿದ್ದೇನು?

ಕನ್ನಡದ ಮೇರು ನಿರ್ದೇಶಕರು ಖ್ಯಾತಿಯ ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು ಚಿತ್ರವು 1972ರಲ್ಲಿ ಬಿಡುಗಡೆ ಆಗಿತ್ತು. ಅಂದು ಈ ಚಿತ್ರವು ಅದೆಷ್ಟು ಸೂಪರ್ ಹಿಟ್ ಆಗಿತ್ತು ಎಂದರೆ, ನಾಗರಹಾವು ಚಿತ್ರದ ಮೂಲಕ ಕನ್ನಡದಲ್ಲಿ ವಿಷ್ಣುವರ್ಧನ್ ಎಂಬ 'ಆಂಗ್ರಿ ಯಂಗ್‌ಮ್ಯಾನ್' ಲುಕ್‌ನ ಹೊಸ ನಟನ ಉದಯವಾಯಿತು. 

How actor Vishnuvardhan selected for Puttanna Kanagal directional Naagarahaavu Movie srb
Author
First Published Mar 6, 2024, 8:03 PM IST

ಕನ್ನಡ ಚಿತ್ರರಂಗದಲ್ಲಿ ನಟ ವಿಷ್ಣುವರ್ಧನ್ ಬಹಳಷ್ಟು ಎತ್ತರಕ್ಕೆ ಬೆಳದು ಮೇರು ನಟ ಎಂಬ ಬಿರುದನ್ನು ಪಡೆದವರು. ಅವರ ಕಲಾಸೇವೆ, ಅಭಿನಯಕ್ಕೆ ಮನಸೋತು ಅವರಿಗೆ ಡಾಕ್ಟರೇಟ್ ನೀಡಲಾಗಿದ್ದು, ಅವರು 'ಡಾ ವಿಷ್ಣುವರ್ಧನ್'. ಸ್ಯಾಂಡಲ್‌ವುಡ್ ಚಿತ್ರರಂಗ ಹಾಗು ಪ್ರೇಕ್ಷಕವರ್ಗಕ್ಕೆ ನಾಗರಹಾವು ಸಿನಿಮಾ ಹಾಗೂ ನಟ ವಿಷ್ಣುವರ್ಧನ್ ಬಗ್ಗೆ ಬಹಳಷ್ಟು ಗೊತ್ತು. ನಟ ವಿಷ್ಣುವರ್ಧನ್ ಅವರನ್ನು 'ನಾಗರಹಾವು' ಸಿನಿಮಾ ಇಡೀ ಕರ್ನಾಟಕಕ್ಕೆ ಪರಿಚಯಿಸಿತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಟ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಬಂದರು. 

ಕನ್ನಡದ ಮೇರು ನಿರ್ದೇಶಕರು ಖ್ಯಾತಿಯ ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು ಚಿತ್ರವು 1972ರಲ್ಲಿ ಬಿಡುಗಡೆ ಆಗಿತ್ತು. ಅಂದು ಈ ಚಿತ್ರವು ಅದೆಷ್ಟು ಸೂಪರ್ ಹಿಟ್ ಆಗಿತ್ತು ಎಂದರೆ, ನಾಗರಹಾವು ಚಿತ್ರದ ಮೂಲಕ ಕನ್ನಡದಲ್ಲಿ ವಿಷ್ಣುವರ್ಧನ್ ಎಂಬ 'ಆಂಗ್ರಿ ಯಂಗ್‌ಮ್ಯಾನ್' ಲುಕ್‌ನ ಹೊಸ ನಟನ ಉದಯವಾಯಿತು. ಮುಂದೆ ಇದೇ ನಟ ಕನ್ನಡದ ಸ್ಟಾರ್ ನಟರಾಗಿ 200 ಸಿನಿಮಾಗಳನ್ನು ಮಾಡಿ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದುಕೊಂಡರು. ತರಾಸು ಕಾದಂಬರಿ ಆಧಾರಿತ 'ನಾಗರಹಾವು' ಸಿನಿಮಾ ವಿಷ್ಣುವರ್ಧನ್ ವೃತ್ತಿಜೀವನದಲ್ಲಿ ಬಿಡುಗಡೆಯಾದ ಮೊಟ್ಟಮೊದಲ ಸಿನಿಮಾ. 

ಹಿಂದಿ Indian Idol ಸ್ಟೇಜ್‌ ಮೇಲೆ ದಿಯಾ ಹೆಗಡೆ; ಸದ್ಯದಲ್ಲೇ ಸೋನಿ ಟಿವಿಯಲ್ಲಿ ಕನ್ನಡದ ಕಂಪು!

ಅದೆಲ್ಲಾ ಓಕೆ, ಆದರೆ ನಟ ವಿಷ್ಣುವರ್ಧನ್ ಅವರು ಈ ಸಿನಿಮಾಗೆ ಸೆಲೆಕ್ಟ್ ಆಗಿದ್ದು ಹೇಗೆ ಎಂಬ ಸಂಗತಿ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಆ ಬಗ್ಗೆ ನಟ ವಿಷ್ಣುವರ್ಧನ್ ಒಮ್ಮೆ ಹೇಳಿಕೊಂಡಿದ್ದರು. ಬೆಂಗಳೂರಿನ ಏರ್‌ಲೈನ್ಸ್‌ ಹೊಟೆಲ್‌ನಲ್ಲಿ ಸಾಯಂಕಾಲ 4.00 ಗಂಟೆಗೆ ಪುಟ್ಟಣ್ಣ ಕಣಗಾಲ್ ಜತೆ ಸಂದರ್ಶನ ಏರ್ಪಡಿಸಲಾಗಿತ್ತು. ಅದರಂತೆ ಬಂದ ಕುಮಾರ್ (ವಿಷ್ಣುವರ್ಧನ್ ಮೂಲ ಹೆಸರು) ಅವರನ್ನು ಮಾತನಾಡಿಸಿದ ನಿರ್ದೇಶಕ ಪುಟ್ಟಣ್ಣ ಅವರು 'ಮಧುಗಿರಿ ರಾಮು ಅವರು ನಿನ್ನ ಬಗ್ಗೆ ಎಲ್ಲವನ್ನೂ ಹೇಳಿದ್ದಾರೆ. ನೀನು ನಿರ್ಮಾಪಕರಾದ ವೀರಾಸ್ವಾಮಿಯವರ ಮನೆಗೆ ಹೋಗು' ಎಂದು ಹೇಳಿದ್ದಾರೆ. ಅದರಂತೆ ರಾತ್ರಿ ಡಿನ್ನರ್‌ಗೆ ಹೋಗಿದ್ದ ಕುಮಾರ್‌ಗೆ ಮರುದಿನ ಮೈಸೂರು 'ದಾಸ್ ಪ್ರಕಾಶ್ ಹೊಟೆಲ್‌'ಗೆ ಸಂದರ್ಶನಕ್ಕೆ ಬರುವಂತೆ ಆಹ್ವಾನ ನೀಡಲಾಗಿತ್ತು. 

ಮಿಸ್‌ ವರ್ಲ್ಡ್ ಆಗಿದ್ದರೂ ಸಿನಿಮಾದಲ್ಲಿ ಮಿಂಚಲಾಗದ ನಟಿ ಈಗ ಸಾಮಾಜಿಕ ಕಾರ್ಯಕರ್ತೆ!

ಮೈಸೂರು ಹೊಟೆಲ್‌ನಲ್ಲಿ ಸಂದರ್ಶನಕ್ಕೆ ಹೋಗಿದ್ದ ನಟ ಕುಮಾರ್, ಹಿಂದಿಯ ರಾಜ್‌ಕುಮಾರ್ ಹಾಗು ಶಮ್ಮಿ ಕಪೂರ್ ಅವರ ಸಿನಿಮಾಗಳ ಡೈಲಾಗ್‌ಗಳನ್ನು ಹೇಳಿ ನಿರ್ದೇಶಕ ಪುಟ್ಟಣ್ಣ ಅವರ ಮೆಚ್ಚುಗೆ ಗಳಿಸಿದ್ದಾರೆ. ಮದ್ಯಾನ್ಹ ಊಟಕ್ಕಿಂತ ಮೊದಲು ತಮ್ಮ ಸಿನಿಮಾ ಬಗ್ಗೆ ಭಾಷಣ ಮಾಡಿದ ಪುಟ್ಟಣ್ಣ, ಅಲ್ಲಿ 'ನಾನು ನಾಗರಹಾವು ಸಿನಿಮಾಗೆ ಕುಮಾರ್ ಅವರನ್ನು ಆಯ್ಕೆ ಮಾಡಿದ್ದೇನೆ' ಎಂದು ಘೋಷಣೆ ಮಾಡಿದ್ದಾರೆ. ಬಳಿಕ, ಕುಮಾರ್ ಹೆಸರನ್ನು ತಾವು ವಿಷ್ಣುವರ್ಧನ್‌ ಎಂದು ನಾಮಕರಣ ಮಾಡುವುದಾಗಿಯೂ ಹೇಳಿದ್ದಾರೆ. ಅಲ್ಲಿಗೆ, ನಾಗರಹಾವು ಸಿನಿಮಾಗೆ ಆಯ್ಕೆಯಾದ ಸಂಪತ್‌ ಕುಮಾರ್ 'ವಿಷ್ಣುವರ್ಧನ್' ಆಗಿ ಬದಲಾಗಿದ್ದಾರೆ.

ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?

ನಟ ವಿಷ್ಣುವರ್ಧನ್ ಅವರಿಗೆ ಅಂದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 'ನಾನು ಈ ಮೂಲಕ ನಿನಗೊಂದು ದೊಡ್ಡ ಜವಾಬ್ದಾರಿ ಕೊಡುತ್ತಿದ್ದೇನೆ. ನೀನು ಇನ್ನೂ ತುಂಬಾ ಎತ್ತರಕ್ಕೆ ಬೆಳೆಯುತ್ತೀಯಾ, ಬಹಳಷ್ಟು ಹೆಸರು-ಹಣ ಎಲ್ಲವನ್ನೂ ಗಳಿಸುತ್ತೀಯಾ' ಎಂದು ಹೇಳಿ ಪ್ರೀತಿಯಿಂದ ಹಣೆಗೆ ಮುತ್ತಿಟ್ಟು, ಬಿಗಿದಪ್ಪಿ ಹರಸಿ-ಆಶೀರ್ವದಿಸಿ ಕಳಿಸಿಕೊಟ್ಟರು. ಬಳಿಕ, ನಾಗರಹಾವು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು, ನಟ ವಿಷ್ಣುವರ್ಧನ್ ಸ್ಟಾರ್ ನಟರಾಗಿ ಬೆಳೆದಿದ್ದು ಎಲ್ಲವೂ ಇತಿಹಾಸ! ಹೀಗೆ, ನಾಗರಹಾವು ಸಿನಿಮಾಗೆ ನಟ ವಿಷ್ಣುವರ್ಧನ್ ಆಯ್ಕೆಯಾಗಿದ್ದರ ಹಿಂದೆ ರೋಚಕವಾದ ಕಥೆಯೊಂದಿದೆ.

ಟಿಪಿಎಲ್ ಸೀಸನ್-3 ಮುಕ್ತಾಯ, ಕಿರುತೆರೆ ಕ್ರಿಕೆಟ್ ಲೀಗ್ ಈ ಸೀಸನ್‌ನಲ್ಲಿ ಗೆದ್ದವರು ಯಾರು?

Follow Us:
Download App:
  • android
  • ios