ಮಿಸ್‌ ವರ್ಲ್ಡ್ ಆಗಿದ್ದರೂ ಸಿನಿಮಾದಲ್ಲಿ ಮಿಂಚಲಾಗದ ನಟಿ ಈಗ ಸಾಮಾಜಿಕ ಕಾರ್ಯಕರ್ತೆ!

ಸಿನಿಮಾ ಆಸೆ ಬಿಟ್ಟು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್‌ ಆಗುವ ನಿರ್ಧಾರ ಮಾಡಿದರು. ಪ್ರಿನ್ಸ್ ತುಲಿ ಎಂಬ ನ್ಯೂಯಾರ್ಕ್‌ ಮೂಲದ ಬಿಸಿನೆಸ್‌ಮ್ಯಾನ್ ರನ್ನು 2008ರಲ್ಲಿ ಮದುವೆಯಾದ ಯುಕ್ತಾ, ಅಮೆರಿಕಕ್ಕೆ ಹಾರಿದರು. ಆದರೆ 2013ರಲ್ಲಿ..

Miss world winner Yukta Mookhey acts in movies and failed now turns to social activist srb

1999ರಲ್ಲಿ ಮಿಸ್ ವರ್ಲ್ಡ್‌ ಕಿರೀಟ ಧರಿಸಿದ್ದ ಯುಕ್ತಾ ಮೂಖಿ ಮೂಲತಃ ಬೆಂಗಳೂರಿನ ಸಿಂಧಿ ಕುಟುಂಬದವರು. 7 ವರ್ಷದವರೆಗೆ ದುಬೈನಲ್ಲಿ ಬೆಳದ ಯುಕ್ತಾ, ಬಳಿಕ 1987ರಲ್ಲಿ ಮುಂಬೈಗೆ ಶಿಫ್ಟ್‌ ಆದರು. 1999ರಲ್ಲಿ ಮಿಸ್ ವರ್ಲ್ಡ್‌ ವಿನ್ನರ್ ಆದ ಬಳಿಕ ಅವರು ಸಹಜವಾಗಿ ಸಿನಿಮಾರಂಗದತ್ತ ಆಕರ್ಷಿತರಾದರು. ತಮಿಳು ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿದ ಯುಕ್ತಾ ಮೂಖಿ ನಟ ಅಜಿತ್ ಜೋಡಿಯಾಗಿ 2001ರಲ್ಲಿ 'ಪೂವೆಲ್ಲಮ್ ಉನ್ ವಾಸಮ್ (Poovellam Un Vasam)ನಲ್ಲಿ ನಟಿಸಿದರು. 

ಆದರೆ, ಸಿನಿಮಾ ಪ್ಲಾಪ್ ಆಯ್ತು. ಬಳಿಕ ಯುಕ್ತಾ  ಬಾಲಿವುಡ್‌ನಲ್ಲಿ ಅಫ್ತಾಭ್ ಶಿವದಾಸನಿ ಜತೆ 2002ರಲ್ಲಿ ಪ್ಯಾಸಾ (Pyasa)ಚಿತ್ರದಲ್ಲಿ ನಟಿಸಿದರು. ಆದರೆ ಆ ಸಿನಿಮಾ ಕೂಡ ಸೋತು ನಟಿ ಯುಕ್ತಾ ಮೂಖಿ ಸ್ಟಾರ್ ನಟಿಯಾಗಲು ಸಾಧ್ಯವಾಗಲೇ ಇಲ್ಲ. ಬಳಿಕ ಅವರು ಹಿಂದಿಯಲ್ಲೇ ಸಾಕಷ್ಟು ಸಿನಿಮಾಗಳಿಗೆ ಆಯ್ಕೆಯಾದರೂ ಒಂದಲ್ಲ ಇನ್ನೊಂದು ಕಾರಣಕ್ಕೆ ಸಿನಿಮಾ ಪೋಸ್ಟ್ ಫೋನ್ ಆಯ್ತು, ಹಾಗೂ ನಿಂತಿತು. ಕೆಲವು ಪ್ರಾಜೆಕ್ಟ್‌ಗಳಿಂದ ನಟಿ ಯುಕ್ತಾ ಮೂಖಿ ಅವರನ್ನು ಹೊರದೂಡಲಾಯಿತು. ಹೆಚ್ಚು ಕಡಿಮೆ ಅವರ ಸಿನಿಮಾ ಕೆರಿಯರ್ ಅಲ್ಲಿಗೇ ನಿಂತೇ ಹೋದಂತಾಯಿತು. 

ಅರೆರೆ ಎಂಥ ನಟನೆ, ರಶ್ಮಿಕಾಗೆ ಸಿಕ್ತು ಪುಷ್ಪಾ ಹೀರೋ ಸರ್ಟಿಫಿಕೇಟ್; ಏನಂದ್ರು ಅಲ್ಲು ಅರ್ಜುನ್?

ಬಳಿಕ ಯುಕ್ತಾ ಮೂಖಿ, ಸಿನಿಮಾ ಆಸೆ ಬಿಟ್ಟು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್‌ ಆಗುವ ನಿರ್ಧಾರ ಮಾಡಿದರು. ಪ್ರಿನ್ಸ್ ತುಲಿ ಎಂಬ ನ್ಯೂಯಾರ್ಕ್‌ ಮೂಲದ ಬಿಸಿನೆಸ್‌ಮ್ಯಾನ್ ರನ್ನು 2008ರಲ್ಲಿ ಮದುವೆಯಾದ ಯುಕ್ತಾ, ಅಮೆರಿಕಕ್ಕೆ ಹಾರಿದರು. ಆದರೆ 2013ರಲ್ಲಿ ಗಂಡನ ಮೇಲೆ ದೋಷಾರೋಪಣೆ ಮಾಡಿ, ವಿಚ್ಛೇಧನ ಪಡೆದು, ಮಗನನ್ನು ಕರೆದುಕೊಂಡು ಯುಕ್ತಾ ಮೂಖಿ ಭಾರತಕ್ಕೆ ಹಿಂದಿರುಗಿದರು. ಬಳಿಕ ಅವರು ಮತ್ತೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಂಡರು. 2019ರಲ್ಲಿ ಕೊನೆಯದಾಗಿ ಅವರು ಸಿನಿಮಾದಲ್ಲಿ (Good Newwz)ನಲ್ಲಿ ನಟಿಸಿದರು. ಆದರೆ, ಸಿನಿಮಾ ಪ್ಲಾಪ್ ಆಯ್ತು. 

ಪುಷ್ಪಾ ಹೀರೋ ನಟನೆ ಬಗ್ಗೆ ಅಭಿಪ್ರಾಯ ಹೇಳಿದ ರಶ್ಮಿಕಾ; ಅಲ್ಲು ಅರ್ಜುನ್ ರಿಯಾಕ್ಷನ್ ಏನು?

ಏಕೋ ಏನೋ, ಯುಕ್ತಾ ಮೂಖಿ ಅವರನ್ನು ಸಿನಿಮಾರಂಗ ಕೈ ಹಿಡಿದು ಮುನ್ನಡಸಲೇ ಇಲ್ಲ. ಹಲವು ಮಿಸ್ ಇಂಡಿಯಾ, ಹಲವು ಮಿಸ್ ವರ್ಲ್ಡ್‌ಗಳಿ ಸಿನಿಮಾರಂಗಕ್ಕೆ ಬಂದು ಇಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ, ಐಶ್ವರ್ಯಾ ರೈ. ಅದರೆ, ಯುಕ್ತಾಗೆ ತಮಿಳು ಹಾಗು ಬಾಲಿವುಡ್ ಎರಡೂ ಕಡೆ ಸೋಲೇ ಗತಿಯಾಯ್ತು. ಇದೀಗ ಯುಕ್ತಾ ಮುಖಿ ಸೋಷಿಯಲ್ ಆಕ್ಟಿವಿಸ್ಟ್‌ (ಸಾಮಾಜಿಕ ಕಾರ್ಯಕರ್ತೆ)ಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಎಚ್‌ಐವಿ/ಏಡ್ಸ್‌ , ಸ್ತನ ಕ್ಯಾನ್ಸರ್‌ಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ಯುಕ್ತಾ ಮುಖಿ, ಸಾಮಾಜಿಕ ಕಾರ್ಯಕರ್ತೆಯಾಗಿ ಬದಲಾಗಿದ್ದಾರೆ. 

25 ದಿನ ಪೂರೈಸಿದ ವಿನಯ್ ರಾಜ್‌ಕುಮಾರ್ 'ಒಂದು ಸರಳ ಪ್ರೇಮಕಥೆ', ಯಾವ ಒಟಿಟಿಗೆ ಲಗ್ಗೆ?

Latest Videos
Follow Us:
Download App:
  • android
  • ios