OTTಯಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ರಿಲೀಸ್: ಫುಲ್ ಡಿಟೇಲ್ಸ್ ಇಲ್ಲಿದೆ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲಗುವಿನಲ್ಲಿ ಸಕತ್ ಸುದ್ದಿ ಮಾಡಿದ್ದ ಈ ಚಿತ್ರವನ್ನು ಓಟಿಟಿಯಲ್ಲಿ ಯಾವಾಗ ನೋಡಬಹುದು? ಇಲ್ಲಿದೆ ಡಿಟೇಲ್ಸ್.

ಕನ್ನಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರ ಕಳೆದ ಜುಲೈ 21ರಂದು ಬಿಡುಗಡೆ ಆಗಿದ್ದು ಸಕತ್ ಸುದ್ದಿ ಮಾಡುತ್ತಿದೆ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ಪ್ರಯತ್ನವಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಡಿಬಂತು. ರಮ್ಯಾ, ದಿಗಂತ್, ಪವನ್ ಕುಮಾರ್, ರಿಷಬ್ ಶೆಟ್ಟಿ ಮುಂತಾದವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಹಿಟ್ ಮಾಡುತ್ತಿದೆ. ‘ಗುಲ್ಮೊಹರ್ ಫಿಲ್ಮ್ಸ್’ ಹಾಗೂ ‘ವರುಣ್ ಸ್ಟುಡಿಯೋಸ್’ ಜೊತೆಯಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿರ್ಮಿಸಿವೆ. ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳು ಮಾತ್ರವಲ್ಲದೇ ವಿದೇಶದಲ್ಲಿಯೂ ಬಿಡುಗಡೆ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ವಿಮರ್ಶಾತ್ಮಕ ಮತ್ತು ಕಮರ್ಷಿಯಲ್ ಆಗಿ ಮೆಚ್ಚುಗೆ ಗಳಿಸುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಚಿತ್ರದ ಬಿಡುಗಡೆಗೂ ಮುನ್ನವೇ ವಿವಾದಕ್ಕೂ ಈಡಾಯಿತು. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಮ್ಯಾ ಅವರು ಕೋರ್ಟ್ ಮೆಟ್ಟಿಲೇರಿದ್ದರು. ವಿಶೇಷ ಎಂದರೆ ಈ ಹೊಸ ಹುಡುಗರ ಚಿತ್ರಕ್ಕೆ ಬೆಂಬಲವಾಗಿ ಹಲವು ಖ್ಯಾತ ನಟರು ನಿಂತಿದ್ದರು. ರಮ್ಯಾ ಕೂಡ ಅವರ ಪರವಾಗಿಯೇ ನಿಂತಿದ್ದರು. ಆದರೆ ಸಿನಿಮಾ ರಿಲೀಸ್‌ಗೆ ಎರಡು ದಿನ ಮೊದಲು ಏನಾಯಿತೋ ಏನೋ, ರಮ್ಯಾ (Ramya) ಚಿತ್ರಕ್ಕೆ ತಡೆ ತಂದು ಬಿಟ್ಟರು. ತನ್ನ ದೃಶ್ಯ ಬಳಸಬಾರದು ಎಂದರು. ಇಲ್ಲದಿದ್ದರೆ ಕೋಟಿ ದುಡ್ಡು ಕೊಡಬೇಕು ಎಂದರು. ಸಣ್ಣ ಹುಡುಗರ ತಂಡ ಬೆಚ್ಚಿಬಿದ್ದಿತು. ಆದರೆ ಅವರ ಜೊತೆ ಇಡೀ ಚಿತ್ರರಂಗ ಇತ್ತು. ಸಿನಿಮಾ ವ್ಯಾಮೋಹಿಗಳಿದ್ದರು. ಅವರೆಲ್ಲರೂ ರಮ್ಯಾ ಅವರ ಈ ನಡೆಯನ್ನು ನೋಡಿ ಶಾಕ್‌ಗೆ ಒಳಗಾಗಿದ್ದು ಸುಳ್ಳಲ್ಲ. ಕೊನೆಗೆ ಎಲ್ಲವೂ ಬಗೆಹರಿದು ಚಿತ್ರ ಯಶಸ್ವಿಯಾಗಿ ಬಿಡುಗಡೆಯಾಯಿತು. ಕೊನೆಗೆ ಇದರ ತೆಲಗು ವರ್ಷನ್ ಬಿಡುಗಡೆಯಾಗಿ ಸಕತ್ ಸದ್ದು ಮಾಡಿತು.
ಚಿರು ಸರ್ಜಾ ಸಮಾಧಿಯಲ್ಲಿ ಮಗಳೊಂದಿಗೆ ಧ್ರುವನ ಆಟ: ವಿಡಿಯೋ ನೋಡಿ ಫ್ಯಾನ್ಸ್ ಭಾವುಕ
‘ಬಾಯ್ಸ್ ಹಾಸ್ಟೆಲ್’ ಎಂಬ ಹೆಸರಿನಲ್ಲಿ ಆಗಸ್ಟ್ 26ರಂದು ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಡುಗಡೆ ಆಗಿದೆ. ಕನ್ನಡ ವರ್ಷನ್ನಲ್ಲಿ ರಮ್ಯಾ ಅವರ ಅತಿಥಿ ಪಾತ್ರ ಹೈಲೈಟ್ ಆಯಿತು. ಆದರೆ ತೆಲುಗಿನಲ್ಲಿ ರಮ್ಯಾ ಬದಲದಿಗೆ ನಿರೂಪಕಿಯೂ ಆಗಿರುವ ರಶ್ಮಿ ಗೌತಮ್ (Rashmi Gautham) ಕಾಣಿಸಿಕೊಂಡರು. ತೆಲಗುವಿನಲ್ಲಿ ರಶ್ಮಿ ಗೌತಮ್ ಉಪನ್ಯಾಸಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ಗುಲ್ ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರವನ್ನು ರಕ್ಷಿತ್ ಶೆಟ್ಟಿ ತಮ್ಮ ಪರಮ್ವಃ ಪಿಕ್ಚರ್ಸ್ ಬ್ಯಾನರ್ ಅಡಿ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಬಾಯ್ಸ್ ಹಾಸ್ಟೆಲ್ ಸಿನಿಮಾಗೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಹಾಡುಗಳು ಸೂಪರ್ ಹಿಟ್ ಆಗಿವೆ.
ಅಂದಹಾಗೆ ಇದು OTT ಯುಗ. ಅದರಂತೆಯೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಈಗ ಓಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಸಿನಿಮಾ ಜೀ 5ಗೆ ಒಳ್ಳೆ ಮೊತ್ತಕ್ಕೆ ಮಾರಾಟವಾಗಿದೆ. ಇದೇ 15ರ ಶುಕ್ರವಾರದಿಂದ ಸ್ಟ್ರೀಮ್ ಆಗಲಿದೆ. ಅಂದಹಾಗೆ ಈ ಚಿತ್ರವು ಗಮನಾರ್ಹವಾಗಿ 500 ರಂಗಭೂಮಿ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಿರುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ವರುಣ್ ಗೌಡ, ಪ್ರಜ್ವಲ್ ಮತ್ತು ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರ ಸಹಯೋಗದೊಂದಿಗೆ ಗುಲ್‌ಮೊಹರ್ ಫಿಲ್ಮ್ಸ್ ಮತ್ತು ವರನ್ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.
ಡಾ.ರಾಜ್ರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ತೆಲಗುವಿನಲ್ಲಿ ರೀಮೇಕ್! ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ