Asianet Suvarna News Asianet Suvarna News

ಡಾ.ರಾಜ್​ರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ತೆಲಗುವಿನಲ್ಲಿ ರೀಮೇಕ್​! ಇಂಟರೆಸ್ಟಿಂಗ್​ ಮಾಹಿತಿ ಇಲ್ಲಿದೆ

ಡಾ.ರಾಜ್​ಕುಮಾರ್​ ಅವರ ಬೇಡರ ಕಣ್ಣಪ್ಪ ಚಿತ್ರವು ತೆಲಗುವಿನಲ್ಲಿ ರೀಮೇಕ್​ ಆಗುತ್ತಿದ್ದು, ಇದರ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ಮಾಹಿತಿ ಲಭ್ಯವಾಗಿದೆ. ಏನದು?
 

Dr Rajkumars film Bedara Kannappa is being remade in Telugu suc
Author
First Published Sep 10, 2023, 5:53 PM IST

1954ರಲ್ಲಿ ಬಿಡುಗಡೆಯಾದ ಡಾ.ರಾಜ್​ಕುಮಾರ್​, ಪಂಡರಿಬಾಯಿ ಅಭಿನಯದ ಬೇಡರ ಕಣ್ಣಪ್ಪ ಚಿತ್ರವನ್ನು ಬಹುಶಃ ಯಾರಿಂದಲೂ ಮರೆಯಲು ಸಾಧ್ಯವೇ ಇಲ್ಲ. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಮಹಾನ್ ಭಕ್ತ ಕಣ್ಣಪ್ಪನ ಕಥೆಯನ್ನು ಆಧರಿಸಿದ್ದ ಈ ಚಿತ್ರ ಡಾ.ರಾಜ್​ಕುಮಾರ್​ ಅವರ ಚೊಚ್ಚಲ ಚಿತ್ರವೂ ಹೌದು. ಈ ಚಿತ್ರವೀಗ  ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಪ್ರಭಾಸ್ (Prabhas) ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ಇವರು ಕಾಣಿಸಿಕೊಳ್ಳುತ್ತಿರುವುದು ನಾಯಕನಾಗಿ ಅಲ್ಲ, ಬದಲಿಗೆ ಪೋಷಕ ಪಾತ್ರದಲ್ಲಿ. ಹೌದು. ಬೇಡರ ಕಣ್ಣಪ್ಪ ಬಹುಕೋಟಿ ವೆಚ್ಚದಲ್ಲಿ ತೆಲಗುವಿನಲ್ಲಿ 'ಕನ್ನಪ್ಪ' ಎನ್ನುವ ಹೆಸರಿನಲ್ಲಿ ತಯಾರಾಗುತ್ತಿದೆ.  ಮೋಹನ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಮಂಚು ವಿಷ್ಣು ಚಿತ್ರದಲ್ಲಿ ಹೀರೊ ಆಗಿ ನಟಿಸಿದರೆ,  ಪ್ರಭಾಸ್ ಅತಿಥಿ ಪಾತ್ರದಲ್ಲಿ ಅಂದರೆ ಶಿವನಾಗುವುದು  ಬಹುತೇಕ ಖಚಿತವಾಗಿದೆ. ನಟಿ ನೂಪೂರು ಸನೂನ್​ ಅವರೂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕುರಿತು ಇದಾಗಲೇ ಕನ್​ಫರ್ಮ್​ ಮಾಡಲಾಗಿದೆ. 
 
ಈ ಚಿತ್ರ ತಯಾರಿಕೆಯ ಹಿಂದೆಯೂ ಕುತೂಹಲದ ಮಾಹಿತಿ ಇದೆ. ಅದೇನೆಂದರೆ, 'ಬೇಡರ ಕಣ್ಣಪ್ಪ' ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಬಳಿಕ ತೆಲುಗಿನಲ್ಲಿ ಕೃಷ್ಣಂರಾಜು ಈ ಚಿತ್ರವನ್ನು 'ಭಕ್ತ ಕನ್ನಪ್ಪ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೂಡ ಕೊಟ್ಟಿತ್ತು.  ಇದೇ ಚಿತ್ರದಲ್ಲಿ ಪ್ರಭಾಸ್ ನಟಿಸಬೇಕು ಎನ್ನುವುದು ಕೃಷ್ಣಂರಾಜು ಆಸೆ ಆಗಿತ್ತು. ಸಾಕಷ್ಟು ಬಾರಿ ಇಂತಾದೊಂದು ಚಿತ್ರಕ್ಕೆ ಪ್ರಯತ್ನ ನಡೀತು. ಆದರೆ ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಅವರು ನಿಧನರಾದರು.

ಸ್ಯಾಂಡಲ್​ವುಡ್​ ಸ್ಟಾರ್​ ನಟನ ಗುರುತಿಸಬಲ್ಲಿರಾ? ಹುಟ್ಟುಹಬ್ಬದ ದಿನವೇ ಹೊಸ ಚಿತ್ರದ ಘೋಷಣೆ

  ಇದೇ ಕಥೆಯನ್ನು ಆಧರಿಸಿ ಶಿವರಾಜ್‌ಕುಮಾರ್ 'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಇದೇ ಚಿತ್ರದಲ್ಲಿ ಡಾ.ರಾಜ್​ ಅವರು ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ  ನಟ ಪ್ರಭಾಸ್ ಶಿವನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.  ಈ ಮೂಲಕ ತಮ್ಮ ದೊಡ್ಡಪ್ಪನ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

150 ಕೋಟಿ. ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಸದ್ಯದಲ್ಲೇ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಲಿದೆ. ಇತ್ತೀಚೆಗೆ ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಪೂಜೆ ಸಲ್ಲಿಸಿ 'ಕನ್ನಪ್ಪ' ಚಿತ್ರಕ್ಕೆ ಚಾಲನೆ ಕೊಡಲಾಗಿದೆ.  ಚಿತ್ರಕ್ಕೆ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆ ಸಿದ್ಧಪಡಿಸಿದ್ದು ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ನೀಡುತ್ತಿದ್ದಾರೆ. ಶೆಲ್ಡನ್ ಶಾ ಅವರ ಛಾಯಾಗ್ರಹಣವಿದ್ದು ಮೋಹನ್ ಬಾಬು ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

'ಭೀಮಾ ಕೊರೆಗಾಂವ್' ಮೂಲಕ ಸ್ಯಾಂಡಲ್​ವುಡ್​ನಲ್ಲಿ ಮತ್ತೆ ದೀಪಿಕಾ? ನಿರ್ದೇಶಕ ಹೇಳಿದ್ದೇನು?
 
 

Follow Us:
Download App:
  • android
  • ios