ಕನ್ನಡ ನಟಿ ಹರ್ಷಿಕಾ ಪೂಣಚ್ಚ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಮೊದಲ ಚಿತ್ರ "ಚಿ : ಸೌಜನ್ಯ - ಒಂದು ಹೆಣ್ಣಿನ ಕಥೆ" ನೈಜ ಘಟನೆ ಆಧಾರಿತ ಕ್ರೈಂ ಥ್ರಿಲ್ಲರ್ ಆಗಿದೆ. ಭುವನಮ್ ಎಂಟರ್’ಟೇನ್ ಮೆಂಟ್ ಮತ್ತು ಮಧು ಕಂಸಾಳೆ ಫಿಲಂಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹರ್ಷಿಕಾ ಪೂಣಚ್ಚ. ಕಳೆದ ಹಲವಾರು ವರ್ಷಗಳಿಂದ ತಮ್ಮನ್ನು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ ನಟಿ. ಮದುವೆಯಾಗಿ ಮಗುವಾದ ಬಳಿಕ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿದಿರುವ ಹರ್ಷಿಕಾ ಇದೀಗ ನಟನೆ ಬಿಟ್ಟು, ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹೌದು, ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿರುವ ಹರ್ಷಿಕಾ, ಮೊದಲ ಚಿತ್ರದಲ್ಲಿ ನೈಜ್ಯ ಕಥೆಯಾಧಾರಿತ ಕ್ರೈ ಥ್ರಿಲ್ಲರ್ ಆಯ್ಕೆ ಮಾಡಿದ್ದಾರೆ. ಈ ಕುರಿತು ಹರ್ಷಿಕಾ ಪೂಣಚ್ಚ ಅವರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
Kodagu Padayatra: ಸಂಸ್ಕೃತಿಗೆ ಉಳಿವಿಗಾಗಿ ಸಿಡಿದೆದ್ದ ಕೊಡವರು, ಹರ್ಷಿಕಾ, ಭುವನ್ ಪೊನ್ನಣ್ಣ ಸಾಥ್!
ಸಿನಿಮಾ ಯಾವುದು?
ಸದಾ ಸಿನಿಮಾ ಮತ್ತು ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಸಿನಿಮಾ ನಿರ್ದೇಶಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಚಿ : ಸೌಜನ್ಯ - “ಒಂದು ಹೆಣ್ಣಿನ ಕಥೆ” ಎನ್ನುವ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ . ಈ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ತಮ್ಮ ಪತಿ ಹಾಗು ಭುವನಮ್ ಎಂಟರ್’ಟೇನ್ ಮೆಂಟ್ ಮುಖ್ಯಸ್ಥರಾದ ನಟ ಭುವನ್ ಪೊನ್ನಣ್ಣ , ಮಧು ಕಂಸಾಳೆ ಫಿಲಂಸ್ ಬ್ಯಾನರ್ ಹಾಗು ಗಣೇಶ್ ಮಹಾದೇವ್ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದ ಡಿಜಿಟಲ್ ಪೋಸ್ಟರ್ ಹಾಗು ಟೈಟಲ್ ಲಾಂಚ್ ಸಮಾರಂಭವು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.
ಯಾರ್ಯಾರು ನಟಿಸುತ್ತಿದ್ದಾರೆ?
ನಟ ಕಿಶೋರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಸಿನಿಮಾಗೆ ಇಬ್ಬರು ನಾಯಕಿಯರು. ನಾಯಕಿಯರಿಗಾಗಿ ಹುಡುಕಾಟ ಶುರುವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಸಿನಿಮಾದ ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುದೀ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿಕೊಳ್ಳುತ್ತಿರುವ ತಂಡ ಮುಂದಿನ ತಿಂಗಳು ಶೂಟಿಂಗ್ ತಯಾರಿ ಮಾಡಿಕೊಳ್ಳುತ್ತಿದೆ.
ಮಗುವಾದ ನಂತರ ಮತ್ತಷ್ಟು ಸುಂದ್ರಿಯಾದ ಹರ್ಷಿಕಾ… ಹೊಸ ಅಮ್ಮಂದಿರಿಗೆ ಹೇಳಿದ್ದೇನು?
ಕಥೆ ಏನು?
ಚಿ : ಸೌಜನ್ಯ - “ಒಂದು ಹೆಣ್ಣಿನ ಕಥೆ” ಎನ್ನುವ ಟೈಟಲ್ ಸಿನಿಮಾಗೆ ಇಡಲಾಗಿದ್ದು, ಇದು ಧರ್ಮಸ್ಥಳದಲ್ಲಿ 12 ವರ್ಷಗಳ ಹಿಂದೆ ನಡೆದ ಹಾಗೂ ಇವತ್ತಿನವರೆಗೂ ಸದ್ದು ಮಾಡುತ್ತಿರುವ ಸೌಜನ್ಯ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿರುವ ಸಿನಿಮಾ ಆಗಿರಬಹುದು ಎನ್ನಲಾಗುತ್ತಿದೆ. ನೈಜ್ಯ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯೇ? ಅಥವಾ ಕೇವಲ ಹೆಸರು ಮಾತ್ರ ಇದಾಗಿದ್ದು, ಕಥೆ ಬೇರೆಯದ್ದೆ ಆಗಿದೆಯೇ ಅನ್ನೋದು ತಿಳಿದು ಬಂದಿಲ್ಲ.
ಮಹಿಳಾ ನಿರ್ದೇಶಕಿಗೆ ಮೆಚ್ಚುಗೆ
ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರೇ ಕಡಿಮೆ, ಅಂತದ್ದರಲ್ಲಿ ಧೈರ್ಯದಿಂದ ಒಬ್ಬ ಮಹಿಳೆ ಇಂತಾ ಸಾಮಾಜಿಕ ಕಳಕಳಿಯ ಚಿತ್ರ ನಿರ್ದೇಶಿಸಲು ಮಾಡಿದ ಯೋಚನೆಗೆ ಎಲ್ಲಾ ವರ್ಗಗಳಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ.
