ಕೊಡಗಿನಲ್ಲಿ ಕೊಡವರು ಪಾದಯಾತ್ರೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಛ, ಭುವನ್ ಪೊನ್ನಣ್ಣ ಅವರು ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೊಡವ ಜನತೆ ಪಾದಯಾತ್ರೆ ಮಾಡಿದೆ. ಕೊಡವರ ಸಂಸ್ಕೃತಿ ಉಳಿವಿಗೆ 20000ಕ್ಕೂ ಅಧಿಕ ಕೊಡವರು ಪಾದಯಾತ್ರೆ ಮಾಡಿರೋದು ವಿಶೇಷ. ʼಕೊಡವಾಮೆ ಬಾಳುʼ ಹೆಸರಿನಲ್ಲಿ ಪಾದಯಾತ್ರೆ ನಡೆದಿದೆ. ನಟಿ ಹರ್ಷಿಕಾ ಪೂಣಚ್ಛ, ಭುವನ್ ಪೊನ್ನಣ್ಣ ಅವರು ಈ ಜಾತ್ರೆಯಲ್ಲಿ ಭಾಗವಹಿಸಿ ಖುಷಿಯಾಗಿದ್ದಾರೆ.
ಭುವನ್ ಪೊನ್ನಣ್ಣ ಏನಂದ್ರು?
ಭುವನ್ ಪೊನ್ನಣ್ಣ ಅವರು ಮಾತನಾಡಿ, “ನಾನು ಕೊಡಗಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ನಾನು ಇದುವರೆಗೂ ಈ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಎಲ್ಲರೂ ಕೊಡವ ವೇಷಭೂಷಣದಲ್ಲಿ ಈ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿರೋದು ಖುಷಿಯಾಗುತ್ತಿದೆ. ಈ ರೀತಿ ಯಾವತ್ತೂ ಆಗಿರಲಿಲ್ಲ. ಇದೊಂದು ಐತಿಹಾಸಿಕ ಕ್ಷಣ. ಹಿಂದುಗಳು ಕಾಶಿಗೆ ಹೋದಹಾಗೆ, ಮುಸಲ್ಮಾನರು ಮೆಕ್ಕಾಗೆ ಹೋದಷ್ಟು ಖುಷಿಯಾಗ್ತಿದೆ. ಕೊಡವ ಜನತೆಯಲ್ಲಿ ಒಗ್ಗಟ್ಟು ಇಲ್ಲ ಎಂಬ ದೂರು ಇತ್ತು. ಆದರೆ ಇಂದು ಸೇರಿರುವ ಜನತೆ ನೋಡಿದರೆ ತುಂಬ ಖುಷಿ ಆಗುತ್ತದೆ. ಕುಟ್ಟದಿಂದ ಮಡಿಕೇರಿವರೆಗೆ ಪಾದಯಾತ್ರೆ ಅಂದರೆ ಸುಲಭ ಅಲ್ಲ” ಎಂದು ಹೇಳಿದ್ದಾರೆ.
Soundarya Jayamala Marriage: ಸೌಂದರ್ಯ ಜಯಮಾಲಾ ಮದುವೆಯಲ್ಲಿ ನಟ ಯಶ್-ರಾಧಿಕಾ ಪಂಡಿತ್ ಮುಂತಾದ ಗಣ್ಯರು!
ಹರ್ಷಿಕಾ ಪೂಣಚ್ಛ ಏನಂದ್ರು?
ಹರ್ಷಿಕಾ ಪೂಣಚ್ಛ ಅವರು ಮಾತನಾಡಿ “ಈ ರೀತಿ ಪಾದಯಾತ್ರೆ ಎಂದೂ ಆಗಿಲ್ಲ. ಇದೊಂದು ಐತಿಹಾಸಿಕ ಕ್ಷಣ. ನಾನು ನನ್ನ ಮೂರುವರೆ ತಿಂಗಳು ಮಗುವನ್ನು ಕಾರ್‌ನಲ್ಲಿ ಬಿಟ್ಟು ಬಂದಿದ್ದೇನೆ. ಈ ಬಿಸಿಲಿನಲ್ಲಿ ಕುಟ್ಟದಿಂದ ಮಡಿಕೇರಿವರೆಗೆ ಬರೋದು ಸಣ್ಣ ಮಾತಲ್ಲ. ನಾನು ಕೊಡಗಿನ ಹುಡುಗಿ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ಹೇಳಿದ್ದಾರೆ.
ಕೊಡಗಿನ ಇತಿಹಾಸ ಏನು?
ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮರ-ಗಿಡ, ಝರಿ, ತೊರೆಯಿಂದ ಕೂಡಿದ ಪರಿಸರವನ್ನು ಕೊಡವ ನಾಡ್ ಎಂದು ಕರೆಯುತ್ತಾರೆ. ಕೊಡಗಿನ ಸೌಂದರ್ಯವನ್ನು ಸಾಕಷ್ಟು ಕವಿಗಳು ತಮ್ಮ ಪದ್ಯಗಳಲ್ಲಿ ವರ್ಣಿಸಿದ್ದಾರೆ. ಕೊಡಗಿನಲ್ಲಿ ಕೂರ್ಗ್ ಭಾಷೆ ಮಾತನಾಡಲಾಗುವುದು. ಇದಕ್ಕೆ ಭಾರತದ ಸ್ಕಾಟ್‌ಲ್ಯಾಂಡ್ ಅಂತ ಕೂಡ ಕರೆಯಲಾಗುವುದು. ಕೊಡವ ತಕ್ಕ್, ಅರೆಭಾಷೆಯನ್ನು ಇಲ್ಲಿ ಬಳಸಲಾಗುತ್ತದೆ. ಬ್ರಿಟಿಷರ ಸಮಯದಲ್ಲಿ ಕೊಡಗು ಸ್ವತಂತ್ರ ರಾಜ್ಯವಾಗಿದ್ದರೆ, ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿದೆ. ಕೊಡಗಿನಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟ ಎಂಬ ಐದು ತಾಲೂಕುಗಳಿವೆ. ಕರಿಮೆಣಸು, ಏಲಕ್ಕಿ, ಕಾಫಿ, ಕಿತ್ತಳೆ, ಭತ್ತವನ್ನು ಬೆಳೆಯಾಲಗುತ್ತದೆ.
Soundarya Jayamala Marriage: ಸೌಂದರ್ಯ ಜಯಮಾಲಾ ಮದುವೆಯಲ್ಲಿ ನಟ ಯಶ್-ರಾಧಿಕಾ ಪಂಡಿತ್ ಮುಂತಾದ ಗಣ್ಯರು!
ಹರ್ಷಿಕಾ-ಭುವನ್ ಮಗಳು ಚೈಕಾರ್ತಿ!
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಛ ಅವರು ಈ ಪಾದಯಾತ್ರೆಗೂ ಮುನ್ನ ಜಯಮಾಲಾ ಅವರ ಪುತ್ರಿ ಸೌಂದರ್ಯ ಮದುವೆಯ ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದಲ್ಲಿ ಭುವನ್, ಹರ್ಷಿಕಾ ಅನೇಕ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ನೊಂದು ಕಡೆ ಹರ್ಷಿಕಾ, ಭುವನ್ ಜೋಡಿಗೆ ಮಗಳು ಹುಟ್ಟಿ ಮೂರು ತಿಂಗಳಾಗಿದೆ. 2023ರಲ್ಲಿ ಹರ್ಷಿಕಾ-ಭುವನ್ ಮದುವೆಯಾಗಿದ್ದಾರೆ. ಕಳೆದ ನವರಾತ್ರಿಯಲ್ಲಿ ಈ ಜೋಡಿಗೆ ಮಗಳು ಹುಟ್ಟಿದ್ದಾಳೆ. ಈ ಮಗುವಿಗೆ ʼಚೈಕಾರ್ತಿʼ ಎಂದು ಹೆಸರು ಇಡಲಾಗಿದೆ. “ಮಗಳು ಬಂದ್ಮೇಲೆ ಜೀವನ ಬದಲಾಗಿದೆ, ಆದ್ಯತೆ ಬದಲಾಗಿದೆ” ಎಂದು ಈ ದಂಪತಿ ಹೇಳಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಇವರ ಮಗುವಿನ ಫೋಟೋವನ್ನು ರಿವೀಲ್ ಮಾಡಲಿದೆಯಾ ಎಂದು ಕಾದು ನೋಡಬೇಕಿದೆ.
ಇನ್ನು ಸಿನಿಮಾಗಳ ಜೊತೆಗೆ ಈ ಜೋಡಿ ಸಾಮಾಜಿಕ ಸೇವೆಗಳಲ್ಲಿ ಭಾಗಿಯಾಗುತ್ತದೆ. ಆಗಾಗ ಇವರಿಬ್ಬರು ಅನೇಕರಿಗೆ ಸಹಾಯ ಮಾಡುತ್ತಿರುತ್ತಾರೆ. ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ಈ ಜೋಡಿ ಮಾಡೆಲಿಂಗ್ ಪ್ರಪಂಚದಲ್ಲಿಯೂ ಮುಂದಿದೆ. ಒಟ್ಟಿನಲ್ಲಿ ಚಿತ್ರರಂಗದಲ್ಲಿ ಇವರಿಬ್ಬರು ಆಕ್ಟಿವ್ ಆಗಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತೀರಾ?
