Asianet Suvarna News Asianet Suvarna News

Last Song in Puneeth Rajkumars Voice: ಅಪ್ಪುವಿನ ಧ್ವನಿಯ ಕೊನೆಯ ಹಾಡು

  • ಹರೀಶನ ವಯಸ್ಸು 36 ಆದ್ರೆ ಮದುವೆ ಆಗಿಲ್ಲ ಅಂತ ಬೇಜಾರ್
  • ಅಪ್ಪುವಿನ ಧ್ವನಿಯನ್ನುನೊಳಗೊಂಡ ಕೊನೆಯ ಹಾಡು
Hareesha Vayassu 36 Title Track Song by Puneeth Rajkumar dpl
Author
Bangalore, First Published Jan 14, 2022, 5:58 PM IST

ಸುಕನ್ಯಾ ಎನ್.ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು ಮೂಡುಬಿದಿರೆ

ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಯುವ ಪ್ರತಿಭಾ  ಕಲಾವಿದರೊಳಗೊಂಡ ಚಿತ್ರವೇ ಹರೀಶ ವಯಸ್ಸು 36. ಜನವರಿ 3 ರಂದು ರಿಲೀಸ್ ಆದಂತಹ ಈ ಚಿತ್ರದ ಶಿಷೀಕೆಯ ಆಡಿಯೋಗೆ ಧ್ವನಿಯಾಗಿದ್ದರೆ ನಮ್ಮ ಕನ್ನಡದ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ' ಹರೀಶನ ವಯಸ್ಸು 36 ಆದ್ರೆ ಮದುವೆ ಆಗಿಲ್ಲ ಅಂತ ಬೇಜಾರ್ ' ಎಂದು ಹಾಡುತ್ತಾ ಚಿತ್ರದ ಟೈಟಲ್ ಸಾಂಗ್ ಗೆ ಧ್ವನಿ ನೀಡಿ, ಈ ಸಿನಿಮಾ ತಂಡಕ್ಕೆ ಶಕ್ತಿ ತುಂಬುತ್ತಲೇ ಮರೆಯಾದ ಧ್ರುವ ನಕ್ಷತ್ರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇವರು ಶಾಶ್ವತವಾಗಿದ್ದಾರೆ.

ಪುನೀತ್ ರಾಜಕುಮಾರ್ ಕೊನೆಯದಾಗಿ ತಮ್ಮ ಕಂಚಿನ ಕಂಠದಿಂದ ಹಾಡಿದ ಕೊನೆಯ ಹಾಡು ಆನಂದ ಆಡಿಯೋ ಮೂಲಕ ಇತ್ತೀಚೆಗಷ್ಟೇ  ಬಿಡುಗಡೆಯಾಗಿದ್ದು, ಅಪ್ಪು ಅವರ ಅಭಿಮಾನಿಗಳ ಮುಖದಲ್ಲಿ ಮಂದಹಾಸವನ್ನು ಮೂಡಿಸಿದ್ದು 
 ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಖುಷಿಯ ವಿಚಾರ.

Puneeth Rajkumar ನಿವಾಸಕ್ಕೆ ಭೇಟಿ ಕೊಟ್ಟ Kamal Haasan!

ಹರೀಶನ ವಯಸ್ಸು 36 ಸಿನಿಮಾದ ಟೈಟಲ್ ಸಾಂಗ್ ಗೆ ಧ್ವನಿಯದ ಅಪ್ಪು ಈ ಸೊಗಸಾದ ಸಾಹಿತ್ಯಕ್ಕೆ ಮನ ಸೋತ್ತಿದ್ದರು.ಆಡಿಯೋ ರಿಲೀಸ್ ಸಂದರ್ಭದಲ್ಲಿ ಮರೆಯದೇ ನನ್ನನ್ನು ಕರೆಯಬೇಕೆಂದು ಹೇಳಿದ್ದರಂತೆ ಈ ಮಾತುಗಳನ್ನು ನೆನೆದು ಚಿತ್ರತಂಡ ಮೌನವಾಗಿದೆ. 
ಅಪ್ಪು ಅವರು ಯುವ ಕಲಾವಿದರಿಗೆ ತೋರಿಸುತ್ತಿದ್ದತಹ ಪ್ರೋತ್ಸಾಹ, ಭರವಸೆ ನಟನೆಯ ಬಗೆಗಿನ ಗೌರವ ಇಂದು ಈ ಚಿತ್ರರಂಗವನ್ನು ಯಶಸ್ವಿಯಾಗಿಸುವಲ್ಲಿ ಅನುಮಾನವೇ ಇಲ್ಲ .

ಶಿರಡಿ ಸಾಯಿ ಬಾಲಾಜಿ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಿರುವ ಹರೀಶನ ವಯಸ್ಸು 36 ಸಿನಿಮಾ ಯುವ ಕಲಾವಿದರನೊಳಗೊಂಡಿದ್ದು ಲಕ್ಷ್ಮಿ ಕಾಂತ್ ರಾವ್,ತ್ರಿಲೋಕ, ಹಾಗೂ ಚಕ್ರಧರ್ ರೆಡ್ಡಿಯವರು ಈ ಚಿತ್ರಕ್ಕೆ ಬಂಡವಾಳ  ಹೂಡಿದ್ದಾರೆ. ಈ ಸಿನಿಮಾದ ನಿರ್ಮಾಪಕರಾದ ಲಕ್ಷ್ಮೀಕಾಂತ್  ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದು,ಇವರು ಮೂಲತಃ ಶಿವಮೊಗ್ಗ
 ಜಿಲ್ಲೆಯವರಗಿದ್ದು ಮಂಗಳೂರಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಕ್ಷ್ಮೀ ಕಾಂತ್ ಅವರು ಈ ಸಿನಿಮಾದ ನಿರ್ಮಾಪಕರು ಮಾತ್ರವಲ್ಲದೆ ಚಿತ್ರದಲ್ಲಿ ಲವ್ ಸಾಂಗ್ ವೊಂದನ್ನು ಹಾಡಿರುವುದು ಸಂತಸದ ಸಂಗತಿ.

ಇವರ ಸ್ನೇಹಿತರಾದ ಬಿಹಾರ ಮೂಲದ ತ್ರಿಲೋಕ ರಾವ್ ಮತ್ತು ತೆಲುಗು ಭಾಷೆಯ ಚಕ್ರಧರ್ ರೆಡ್ಡಿ ಇವರೊಡನೆ ಜೊತೆಯಾಗಿ ಕೈ ಜೋಡಿಸಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು  ಯುವ ಕಲಾವಿದರ ಜೊತೆಗೂಡಿ ಒಂದೊಳ್ಳೆ ನೈಜ ಕಥೆಯೊಂದಿಗೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಹರೀಶನ ವಯಸ್ಸಿಗೆ ಮೊದಲ ಬಾರಿ ಆಕ್ಷನ್ ಕಟ್ ಮಾಡುವುದರೊಂದಿಗೆ ಚಿತ್ರದ ಸಂಗೀತ ನಿರ್ದೇಶನವನ್ನು ಗುರುರಾಜ್ ಜೋಷ್ಯ ಅವರು ಮಾಡಿದ್ದಾರೆ.

ತುಳುಚಿತ್ರ,ರಂಗನಾಟಕಗಳನ್ನು, ಸದಾ ನೋಡುತ್ತಿದಂತಹ ನಿರ್ದೇಶಕರಿಗೆ ಇಂದಿನ  ತುಳು ಭಾಷೆಯ ಹಾಸ್ಯಮಯ ಸಿನಿಮಾಗಳು ಹಾಸ್ಯ ಪ್ರೀಯರನ್ನು ಸದಾ ನಾಗಿಸುತ್ತಿರುವುದರಿಂದ ತುಳುನಾಡಿನ ಪ್ರತಿಭೆಗಳನ್ನು ಈ ಚಿತ್ರದಲ್ಲಿ ನಟಿಸಲು ಅವಕಾಶವನ್ನ ರುಪಿಸಿಕೊಟ್ಟಿರುವುದು ವಿಶೇಷ. ಹರೀಶನಿಗೆ ವಯಸ್ಸು 36 ಆದರೂ ಮದುವೆ ಆಗಿಲ್ಲ ಯಾಕೆ? ಎಂಬ ಕುತೂಹಲಕಾರಿ ಪ್ರಶ್ನೆಗೆ  ಪುನೀತ್ ಅವರು ಹಾಡಿದ ಟೈಟಲ್ ಸಾಂಗ್ ಎಳೆ ಎಳೆಯಾಗಿ ಉತ್ತರವನ್ನು ಬಿಡಿಸುತ್ತದೆ. ಹರೀಶನಿಗೆ ಕೆಲಸವಿಲ್ಲದೆ, ಲೈಫ್ ಸೆಟ್ಲ್ ಆಗದೆ ಹುಡುಗಿಯರು ಇವನನ್ನು ಇಷ್ಟ ಪಡುವುದಿಲ್ಲ ಎಂದು ಪ್ರೇಕ್ಷಕರಿಗೆ ಹಾಸ್ಯಮಯವಾಗಿ ಹಾಡನ್ನು ಚಿತ್ರ ತಂಡ ತೆರೆಗೆ ತಂದಿದ್ದಾರೆ.

ಕರಾವಳಿ  ಶೈಲಿಯ ಭಾಷೆಯನ್ನೊಳಗೊಂಡ  ಸಿನಿಮಾದ ಕಥೆಯನ್ನು ಕೇಳಿದ ಪುನೀತ್ ರಾಜಕುಮಾರ್ ತುಂಬ ಇಷ್ಟಪಟ್ಟಿದ್ದು, 
ಮಂಗಳೂರಿನ ಭಾಷೆಯ ಸಂಭಾಷಣೆಗೆ ಅಪ್ಪು ಮೆಚ್ಚಿಗೆ ವ್ಯಕ್ತ ಪಡಿಸಿದ್ದರು. ಸಿನಿಮಾದ ಚಿತ್ರೀಕರಣವೂ ಮಂಗಳೂರಿನ ಅಸು ಪಾಸಿನ ಪರಿಸರದಲ್ಲಿಯೇ  ಮಾಡಲಾಗಿದ್ದು, ಕರಾವಳಿ ಜನರ ಜೀವನ ಶೈಲಿ, ಆಡುಭಾಷೆ,ಸಂಸ್ಕೃತಿ ಹಾಗೂ ಆಹಾರ ಪದ್ಧತಿ ಹೀಗೆ ಅನೇಕ ವಿಚಾರಗಳನ್ನು ಈ ಸಿನಿಮಾ ಸೆರೆ ಹಿಡಿದಿದ್ದು ಅಚ್ಚುಕಟ್ಟಾಗಿ ಚಿತ್ರ ಮೂಡಿ ಬಂದಿರುವುದಾಗಿ ಸಿನಿಮಾ ತಂಡ ಸಂತೋಷವನ್ನು ವ್ಯಕ್ತಪಡಿಸಿದೆ.

ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದ್ದು ಫೆಬ್ರವರಿ 4 ರಂದು ತೆರೆ ಮೇಲೆ ಕಾಣಿಸುವ ಯೋಜನೆಯೊಂದಿಗೆ  ಸಿನಿಮಾ ತಂಡ ಕಾತುರದಿಂದ ಕಾಯುತ್ತಿದೆ. ಎಲ್ಲಾ ಕಲಾಪ್ರೇಮಿಗಳು ನಮ್ಮ ಚಿತ್ರತಂಡಕ್ಕೆ ಪ್ರೀತಿಯಿಂದ ಶುಭ ಹಾರೈಸಿ ತಂಡವನ್ನು  ಇನ್ನಷ್ಟು
ಪ್ರೋತ್ಸಾಹಿಸುವಂತೆ ಚಿತ್ರದ ನಿರ್ದೇಶಕರಾದ  ಗುರುರಾಜ್ ಹೇಳಿದ್ದಾರೆ.

ಹರೀಶ ವಯಸ್ಸು 36 ಚಿತ್ರದ ನಾಯಕ ನಟನಾಗಿ ರಂಗಭೂಮಿ ಕಲಾವಿದ ಕಾಸರಗೋಡಿನ ಯೋಗಿ ಶೆಟ್ಟಿ ನಟಿಸಿದರೆ,ನಾಯಕಿ ಪಾತ್ರದಲ್ಲಿ ಶ್ವೇತಾ ಅರೆಹೊಳೆ ನಟಿಸಿರುತ್ತಾರೆ. ಮೋಹನ್ ಪಡ್ರೆ ಛಾಯಾಗ್ರಹಣ ಮಾಡಿದ್ದು ಚಿತ್ರದ ತಾರಾ೦ಗಣದಲ್ಲಿ ರೋಹಿಣಿ ಜಗರಮ್,ಪ್ರಕಾಶ್ ತುಮಿನಾಡ್,ರಕ್ಷಣ್ ಮಾಡೂರು,ಶೋಭಾಶೆಟ್ಟಿ, ಮಂಜುಳಾ ಜನಾರ್ದನ್ ಮುಂತಾದ ತಾರ ಬಳಗದಿಂದ ಚಿತ್ರವು ಮತ್ತಷ್ಟು ಅದ್ಭುತದಿಂದ ತೆರೆಗೆ ಕಾಣಬಹುದೆಂದು ಚಿತ್ರಭಿಮನಿಗಳು ನಿರೀಕ್ಷಿಸಬಹುದು.

Follow Us:
Download App:
  • android
  • ios