Diganth Birthday: 'ಹುಟ್ಟುಹಬ್ಬ'ದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್‌ನ ದೂದ್‌ ಪೇಡ

ಸ್ಯಾಂಡಲ್​ವುಡ್‌ನ 'ದೂದ್‌ ಪೇಡ' ಖ್ಯಾತಿಯ ನಟ ದಿಗಂತ್ ಮಂಚಾಲೆ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಜನ್ಮದಿನ ಸಂಭ್ರಮದಲ್ಲಿರುವ ದಿಗಂತ್‌ ಅವರಿಗೆ ಅಭಿಮಾನಿಗಳು ಸೇರಿದಂತೆ ಚಂದನವನದ ನಟ, ನಟಿಯರು ತಂತ್ರಜ್ಞರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದು, ಪತ್ನಿ ನಟಿ ಐಂದ್ರಿತಾ ರೈ ಕೂಡ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.
 

happy birthday diganth huttu habbada shubhashayagalu to hit screens on december 31st gvd

ಸ್ಯಾಂಡಲ್​ವುಡ್‌ನ 'ದೂದ್‌ ಪೇಡ' ಖ್ಯಾತಿಯ ನಟ ದಿಗಂತ್ ಮಂಚಾಲೆ (Diganth Manchale) ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಜನ್ಮದಿನ ಸಂಭ್ರಮದಲ್ಲಿರುವ ದಿಗಂತ್‌ ಅವರಿಗೆ ಅಭಿಮಾನಿಗಳು ಸೇರಿದಂತೆ ಚಂದನವನದ ನಟ, ನಟಿಯರು ತಂತ್ರಜ್ಞರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ದಿಗಂತ್‌ ಪತ್ನಿ ನಟಿ ಐಂದ್ರಿತಾ ರೈ (Aindrita Ray) ಕೂಡ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ವೃತ್ತಿ ಜೀವನದುದ್ದಕ್ಕೂ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡ ದಿಗಂತ್ ಅವರಿಗೆ 'ಮುಂಗಾರು ಮಳೆ', 'ಗಾಳಿಪಟ', 'ಮನಸಾರೆ' ಹಾಗೂ 'ಪಂಚರಂಗಿ' ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಟ್ಟ ಚಿತ್ರಗಳು. 

ಸದ್ಯ ದಿಗಂತ್‌ ಅವರ 'ಹುಟ್ಟುಹಬ್ಬದ ಶುಭಾಶಯಗಳು' (Huttu Habbada Shubhashayagalu) ಚಿತ್ರ ಇದೇ ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿಪರದೆ ಮೇಲೆ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ನ್ನು (Trailer) ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ (Upendra) ಅವರು ರಿಲೀಸ್ ಮಾಡಿ, ನಾನು ಈ ಸಂಸ್ಥೆಯ 'ಬುದ್ದಿವಂತ 2' ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು. ಈ ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.

Party Song: ದೂದ್​ ಪೇಡ ದಿಗಂತ್ ಚಿತ್ರದ ಎಣ್ಣೆ ಹೊಡೆದರೆ ಅಪರಾಧ ಸಾಂಗ್ ರಿಲೀಸ್

ನಮ್ಮ ಸಂಸ್ಥೆಯ ಮೊದಲ ಚಿತ್ರ 'ಚಮಕ್' ಸಹ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಈ ಚಿತ್ರ ಸಹ ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮೂಲತಃ ಎಂಜಿನಿಯರ್ ಆಗಿರುವ ನಾಗರಾಜ್​ ಬೇತೂರ್ (Nagaraj Bethur) ಅವರ ಸಾರಥ್ಯದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಉಪೇಂದ್ರ ಅವರಿಗೆ ಧನ್ಯವಾದ ಎಂದು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಈ ಸಂದರ್ಭದಲ್ಲಿ ತಿಳಿಸಿದರು. ಹಾಗೂ ನಿರ್ದೇಶಕರು ಹೇಳಿದ ಹಾಗೆ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಆಗಿರುವುದರಿಂದ ಹೆಚ್ಚು ಹೇಳುವ ಹಾಗಿಲ್ಲ. ಒಟ್ಟಿನಲ್ಲಿ ಉತ್ತಮ ಚಿತ್ರ ಅಂತ ಹೇಳಬಹುದು.‌ ಡಿಸೆಂಬರ್ 31 ರಂದು ಚಿತ್ರ ತೆರೆಗೆ ಬರುತ್ತಿದೆ.‌ ನಿಮ್ಮ ಬೆಂಬಲವಿರಲಿ ಎಂದು ದಿಗಂತ್ ಹೇಳಿದರು.

happy birthday diganth huttu habbada shubhashayagalu to hit screens on december 31st gvd

ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದು,​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿದೆ. ಕಾಮಿಡಿ ಜೊತೆಗೆ ಲವ್​ ಹಾಗೂ ಮಾಸ್​ ಕಥೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಚಿತ್ರಕ್ಕೆ ಪ್ರಸನ್ನ ಕಥೆಯನ್ನು ಬರೆದಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀಕಾಂತ್ ಶ್ರಾಫ್ ಸಂಕಲನ, ಅಭಿಲಾಶ್ ಕಲತಿ ಕ್ಯಾಮೆರಾ ಕೈಚಳಕ 'ಹುಟ್ಟು ಹಬ್ಬದ ಶುಭಾಶಯಗಳು' ಚಿತ್ರಕ್ಕಿದೆ. ಕವಿತಾ ಗೌಡ, ಚೇತನ್ ಗಂಧರ್ವ, ಮಡೇನೂರು ಮನು, ಸೂರಜ್, ಸೂರ್ಯ, ವಾಣಿಶ್ರೀ, ರೋಹಿತ್ ರಂಗಸ್ವಾಮಿ, ಶನಯ ಕಾಟ್ವೆ, ಶರಣ್ಯ ಶೆಟ್ಟಿ, ಶ್ರೀದತ್ತ, ಶ್ರೀಹರಿ, ಸುಜಯ್ ಶಾಸ್ತ್ರಿ, ರತನ್ ರಾಮ್, ಅಮೋಘವರ್ಷ, ಅಜಯ್ ಗಜ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಕ್ರಿಸ್ಟಲ್ ಪಾರ್ಕ್ ಬ್ಯಾನರ್​ನಡಿ ಟಿ. ಆರ್​ ಚಂದ್ರಶೇಖರ್ (TR Chandrashekar)​ ನಿರ್ಮಾಣ ಮಾಡಿದ್ದಾರೆ.

Diganth: ಹುಟ್ಟು ಹಬ್ಬದ ಟ್ರೇಲರ್ ಲಾಂಚ್ ಮಾಡಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ

ಇನ್ನು ದಿಗಂತ್‌ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, 'ಮಾರಿಗೋಲ್ಡ್‌' (Marigold) ಎಂಬ ಕ್ರೈಮ್‌ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ಎಂ ನಾಯಕ್‌ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಗೀತಾ ಶೃಂಗೇರಿ (Sangeetha Sringeri) ದಿಗಂತ್‌ಗೆ ಜೋಡಿಯಾಗಿದ್ದು, ರಘುವರ್ಧನ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜೊತೆಗೆ ರಂಜನಿ ರಾಘವನ್ ಜೊತೆ 'ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ' (Kshamisi Nimma Katheyalli Hanavilla) ಚಿತ್ರದಲ್ಲೂ ದಿಗಂತ್ ಕಾಣಿಸಿಕೊಳ್ಳುತ್ತಿದ್ದು, ವಿನಾಯಕ ಕೋಡ್ಸರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೂ ಯೋಗರಾಜ್ ಭಟ್ಟರ 'ಗಾಳಿಪಟ 2' (Galipata 2) ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ತೆಲುಗಿನ 'ಎವರು' ರಿಮೇಕ್ ಚಿತ್ರದಲ್ಲೂ ದಿಗಂತ್ ಅಭಿನಯಿಸುತ್ತಿದ್ದಾರೆ. 
 

Latest Videos
Follow Us:
Download App:
  • android
  • ios