ಹಂಸಲೇಖಾ ತಮ್ಮ ಜೀವನದ ಮೂರು 'ರತ್ನ'ಗಳನ್ನು ಬಹಿರಂಗಪಡಿಸಿದ್ದಾರೆ. ಪತ್ನಿ ಲತಾ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ನಟ ರವಿಚಂದ್ರನ್ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರವಿಚಂದ್ರನ್ ಮತ್ತು ಅವರ ತಂದೆ ವೀರಾಸ್ವಾಮಿ ಅವರಿಗೆ 'ಅನ್ನದಾತರು' ಎಂದು ಗೌರವ ಸಲ್ಲಿಸಿ, ಅವರ ಫೋಟೋಗಳನ್ನು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಪ್ರೇಮಲೋಕ ಚಿತ್ರದ ಯಶಸ್ಸು ಹಂಸಲೇಖಾ-ರವಿಚಂದ್ರನ್ ಜೋಡಿಯನ್ನು ಖ್ಯಾತಿಗೆ ತಂದಿತು.
ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಒಂದು ಕಾಲದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಂಸಲೇಖಾ (Hamsalekha) ಅವರು ಸಂದರ್ಶನವೊಂದರಲ್ಲಿ ಸೀಕ್ರೆಟ್ ಹೇಳಿದ್ದಾರೆ. ತಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ ಮೂರು ರತ್ನಗಳ ಬಗ್ಗೆ ಹಂಸಲೇಖಾ ಅವರು ಹೇಳಿಕೊಂಡಿದ್ದಾರೆ. ಸಹಜವಾಗಿಯೇ ಯಾರಿರಬಹುದು ಆ ಮೂರು ವ್ಯಕ್ತಿಗಳು ಎಂಬ ಕುತೂಹಲ ಮೂಡುತ್ತದೆ. ಅದನ್ನು ತಿಳಿದುಕೊಳ್ಳುವ ಮೊದಲು ಇನ್ನೂ ಒಂದು ವಿಷ್ಯದ ಬಗ್ಗೆ ಬೆಳಕು ಚೆಲ್ಲಲೇಬೇಕು.
ಹೌದು, ಕನ್ನಡ ಚಿತ್ರರಂಗದ ಜರ್ನಿಯಲ್ಲಿ ನಟ ರವಿಚಂದ್ರನ್ (Ravichandran) ಅವರ ಪಾತ್ರವೂ ದೊಡ್ಡದಿದೆ. ಅವರಿಗಿಂತಲೂ ಅವರ ತಂದೆ ವೀರಾಸ್ವಾಮಿಯವರ ಪಾತ್ರ ಇನ್ನೂ ಹೆಚ್ಚಿದೆ. ತಂದೆಯಿಂದ ಮಗ ಎಂಬಂತೆ, ತಂದೆ ವೀರಾಸ್ವಾಮಿಯವರ ಸಿನಿಮಾ ನಿರ್ಮಾಣದ ಕೆಲಸವನ್ನು ಕಣ್ಣಿಗೆ ಒತ್ತಿಕೊಂಡು ಮುಂದುವರಿಸಿದವರು ರವಿಚಂದ್ರನ್. ಪ್ರೇಮಲೋಕ ಸೂಪರ್ ಹಿಟ್ ಆದ ಸಮಯದಲ್ಲಿ ಸ್ವತಃ ವೀರಾಸ್ವಾಮಿಯವರೂ ಇದ್ದರು. ಅವರು ತಮ್ಮ ಮಗ ರವಿಚಂದ್ರನ್ ಯಶಸ್ಸನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಹೆಣ್ಣಿನ ಋಣ ಕೊಟ್ಟ ದೇವ್ರು ಮಣ್ಣಿನ ಋಣ ಕೊಡ್ಲಿಲ್ಲ; ರವಿಮಾಮನ ಮಾತಿಗೆ ಅನುಶ್ರೀ ತಬ್ಬಿಬ್ಬು!
ಪ್ರೇಮಲೋಕ ಚಿತ್ರಕ್ಕೆ ಸಂಗೀತ ಕೊಟ್ಟಿದ್ದು ಹಂಸಲೇಖಾ. ಅವರಿಗೆ ಅದು ಎರಡನೇ ಚಿತ್ರ. ಪ್ರೇಮಲೋಕ ಚಿತ್ರದ ಹಾಡುಗಳ ಮೂಲಕ ಹಂಸಲೇಖಾ ಅವರು ಕನ್ನಡದಲ್ಲಿ ಹೊಸ ಟ್ರೆಂಡ್ ಬರೆದರು. ಸಿನಿಮಾ ಸೂಪರ್ ಸಕ್ಸಸ್ ಕಾಣಲು ಹಾಡುಗಳು ಕೂಡ ಮುಖ್ಯ ಪಾತ್ರ ವಹಿಸಿದ್ದವರು . ಅಲ್ಲಿಂದ ಮುಂದೆ ಹಂಸಲೇಖಾ-ರವಿಚಂದ್ರನ್ ಜೋಡಿ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಹಲವು ಸಿನಿಮಾಗಳ ಅವರಿಬ್ಬರ ಜೋಡಿ ಕೆಲಸದಲ್ಲೇ ತೆರೆಗೆ ಬಂದವು. ಇವೆಲ್ಲಾ ಈಗ ಇತಿಹಾಸ.
ಆದರೆ, ಅದ್ಯಾವುದೋ ಕೆಟ್ಟ ಘಳಿಗೆ ಎಂಬಂತೆ, ಅಥವಾ ಮೇಲೇರಿದ್ದು ಕೆಳಗೆ ಇಳಿಯಲೇಬೇಕು ಎಂಬಂತೆ, ಹಂಸಲೇಖಾ-ರವಿಚಂದ್ರನ್ ಜೋಡಿ ಮಧ್ಯೆ ಮನಸ್ತಾಪ ಮೂಡಿ ಅವರಿಬ್ಬರೂ ಬೇರೆಬೇರೆ ಎಂಬಂತಾಯ್ತು. ಬಳಿಕ, ಅದೆಷ್ಟೋ ಸಮಯದ ಬಳಿಕ ಇಬ್ಬರಿಗೂ ಜ್ಞಾನೋದಯವಾಗಿ ಮತ್ತೆ ಒಂದಾಗಿ ಸಿನಿಮಾ ಮಾಡಿದರೂ ಅದಾಗಲೇ ಇಬ್ಬರೂ ತಮ್ಮತಮ್ಮ ಚಾರ್ಮ್ ಕಳೆದುಕೊಂಡಿದ್ದರು. ಆದರೆ, ಅವರಿಬ್ಬರ ಸಂಗಮದಿಂದ ಕನ್ನಡ ಚಿತ್ರರಂಗಕ್ಕೆ ಆದ ಲಾಭ, ಹಾಗೂ ಅವರಿಬ್ಬರ ಮನಸ್ತಾಪದಿಂದ ಆದ ನಷ್ಟ ಎರಡೂ ಅಪಾರ ಎನ್ನಬಹುದು!
'ಕಡ್ಲೇ ಬೀಜ'ದ ಕಥೆ ಇನ್ನ ಮುಗಿದಿಲ್ವಾ...? ಅವಮಾನ ಎದುರಿಸಿದ್ದೇನೆ ಅಂದಿದ್ಯಾಕೆ ಲೂಸ್ ಮಾದ..!?
ಅದರಲಿ, ಹಂಸಲೇಖಾ ಮನೆಯಲ್ಲಿ ರವಚಂದ್ರನ್ ಹಾಗೂ ವೀರಾಸ್ವಾಮಿಯ ಫೋಟೋ ಇದೆ. ಅದರ ಮೇಲೆ ಅನ್ನದಾತರು ಎಂದೂ ಬರೆಯಲಾಗಿದೆ. ಅದು ಹೇಗೆ ಬಂತು ಎಂಬ ಬಗ್ಗೆ ಸ್ವತಃ ಹಂಸಲೇಖಾ ಅವರೇ ಹೇಳಿದ್ದಾರೆ. ಪ್ರೇಮಲೋಕ ಯಶಸ್ಸು ಪಡೆದಾಗ ಸ್ವತಃ ವೀರಾಸ್ವಾಮಿಯವರು ಶೀಲ್ಡ್ ಜೊತೆ ತಮ್ಮ ಫೋಟೋ ಕೊಟ್ಟಿದ್ದರಂತೆ. ಅದನ್ನು ಹಂಸಲೇಖಾ ತಮ್ಮ ಮನೆಯಲ್ಲಿ ಕಾಣುವಂತೆ ಹಾಕಿಕೊಂಡಿದ್ದಾರೆ. ಅದಾದ ಬಳಿಕ ಬೇರೆ ಒಬ್ಬರು ನಿಮಗೆ ನಿಜವಾದ ಅನ್ನದಾತರು ರವಿಚಂದ್ರನ್ ಅಂತ ಹೇಳಿ ಅವರ ಫೋಟೋ ಕೊಟ್ಟರಂತೆ. ಹೀಗಾಗಿ ಅಪ್ಪ ವೀರಾಸ್ವಾಮಿ ಹಾಗೂ ಮಗ ರವಿಚಂದ್ರನ್ ಈ ಇಬ್ಬರ ಫೋಟೋಗಳು ಹಂಸಲೇಖಾರ ಮನೆಯಲ್ಲಿ ಇವೆ.
ತಮ್ಮ ಜೀವನಕ್ಕೆ ಆಧಾರವಾದ, ಲೈಫಿನಲ್ಲಿ ಮುಖ್ಯ ಪಾತ್ರ ವಹಿಸಿದ ಮೂರು ವ್ಯಕ್ತಿಗಳು ಬಗ್ಗೆ ಹೇಳಿದ್ದಾರೆ ಹಂಸಲೇಖಾ. 'ಒಬ್ಬರು ಅವರ ಪತ್ನಿ ಜೀವನದಲ್ಲಿ ಬಂದ ಸಂಗಾತಿ ಲತಾ, ಇನ್ನೊಬ್ಬರು ಸಂಗೀತದ ಸಂಗಾತಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಗೂ ಮತ್ತೊಬ್ಬರು ವೃತ್ತಿ ಕೊಟ್ಟ (ಬದುಕು) ಸಂಗಾತಿ ರವಿಚಂದ್ರನ್' ಎಂದಿದ್ದಾರೆ ಹಂಸಲೇಖಾ. ಈ ಮೂವರನ್ನು ತಮ್ಮ ಜೀವನದಲ್ಲಿ ಬಂದ ಮೂರು 'ರತ್ನಗಳು' ಎಂದಿದ್ದಾರೆ ಹಂಸಲೇಖಾ!
ಒಂದು ರಾತ್ರೀಲಿ ಜೀವನ ಬದಲಾಗೋದು ಅಂದ್ರೆ ಇದೇ... 16 ವರ್ಷದ ಆ ಹುಡುಗಿ ಕಥೆ!
