ಹೆಣ್ಣಿನ ಋಣ ಕೊಟ್ಟ ದೇವ್ರು ಮಣ್ಣಿನ ಋಣ ಕೊಡ್ಲಿಲ್ಲ; ರವಿಮಾಮನ ಮಾತಿಗೆ ಅನುಶ್ರೀ ತಬ್ಬಿಬ್ಬು!
ಅಲ್ಲಿ ಸೇರಿದ್ದ ಎಲ್ಲರೂ ಸಿಕ್ಕಾಪಟ್ಟೆ ನಕ್ಕರು. ಸ್ವತಃ ಆಂಕರ್ ಅನುಶ್ರೀ ಅವರು ತಲೆಮೇಲೆ ಕೈ ಇಟ್ಟುಕೊಂಡು ನಗೆಗಡಲಿನಲ್ಲಿ ತೇಲಿಹೋದರು. ನಟ ರವಿಚಂದ್ರನ್ ಅವರು ಒಂಥರಾ ಹಾಗೇಯೇ ಅಂತಾರೆ ಅವರನ್ನು ಬಲ್ಲ ಆಪ್ತರು. ಯಾವುದನ್ನೂ ಕೂಡ ಅವರು ಸೀರಿಯಸ್ ಆಗಿ..

'ಒಂದು ಫಾರ್ಮ್ ಹೌಸ್ ಕಟ್ಬೇಕು, ಅಲ್ಲಿ ಕುದುರೆ ಸಾಕ್ಬೇಕು ಅನ್ನೋದು ನನ್ನ ಚಿಕ್ಕ ವಯಸ್ಸಿಂದ್ಲೇ ಇರೋ ಆಸೆ. ದೇವ್ರು ನನಗೆ ಮಣ್ಣಿನ ಋಣನೇ ಕೊಡ್ಲಿಲ್ಲ.. ' ಎಂದರು ನಟ ರವಿಚಂದ್ರನ್. ಆಗ ಎದುರಿಗೇ ಇದ್ದ ಅನುಶ್ರೀ 'ಅಲ್ಲ, ಎಂತೆಂಥ ರಿಚ್ಚೆಷ್ಟ್ ಸಿನಿಮಾಗಳನ್ನು ಮಾಡಿರೋ ಪ್ರೊಡ್ಯೂಸರ್ & ಡೈರೆಕ್ಟರ್ ನೀವು, ನಿಮ್ಗೆ ಒಂದ್ ಫಾರ್ಮ್ ಹೌಸ್ ತಗೊಳ್ಳೋಕೆ ಆಗಿಲ್ಲ ಅಂತಿದಾರೆ' ಅಂದ್ರು.
ಎಲ್ಲರೂ ವಿಷಾಧದ ಮೂಡನಲ್ಲಿ ಇರುವಾಗ ರವಿಚಂದ್ರನ್ 'ನಂಗೆ ಹೆಣ್ಣಿನ ಋಣ ಕೊಟ್ಬಿಟ್ಟ ದೇವ್ರು, ಮಣ್ಣಿನ ಋಣ ಕೊಡ್ಲಿಲ್ಲ' ಎಂದು ನಟ ರವಿಚಂದ್ರನ್ (Ravichandran) ಅವರು ಅನುಶ್ರೀ (Anushree) ಎದುರು ನಗೆ ಚಟಾಕಿ ಹಾರಿಸಿದ್ದಾರೆ. ಅಲ್ಲಿ ಸೇರಿದ್ದ ಎಲ್ಲರೂ ಸಿಕ್ಕಾಪಟ್ಟೆ ನಕ್ಕರು. ಸ್ವತಃ ಆಂಕರ್ ಅನುಶ್ರೀ ಅವರು ತಲೆಮೇಲೆ ಕೈ ಇಟ್ಟುಕೊಂಡು ನಗೆಗಡಲಿನಲ್ಲಿ ತೇಲಿಹೋದರು. ನಟ ರವಿಚಂದ್ರನ್ ಅವರು ಒಂಥರಾ ಹಾಗೇಯೇ ಅಂತಾರೆ ಅವರನ್ನು ಬಲ್ಲ ಆಪ್ತರು.
ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?
ಯಾವುದನ್ನೂ ಕೂಡ ಅವರು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅಥವಾ, ಸೀರಿಯಸ್ ಆಗಿದ್ದರೂ ಅದನ್ನೇ ಮೆಂಟೇನ್ ಮಾಡೋದಿಲ್ಲ, ತಕ್ಷಣವೇ ಬೇರೆ ಮೂಡ್‌ಗೆ ಹೋಗಿಬಿಡುತ್ತಾರೆ ಎಂಬಮಾತು ಅವರ ಬಗ್ಗೆ ಯಾವಾಗಲೂ ಕೇಳಿ ಬರುತ್ತವೆ. ಈ ವಿಡಿಯೋದಲ್ಲಿ ಅವರಾಡಿರುವ ಮಾತು ಕೂಡ ಆ ಮಾತಿಗೆ ಸಾಕ್ಷಿ ಕೊಟ್ಟಿವೆ ಎನ್ನಬಹುದು.
ಹೌದು, ನಟ ರವಿಚಂದ್ರನ್ ಅವರು ಹುಟ್ಟು ಶ್ರೀಮಂತ. ಅವರ ತಂದೆ ವೀರಾಸ್ವಾಮಿಯವರು ಖ್ಯಾತ ನಿರ್ಮಾಪಕರು. ಈಶ್ವರಿ ಸಂಸ್ಥೆ ಮೂಲಕ ಅವರು ಬಹಳಷ್ಟು ಸಿನಿಮಾಗಳನ್ನು ಮಾಡಿದ್ದಾರೆ, ಹಣ ಹಾಗೂ ಆಸ್ತಿ ಮಾಡಿದ್ದಾರೆ. ಆದರೆ, ಮಗ ವಿ ರವಿಚಂದ್ರನ್ ಅವರು ದಯರಾದೃಷ್ಟ ಎಂಬಂತೆ ಅಪ್ಪನ ಹಣವನ್ನು ತಮ್ಮ ಅತಿಯಾದ ಸಿನಿಮಾ ಪ್ರೀತಿಯಿಂದಲೇ ಕಳೆದುಕೊಂಡರು ಎನ್ನಬಹುದೇ? ಹಾಗೆ ಹೇಳುವ ಬದಲು ಸಿನಿಮಾ ಕ್ರೇಜ್ ಅವರನ್ನು ಸಾಲದ ಶೂಲಕ್ಕೆ ದೂಡಿದೆ ಎನ್ನಬಹುದು.
ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
ಏಕೆಂದರೆ, ಹೇಗೂ ಸ್ಯಾಂಡಲ್‌ವುಡ್ ಪ್ರಿಯರು ಅವರಿಗೆ 'ಕ್ರೇಜಿ ಸ್ಟಾರ್' ಎಂಬ ಬಿರುದು ನೀಡಿದ್ದಾರೆ. ಸಿನಿಮಾದ ಮೇಲಿನ ಹುಚ್ಚು ಪ್ರೀತಿಯೇ ಅವರಿಗೆ ಮುಳುವಾಯ್ತು ಎನ್ನಬಹುದು. ಅವರ ಸಿನಿಮಾ ಕ್ರೇಜ್ ಮೂಲಕ ಕನ್ನಡ ಸಿನಿಮಾರಂಗ ಶ್ರೀಮಂತವಾಯ್ತು. ಆದರೆ, ವೈಯಕ್ತಿಕವಾಗಿ ಅವರು ಬಡವರಾದ್ರು ಎನ್ನಬಹುದೇನೋ! ಬೇಡ ಬಿಡಿ, ಅವರ ಸಿನಿಮಾ ಪ್ರೀತಿ ಅವರದು, ಅವರ ಪರಿಸ್ಥಿತಿ ಅವರದು. ಆದರೆ ಅವರು ಕನ್ನಡ ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಅಪಾರ ಎಂಬುದನ್ನು ಯಾರೂ ಮರೆಯಲಾಗದು!

