ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಸಿನಿಮಾ 'ಎದ್ದೇಳು ಮಂಜುನಾಥ 2' ಬಿಡುಗಡೆಯಾಗಬೇಕಿತ್ತು. ಆದರೆ, ಅವರ ಪತ್ನಿಯಿಂದ ತಡೆಯಾಜ್ಞೆ ತಂದ ಕಾರಣ ಬಿಡುಗಡೆ ಸ್ಥಗಿತಗೊಂಡಿದೆ. ನಿರ್ಮಾಪಕರು ನಷ್ಟ ತುಂಬಿಕೊಡುವಂತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಸಿನಿಮಾ ಬಿಡುಗಡೆಯಾಗದ ಕಾರಣ ನಿರ್ಮಾಪಕರಿಗೆ ನಷ್ಟವಾಗುವ ಸಾಧ್ಯತೆಯಿದೆ. ಚಿತ್ರಮಂದಿರಗಳಲ್ಲಿ ಪೋಸ್ಟರ್ ಹಾಕಿದ್ದರೂ, ಬಿಡುಗಡೆ ಸಾಧ್ಯವಾಗಲಿಲ್ಲ.
ನಮ್ಮನ್ನಗಲಿರುವ ಕನ್ನಡದ ಖ್ಯಾತ ನಿರ್ದೇಶಕ ಗುರು ಪ್ರಸಾದ್ (Guruprasad) ಕೊನೆಯ ಸಿನಿಮಾ ಬಿಡುಗಡೆ ಪ್ಲಾನ್ ನನಸಾಗಲಿಲ್ಲ. ಇಂದು ಬಿಡುಗಡೆ ಕಾಣಬೇಕಿದ್ದ ಸಿನಿಮಾವನ್ನು ಕೇಸ್ ಹಾಕಿರುವ ಕಾರಣಕ್ಕೆ ಬಿಡುಗಡೆ ಮಾಡಿಲ್ಲ. ಗುರು ಪ್ರಸಾದ್ ನಟಿಸಿ ನಿರ್ದೇಶಿಸಿದ್ದ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ 2 ಚಿತ್ರವನ್ನು (Eddelu Manjunatha 2) ಸದ್ಯಕ್ಕೆ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ಗುರು ಪ್ರಸಾದ್ 100 ನೇ ಬರ್ತ್ ಡೇ ಗೆ ರಿಲೀಸ್ ಮಾಡ್ತಿವಿ ಅಂತ ಅನೌನ್ಸ್ ಮಾಡಿದ್ದರು ನಿರ್ಮಾಪಕರು. ಆದರೆ, ಗುರು ಪತ್ನಿ ಸುಮಿತ್ರಾ ರಿಂದ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ತರಲಾಗಿದೆ. ಈಗ ಕೋರ್ಟನಿಂದ ಅನುಮತಿ ಸಿಕ್ರೂ ರಿಲೀಸ್ ಮಾಡದೇ ಇರಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಇದು ಈ ಎದ್ದೇಳು ಮಂಜುನಾಥ 2' ಚಿತ್ರತಂಡದ ನಿರ್ಧಾರ, ಕಾರಣವನ್ನು ಅವರ ಬಳಿಯೇ ಕೇಳಬೇಕು.
ಸನ್ನಿ ಲಿಯೋನ್ ಹೇಳಿಕೊಟ್ಟ ಪಾಠ ಯಾಕೆ ಕಲೀಲಿಲ್ಲ..? ರಣವೀರ್ ಅಲ್ಲಾಬಾಡಿಯಾಗೆ ಸಕತ್ ಕ್ಲಾಸ್!
ಸದ್ಯ ಕೇಳಿವರುತ್ತಿರುವ ಮಾಹಿತಿ ಪ್ರಕಾರ, ತಮಗಾಗಿರೋ ನಷ್ಟ ತುಂಬಿಕೊಡುವಂತೆ ನಿರ್ಮಾಪಕರು ಕೋರ್ಟ್ ಮೊರೆ ಹೋಗೋ ಸಾಧ್ಯತೆ ಹೆಚ್ಚಿದೆ. ಸಿನಿಮಾ ಬಿಡುಗಡೆ ಆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ, ಹಾಕಿದ ಹಣವಂತೂ ವಾಪಸ್ ಬರುತ್ತಿತ್ತು. ಆದರೆ ಬಿಡುಗಡೆಯನ್ನೇ ಮಾಡದಿದ್ದರೆ ನಿರ್ಮಾಪಕರಿಗೆ ಆಗುವ ನಷ್ಟ ಭರಿಸುವವರು ಯಾರು? ಹೀಗಾಗಿ ಸದ್ಯ ಗುರುಪ್ರಸಾದ್ ಕೊನೆಯ ಸಿನಿಮಾ ವಿಷ್ಯ ಅಯೋಮಯವಾಗಿದೆ.

ಗುರು ಪ್ರಸಾದ್ ರ ಕೊನೆಯ ಸಿನಿಮಾಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಕರ್ನಾಟಕದಾದ್ಯಂತ 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಆಗಿಲ್ಲ. ಎಲ್ಲಾ ಚಿತ್ರಮಂದಿರಗಳಲ್ಲೂ ಎದ್ದೇಳು ಮಂಜುನಾಥ್ 2 ಪೋಸ್ಟರ್ ಕಟೌಟ್ ಹಾಕಲಾಗಿದೆ. ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಕೂಡ ಓಪನ್ ಆಗಿತ್ತು. ಆದರೆ ಗುರು ಪ್ರಸಾದ್ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಇಂದು ಸಿನಿಮಾ ರಿಲೀಸ್ ಆಗಿಲ್ಲ. ಮುಂದೇನು ಈ ಸಿನಿಮಾ ಕಥೆ ಅನ್ನೋದು ಗೊತ್ತಿಲ್ಲ.
Asin Love Story: ಆಸಿನ್ ಮೊದಲ ಪ್ರೇಮ ಪುರಾಣ ದುರಂತ ಅಂತ್ಯ, ಎರಡನೆಯದು ಸುಖ ಸಂಸಾರ!
