ಒಂದು ಕಾಲದಲ್ಲಿ ಮಿಂಚಿದ ನಟಿ ಆಸಿನ್, ಮಲಯಾಳಂ ಚಿತ್ರದಿಂದ ವೃತ್ತಿ ಆರಂಭಿಸಿದರು. ದಕ್ಷಿಣ ಭಾರತದಲ್ಲಿ ಯಶಸ್ಸು ಗಳಿಸಿದ ಬಳಿಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಟ ನಿತಿನ್ ಜೊತೆಗಿನ ಪ್ರೇಮ ವಿಫಲವಾಯಿತು. ಶ್ರೀಲಂಕಾದಲ್ಲಿ ನಡೆದ ಐಫಾ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ತಮಿಳು ಚಿತ್ರರಂಗದಿಂದ ನಿಷೇಧಕ್ಕೊಳಗಾದರು. ನಂತರ ಉದ್ಯಮಿ ರಾಹುಲ್ ಜೊತೆ ವಿವಾಹವಾಗಿ, ಪ್ರಸ್ತುತ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ನಟಿ ಆಸಿನ್ (Asin) ಭಾರತದಲ್ಲಿ ಒಂದು ಕಾಲದಲ್ಲಿ ಭಾರೀ ಎನ್ನುವಷ್ಟು ಮಿಂಚಿ ಮರೆಯಾದ ನಟಿ. ಸೌತ್ ಹಾಗೂ ನಾರ್ತ್ ಎರಡೂ ಕಡೆ ನಟಿಸಿ ಸ್ಟಾರ್ ಪಟ್ಟು ಪಡೆದುಕೊಂಡು ಮರೆದ ನಟಿ ಆಸಿನ್. ಅವರನ್ನು ಆ ಕಾಲದಲ್ಲಿ 'ಲೇಡಿ ಲಕ್ಕಿ ಆಕ್ಟ್ರೆಸ್' ಎಂದೇ ಚಿತ್ರೋದ್ಯಮ ಕರೆಯುತ್ತಿತ್ತು. ಕಾರಣ, ಆಸಿನ್ ನಟಿಸಿದ್ದ ಮೊದಲ ಮೂರೂ ಚಿತ್ರಗಳೂ ಸೂಪರ್ ಹಿಟ್ ಆದವು. ಆ ಬಳಿಕ ನಟಿ ಆಸಿನ್‌ ಹಿಂತಿರುಗಿ ನೋಡಿದ್ದೇ ಇಲ್ಲ. ಆಸಿನ್ ಮೊದಲ ಚಿತ್ರ ಮಲಯಾಂಳನ 'Narendran Makan Jayakanthan Vaka' 2001ರಲ್ಲಿ ತೆರೆಗೆ ಅಪ್ಪಳಿಸಿತು. ಅದು ಸೂಪರ್ ಹಿಟ್ ಆಗಿತ್ತು. 

Add Asianetnews Kannada as a Preferred SourcegooglePreferred

ಆಸಿನ್ ನಟಿಸಿದ ಮೊದಲ ಚಿತ್ರದ ಯಶಸ್ಸು ಅವರನ್ನು ಸಿನಿಮಾರಂಗದಲ್ಲೇ ಉಳಿಯುವಂತೆ ಮಾಡಿತು. ಆ ಬಳಿಕ ಅವರಿಗೆ ಬಹಳಷ್ಟು ಅವಕಾಶಗಳು ಬಂದವು. ಸೌತ್ ಸ್ಟಾರ್ ನಟಿಯಾಗಿದ್ದ ಆಸಿನ್ ಬಾಲಿವುಡ್‌ನಲ್ಲೂ ಭಾರೀ ಎಂಬಂತೆ ಅವಕಾಶಗಳು ಅರಸಿ ಬಂದವು. ಮೊದಮೊದಲು ಬಾಲಿವುಡ್‌ನಲ್ಲಿ ಬಂದ ಚಿಕ್ಕಪುಟ್ಟ ಅವಕಾಶಗಳನ್ನೆಲ್ಲಾ ರಿಜೆಕ್ಟ್ ಮಾಡಿದ್ರು ನಟಿ ಆಸಿನ್. ಆದರೆ, ಬಳಿಕ ಆ ಕಾಲದ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಮೀರ್ ಖಾನ್ ಜೊತೆಗೆ ನಟಿಸಿ ಬಾಲಿವುಡ್‌ನಲ್ಲೂ ಸ್ಟಾರ್‌ ಪಟ್ಟಕ್ಕೇರಿದ್ರು. 

ಶ್ರೇಯಾ ಘೋಷಾಲ್ ಹಾರ್ಟ್ ಓಲ್ಡ್‌ ಅಂತೆ.. ಐಶ್ವರ್ಯಾ ರೈ ಬಗ್ಗೆ ಈ ಸಿಂಗರ್ ಹೀಗ್ ಹೇಳೋದಾ?

ಆದರೆ, ಆಸಿನ್ ಲೈಫಲ್ಲಿ ಆ ಹಂತದಲ್ಲಿ ಲವ್ ಎಂಟ್ರಿ ಆಯ್ತು.. ಬಾಲಿವುಡ್‌ ನಟ ನಿತಿನ್ ಮುಖೇಶ್ ಅವರೊಂದಿಗೆ ಲವ್‌ನಲ್ಲಿ ಬಿದ್ದ ನಟಿ ಆಸಿನ್, ಆತನೊಂದಿಗೆ ಡೇಟಿಂಗ್‌ ಮಾಡ್ತಾ ಇದ್ರು. ಆದ್ರೆ ಆ ಬಗ್ಗೆ ಮೀಡಿಯಾಗೆ ಸುದ್ದಿ ಬಿಟ್ಟುಕೊಡಬಾರದು ಎಂದು ನಟ ನಿತಿನ್‌ಗೆ ನಟಿ ಆಸಿನ್‌ ಕಂಡೀಷನ್ ಹಾಕಿದ್ರಂತೆ. ಆಕೆಗೆ ಸಾಕಷ್ಟು ಹತ್ತಿರವಾಗಿದ್ದ ನಿತಿನ್ ಮುಖೇಶ್ ಅವರು ತುಂಬಾ ಪೊಸೆಸವ್ ಆಗಿದ್ರಂತೆ. ಅದೇ ವೇಳೆ ನಟಿ ಆಸಿನ್ ನಟರಾದ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರೊಂದಿಗೆ ಸಿನಿಮಾ ನಟನೆ ಜೊತೆ ಹೆಚ್ಚು ಕ್ಲೋಸ್ ಆಗಿದ್ರು. 

ಇದರಿಂದ ಕೆರಳಿ ಕೆಂಡವಾದ ನಟ ನಿತಿನ್ ಮುಕೇಶ್, ಪ್ರೆಸ್‌ಮೀಟ್ ಕರೆದು ನಟಿ ಆಸಿನ್ ಬಗ್ಗೆ ಮಾತನ್ನಾಡಿ ತಮ್ಮಿಬ್ಬರ ಡೇಟಿಂಗ್ ಸುದ್ದಿ ಲೀಕ್ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಟ ನಿತಿನ್ 'ಆಸಿನ್‌ ಒಬ್ಬ ಮೋಸಗಾರ್ತಿ ಹಾಗೂ ಸುಳ್ಳುಗಾರ್ತಿ.. ಅವರು ನನ್ನಿಂದ ಬಹಳಷ್ಟು ಸಹಾಯ ಪಡೆದಿದ್ದಾರೆ. ನಾನು ಅವರಿಗೆ ಸಿಕ್ಕಾಪಟ್ಟೆ ಹಣದ ಸಹಾಯ ಕೂಡ ಮಾಡಿದ್ದೇನೆ. ಆದ್ರೆ ಈಗ ಅವರು ಕೈಗೆ ಸಿಗುತ್ತಿಲ್ಲ' ಎಂದು ದೂರಿದ್ದ. ಅಲ್ಲಿಗೆ ಅವರಿಬ್ಬರ ಲವ್ ಸ್ಟೋರಿ ಖತಂ ಆಯ್ತು.. 

ಕನ್ನಡ ಸ್ಟಾರ್ ನಟರ ಕೈ ತಪ್ಪಿದ ಸಿನಿಮಾಗಳಿವು, ಅವ್ರ ಫ್ಯಾನ್ಸ್‌ಗೆ ಹೇಳ್ಬೇಡಿ.. ಜಸ್ಟ್ ನೋಡಿ..!

ಆ ವೇಳೆ ಆಸಿನ್ ನಟಿಸಿದ ಬಾಲಿವುಡ್ ಸಿನಿಮಾಗಳೂ ಯಾಕೋ ಓಡಲಿಲ್ಲ. ನಿಧಾನಕ್ಕೆ ನಟಿ ಆಸಿನ್‌ ಅವರನ್ನು ಬಾಲಿವುಡ್‌ನಲ್ಲಿ ಮೂಲೆಗುಂಪು ಮಾಡಲಾಯ್ತು. ಬಳಿಕ, ಸಲ್ಮಾನ್ ಖಾನ್ ಹಾಗೂ ನಟ ಅಕ್ಷಯ್ ಕುಮಾರ್ ಹಾಗೂ ಚಿತ್ರದ ಬಳಿಕ ಅವರಿಗೆ ಬಾಲಿವುಡ್‌ನಲ್ಲಿ ಶಾಶ್ವತವಾಗಿ ಬಾಗಿಲು ಬಂದಾಯ್ತು. ಅಷ್ಟರಲ್ಲಿ 2010 ಬಂದಿತ್ತು. ಅಲ್ಲೊಂದು ಟ್ರಾಜಿಡಿ ಆಸಿನ್ ಪಾಲಿಗೆ ಕಾದು ಕುಳಿತಿತ್ತು. ಅದು.. 

ಆಸಿನ್‌ಗೆ ಮುಳುವಾಗಿದ್ದು ಐಫಾ (2010) ಚಲನಚಿತ್ರ ಸಮಾರಂಭ. ಅದು ಶ್ರೀಲಂಕಾದಲ್ಲಿ ನಡೆದಿತ್ತು. ಆ ವೇಳೆ ತಮಿಳಿಗರಿಗೂ ಹಾಗೂ ಲಂಕಾಗೂ ತೀವ್ರ ಮನಸ್ತಾಪ ಇತ್ತು. ಅದನ್ನು ಕೇರ್ ಮಾಡದೇ ಶ್ರೀಲಂಕಾಗೆ ಹೋಗಿ ಭಾಗಿಯಾದ ನಟಿ ಆಸಿನ್‌ರನ್ನು ತಮಿಳು ಚಿತ್ರರಂಗ ಬ್ಯಾನ್ ಮಾಡಿತು. ತೆಲುಗಿನಲ್ಲಿ ಅವಕಾಶ ಕಡಿಮೆ ಆಯ್ತು. ಆದರೆ ಆಸಿನ್‌ಗೆ ಬಾಲಿವುಡ್‌ನಲ್ಲಿ ಬೇಕಾದಷ್ಟು ಆಫರ್ ಇತ್ತು. ಅಕ್ಷಯ್ ಕುಮಾರ್ ಹಾಗೂ ಸಲ್ಮಾನ್ ಖಾನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದರು ಆಸಿನ್. 

ಚಿಕ್ಕಣ್ಣನ ದೊಡ್ಡ ಸೀಕ್ರೆಟ್ ಮ್ಯಾಟರ್ ಲೀಕ್ ಆಗೋಯ್ತು, ಈ 'ಲಕ್ಷ್ಮೀ ಪುತ್ರ'ನ ಭವಿಷ್ಯವೇನು?

ಬಳಿಕ ಆಸಿನ್ ನಟ ಸಲ್ಮಾನ್ ಖಾನ್ ಹಾಗು ಅಕ್ಷಯ್ ಕುಮಾರರ್ ಜೊತೆ ನಟಿಸಿ, ಬಾಲಿವುಡ್‌ನಲ್ಲಿ ಸ್ಟಾರ್ ನಟಿಯಾದ್ರು. ಆದ್ರೆ ಮೇಲೇರಿದವರು ಕೆಳಗೆ ಇಳಿಯಲೇಬೇಕು ಎಂಬಂತೆ, ನಿತಿನ್ ಮಾತು ನಟಿ ಆಸಿನ್‌ಗೆ ಮುಳುವಾಯ್ತು. ಅದೇ ವೇಳೆ, 'ಸಲ್ಮಾನ್ ಖಾನ್ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ.. ನಾನು ಅವರಿಂದ ಯಾವುದೇ ಸಹಾಯ ಪಡೆದಿಲ್ಲ. ನಾನು ಸ್ವಂತ ಪ್ರತಿಭೆ ಮೇಲೆ ಬೆಳದಿದ್ದೇನೆ' ಎಂದು ಆಸಿನ್ ಹೇಳಿಕೆ ಕೊಟ್ಟರು. ಅದರಿಂದ ನಟ ಸಲ್ಲೂ ಕೂಡ ದೂರವಾದ್ರು. 

ತೆಲುಗಿನಲ್ಲಿ ರವಿತೇಜ, ಜಯಂ ರವಿ, ಸೇರಿದಂತೆ ಸ್ಟಾರ್‌ಗಳ ಜೊತೆ ನಟಿಸಿದ್ದ ನಟಿ ಆಸಿನ್ ತಮಿಳಿನಲ್ಲಿ ವಿಜಯ್, ಕಮಲ್ ಹಾಸನ್, ಸೂರ್ಯ, ಅಜಿತ್ ಹೀಗೆ ಬಹುತೇಕ ಎಲ್ಲಾ ಸ್ಟಾರ್‌ ನಟರ ಜೊತೆ ಅಭಿನಯಿಸಿದ್ದಾರೆ. 2008ರಲ್ಲಿ ಘಜನಿ ಎಂಬ ತಮಿಳು ರೀಮೇಕ್ ಬಾಲಿವುಡ್ ಚಿತ್ರದಲ್ಲೂ ನಟಿ ಆಸಿನ್ ನಟಿಸಿ ಬಾಲಿವುಡ್‌ಗೆ ಕಾಲಿಟ್ಟರು. 2009ರಲ್ಲಿ 'ಲಂಡನ್‌ ಡ್ರಿಂಕ್ಸ್' ಬಾಲಿವುಡ್ ಚಿತ್ರದಲ್ಲಿ ಆಸಿನ್ ನಟ ಸಲ್ಮಾನ್ ಖಾನ್ ಹಾಗೂ ಅಜಯ್ ದೇವಗನ್ ಜೊತೆ ನಟಿಸಿದ್ದಾರೆ. 

Actress Asin Tragedy: ಆಸಿನ್ ದುರಂತ ಕಥೆ- ತಮಿಳಿನಿಂದ ಬ್ಯಾನ್, ಹಿಂದಿಯಿಂದ ರಿಜೆಕ್ಟ್!.. ಈಗೆಲ್ಲಿದಾರೆ?

ಸೈಬೋ ಮಲಾಬರ್‌ನ ಕ್ಯಾಥೋಲಿಕ್ ಸಮುದಾಯದ ಹುಡುಗಿ, ಕೇರಳದ ಕೊಚ್ಚಿಯಲ್ಲಿ ಜನಿಸಿದವರು ಆಸಿನ್. ತಂದೆ ಬಿಸಿನೆಸ್‌ಮ್ಯಾನ್, ತಾಯಿ ಸರ್ಜನ್. ಈ ಆಸಿನ್ ಭಾಷೆಗಳನ್ನು ಬೇಗ ಕಲಿಯುವ ಜಾಣ್ಮೆ ಹೊಂದಿದ್ದರು, ಏಳು ಭಾಷೆಗಳಲ್ಲಿ ನಿರಾಯಾಸವಾಗಿ ಮಾತನಾಡುತ್ತಿದ್ದರು. ಮೊಟ್ಟಮೊದಲ ಸಿನಿಮಾದಲ್ಲಿ ನಟಿಸಿದಾಗ ಆಸಿನ್‌ಗೆ ಕೇವಲ 15 ರಿಂದ 16 ವರ್ಷ. ಆ ಸಿನಿಮಾ ಗೆಲ್ಲಲೀ ಬಿಡಲೀ ತಾನು ಆ ಬಳಿಕ ಸಿವಿಲ್ ಪರೀಕ್ಷೆ ಬರೆದು ಸರ್ಕಾರಿ ಅಧಿಕಾರಿಯಾಗಬೇಕೆಂದು ಆಸೆ ಪಟ್ಟಿದ್ದರು. ಆದರೆ ಆಗಿದ್ದೇ ಬೇರೆ, ದೊಡ್ಡ ಸಿನಿಮಾ ಸ್ಟಾರ್ ಆದ್ರು...! 

ನಟಿ ಅಸಿನ್‌ಗೆ 2016ರಲ್ಲಿ ಮದುವೆ ಆಯ್ತು. ರಾಹುಲ್ ಎಂಬ ಉದ್ಯಮಿ ಜೊತೆ ಲವ್ ಮ್ಯಾರೇಜ್ ಮ್ಯಾರೇಜ್ ಮಾಡಿಕೊಂಡು ಈಗ ಸುಖವಾಗಿದ್ದಾರೆ. ಆದರೆ ಅವರು ನಟಿಸಿದ ಘಜನಿ, ಶಿವಕಾಶಿ, ಪೋಕಿರಿ, ವೇಲಂ, ದಶಾವತಾರಂ ಹೀಗೆ ಸಾಕಷ್ಟು ಸಿನಿಮಾಗಳು ಅವರನ್ನು ಎಂದೂ ಯಾರೂ ಮರೆಯಲಾಗದಂತೆ ಮಾಡಿವೆ. ಈಗವರು ಇರೋದು ಕೇರಳದಲ್ಲಿ. ಆದರೆ, ಅವರ ಗಂಡ ದೊಡ್ಡ ಉದ್ಯಮಿ. ಈಗ ಕೇರಳ, ಹೈದ್ರಾಬಾದ್, ಮುಂಬೈ ಹಾಗೂ ಚೆನ್ನೈ ಎಲ್ಲಾ ಕಡೆ ಆಸಿನ್ ಫ್ಯಾಮಿಲಿ ಬಿಸನೆಸ್ ಜೋರಾಗಯೇ ನಡಿತಿದೆ. ಸದ್ಯ ಸುಖ-ಸಂಸಾರದಲ್ಲಿ ಇದ್ದಾರೆ ಆಸಿನ್.

Julie Lakshmi: ತೆಲುಗಿನ ಆ ನಟ ಓಡಿಬಂದು ಜಯಂತಿ ಕೆನ್ನೆಗೆ ಜೋರಾಗಿ ಬಾರಿಸಿದ್ದ..!