* ಕನ್ನಡ ಭಾಷೆಗೆ ಅವಮಾನ ಮಾಡಿದ ಬೆನ್ನಲ್ಲೇ ಗೂಗಲ್ ಮತ್ತೊಂದು ಎಡವಟ್ಟು* ಕನ್ನಡದ ವರನಟ ಡಾ. ರಾಜ್‌ಗೆ ಅಪಮಾನ* ವಿಕ್ರಂ ವೇದಾ ಕಾಫ್‌ ಬಾಯ್ಲ್ಡ್ ಹುಡುಕಿದ್ರೆ ಡಾ. ರಾಜ್ ಫೋಟೋ

ಬೆಂಗಳೂರು(ಜೂ.22): ಭಾರತದ ಕೊಳಕು ಭಾಷೆ ಯಾವುದೆಂದು ಹುಡುಕಿದರೆ ಕನ್ನಡ ಎಂದು ತೋರಿಸಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿ ಬಳಿಕ ಕ್ಷಮೆ ಯಾಚಿಸಿದ್ದ ಗೂಗಲ್ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಗೂಗಲ್‌ ಬೆನ್ನಲ್ಲೇ ಅಮೇಜಾನ್ ಉದ್ಧಟತನ, ಮಹಿಳೆಯರ ಒಳ ಉಡುಪಿನಲ್ಲಿ ಕನ್ನಡ ಧ್ವಜ!

ಮಾಧವನ್ ಹಾಗೂ ವಿಜಯ್ ಸೇತುಪತಿ ನಟಿಸಿದ್ದ ತಮಿಳಿನ ವಿಕ್ರಮ್ ವೇದಾ ಸಿನಿಮಾದಲ್ಲಿ ನಟಿಸಿರುವ ರಾಜ್‌ಕುಮಾರ್ ಎಂಬ ನಟನ ಬದಲಾಗಿ ಕನ್ನಡದ ವರನಟ ಡಾ| ರಾಜ್‌ಕುಮಾರ್ ಫೋಟೋವನ್ನು ಗೂಗಲ್ ತೋರಿಸುತ್ತಿದೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಚಿತ್ರದಲ್ಲಿ ರಾಜ್‌ಕುಮಾರ್‌ ನಟಿಸಿರುವ ಪಾತ್ರದ ಹೆಸರು ಹಾಫ್‌ ಬಾಯ್ಲ್ಡ್‌. ಹೀಗಾಗಿ ಹೀಗಾಗಿ ಗೂಗಲ್ ವೆಬ್ ಸರ್ಚ್‌ನಲ್ಲಿ ಕಾಸ್ಟ್‌ ಆಫ್‌ ವಿಕ್ರಮ್ ವೇದಾ ಹಾಫ್‌ ಬಾಯ್ಲ್ಡ್‌ ಎಂದು ಟೈಪ್ ಮಾಡಿದರೆ ಚಿತ್ರದ ಲ್ಯಾಂಡಿಂಗ್ ಪೇಜ್‌ನಲ್ಲಿ ಕನ್ನಡದ ವರನಟ ರಾಜ್‌ಕುಮಾರ್ ಅವರ ಫೋಟೋ ತೋರಿಸುತ್ತಿದೆ.

ಕನ್ನಡಿಗರ ಕ್ಷಮೆಯಾಚಿಸಿದ ಗೂಗಲ್, ಇನ್ನುಮುಂದೆ ಹೀಗಾಗಲ್ಲ

ಹಾಫ್‌ ಬಾಯ್ಲ್ಡ್‌ ಎಂದರೆ ಅರೆಬೆಂದ ಎಂದು ಅರ್ಥ ಇರುವ ಕಾರಣ, ಆ ಆರೀತಿಯ ಪದಕ್ಕೆ ರಾಜ್‌ಕುಮಾರ್ ಪೋಟೋ ತೋರಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗೂಗಲ್ ಸಂಸ್ಥೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.